Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಆರ್‌ಸಿಬಿ ಅಭ್ಯಾಸದ ಬಗ್ಗೆ ಸಂತಸ ವ್ಯಕ್ತಪಡಿಸಿದ ಕನ್ನಡಿಗ ದೇವದತ್ ಪಡಿಕ್ಕಲ್

Ipl 2020: Rcb Training Has Been Great, Slowly Getting Back Into It: Devdutt Padikkal

ದೇಶಿಯ ಕ್ರಿಕೆಟ್‌ನಲ್ಲಿ ಮಿಂಚಿ ಹರಿಸಿದ ಯುವ ಆಟಗಾರ ಕನ್ನಡಿಗ ದೇವದತ್ ಪಡಿಕ್ಕಲ್ ದೊಡ್ಡ ವೇದಿಕೆಯಲ್ಲಿ ದಿಗ್ಗಜ ಆಟಗಾರರೊಂದಿಗೆ ಕಣಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. ಆರ್‌ಸಿಬಿ ತಂಡದಲ್ಲಿ ವಿಕಾರ್ ಕೊಹ್ಲಿ ಎಬಿ ಡಿವಿಲಿಯರ್ಸ್ ಆರೋನ್ ಫಿಂಚ್ ಅವರಂತಾ ಆಟಗಾರರ ಜೊತೆಗೆ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿರುವ ದೇವದತ್ ಪಡಿಕ್ಕಲ್ ಈ ಬಾರಿಯ ಐಪಿಎಲ್‌ನಲ್ಲಿ ತನ್ನ ಸಾಮರ್ಥ್ಯವನನ್ನು ಪ್ರದರ್ಶಿಸಲು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಸುದೀರ್ಘ ವಿರಾಮದ ನಂತರ ಈಗ ಸಾಕಷ್ಟು ಅಭ್ಯಾಸವನ್ನು ನಡೆಸಿದ್ದು ಆಟಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆರ್‌ಸಿಬಿ ತಂಡದ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪಡಿಕ್ಕಲ್ ತರಬೇತಿಯ ಅನುಭವವನ್ನು ವಿವರಿಸಿದ್ದಾರೆ.

ಈವರೆಗೂ ತರಬೇತಿ ನಿಜಕ್ಕೂ ಅದ್ಭುತ ರೀತಿಯಲ್ಲಿ ನಡೆಯುತ್ತಿದೆ. ಈಗ ಲಾಕ್‌ಡೌನ್‌ನ ಹಿಂದೆ ಇದ್ದ ಹಾಗೆ ಕ್ರಿಕೆಟ್‌ಗೆ ಸಂಪೂರ್ಣವಾಗಿ ಮರಳಿದಂತೆ ಭಾಸವಾಗುತ್ತಿದೆ. ನಾವು ಗುಣಮಟ್ಟದ ಅಭ್ಯಾಸವನ್ನು ನಡೆಸಿದ್ದೇವೆ, ನಾವು ಅಂದುಕೊಂಡದ್ದನ್ನು ಸಾಧಿಸಲು ಇದು ಸಹಕಾರಿಯಾಗಲಿದೆ ಎಂದು ದೇವದತ್ ಪಡಿಕ್ಕಲ್ ಹೇಳಿದ್ದಾರೆ.

ಕಳೆದ ಕ್ರಕೆಟ್ ಋತುವಿನಲ್ಲಿ ದೇಶಿಯ ಕ್ರಿಕೆಟ್‌ನಲ್ಲಿ ಪಡಿಕ್ಕಲ್ ಕರ್ನಾಟಕ ತಮಡದ ಪರವಾಗಿ ಅದ್ಭುತ ಆಟವನ್ನು ಪ್ರದರ್ಶಿಸಿದ್ದರು. 50 ಓವರ್‌ಗಳ ಟೂರ್ನಿ ವಿಜಯ್ ಹಝಾರೆ ಟ್ರೋಫಿ ಹಾಗೂ ಟಿ20 ಟೂರ್ನಿ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಎರಡು ಟೂರ್ನಿಯಲ್ಲೂ ಪಡಿಕ್ಕಲ್ ಟಾಪ್ ಸ್ಕೋರರ್ ಆಗಿ ಮಿಂಚಿದ್ದರು.

ಈ ಬಾರಿಯ ಐಪಿಎಲ್‌ನಲ್ಲಿ 20 ವರ್ಷದ ಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್ ಹಾಗೂ ಆರೋನ್ ಫಿಂಚ್ ಜೊತೆಗೆ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಆರ್‌ಸಿಬಿ ತಂಡದ ಅಭ್ಯಾಸ ಶಿಬಿರದ ಸಂದರ್ಭದಲ್ಲಿ ಪಡಿಕ್ಕಲ್ ನಾಯಕ ವಿರಾಟ್ ಕೊಹ್ಲಿ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Story first published: Tuesday, September 15, 2020, 15:52 [IST]
Other articles published on Sep 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+