For Quick Alerts
ALLOW NOTIFICATIONS  
For Daily Alerts
 

ಬೆಂಗಳೂರು vs ಚೆನ್ನೈ, ಕಣಕ್ಕಿಳಿಯುವ ಸಂಭಾವ್ಯ ಆಟಗಾರರು, ಪಿಚ್ ವರದಿ

IPL 2020: RCB vs CSK, Match 25, Preview, Predicted Playing 11, Pitch Report, Toss Timing, Weather Report

ದುಬೈ: ಕಳೆದ ಬಾರಿಯ ರನ್ನರ್ಸ್ ಚೆನ್ನೈ ಸೂಪರ್ ಕಿಂಗ್ಸ್, ಶನಿವಾರ (ಅಕ್ಟೋಬರ್ 10) ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 25ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರುಗೊಳ್ಳಲಿದೆ.

ಒಟ್ಟು 6 ಪಂದ್ಯಗಳನ್ನಾಡಿರುವ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 2 ಪಂದ್ಯಗಳನ್ನು ಗೆದ್ದು ಅಂಕಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಆಡಿದ 5ರಲ್ಲಿ 3 ಗೆಲುವುಗಳನ್ನು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯದ ಗೆಲುವು ಚೆನ್ನೈಗೆ ಬಹಳ ಮುಖ್ಯವಾಗಿದೆ.

ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ನಡೆಯುವ ದುಬೈ ಸ್ಟೇಡಿಯಂನಲ್ಲಿ ಶನಿವಾರ 33 ಡಿಗ್ರೀ ಸೆಲ್ಶಿಯಸ್ ಇರಲಿದೆ. ತೇವದ ಪ್ರಮಾಣ 45% ಇರಲಿದೆ. ಈ ಸ್ಟೇಡಿಯಂ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲ ಮಾಡಿಕೊಡಲಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ 170-175 ಒಟ್ಟು ರನ್ ಗಳಿಸಿದರೆ ಒಳ್ಳೆಯ ಟೋಟಲ್ ಎನಿಸಲಿದೆ. ಪಂದ್ಯ 7.30 pmಗೆ ಆರಂಭವಾಗಲಿದ್ದು 7 pmಗೆ ಟಾಸ್ ನಡೆಯಲಿದೆ.

ಚೆನ್ನೈ ಸಂಭಾವ್ಯ ತಂಡ: ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂ.ಎಸ್.ಧೋನಿ (ಸಿ, ವಿಕೆ), ಸ್ಯಾಮ್ ಕರನ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಕರ್ಣ್ ಶರ್ಮಾ.

ಬೆಂಗಳೂರು ಸಂಭಾವ್ಯ ತಂಡ: ಆ್ಯರನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ಸಿ), ಎಬಿ ಡಿವಿಲಿಯರ್ಸ್ (ವಿಕೆ), ಕ್ರಿಸ್ ಮೋರಿಸ್, ಶಿವಮ್ ದೂಬೆ, ವಾಷಿಂಗ್ಟನ್ ಸುಂದರ್, ಇಸುರು ಉದಾನಾ/ ಆ್ಯಡಮ್ ಜಂಪಾ, ಗುರ್ಕೀರತ್ ಸಿಂಗ್ ಮನ್/ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್.

Story first published: Saturday, October 10, 2020, 13:25 [IST]
Other articles published on Oct 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+