ರುತುರಾಜ್ ಗಾಯಕ್ವಾಡ್ ಅರ್ಧಶತಕ, ಆರ್‌ಸಿಬಿ ವಿರುದ್ಧ ಸಿಎಸ್‌ಕೆಗೆ ಜಯ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 44ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್‌ಗಳ ಭರ್ಜರಿ ಗೆಲುವನ್ನಾಚರಿಸಿದೆ. ರುತುರಾಜ್ ಗಾಯಕ್ವಾಡ್ ಅರ್ಧಶತಕದ ಕೊಡುಗೆಯೊಂದಿಗೆ ಚೆನ್ನೈ ಟೂರ್ನಿಯ 4ನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಸಿಎಸ್‌ಕೆಯ ಪ್ಲೇ ಆಫ್ ಆಸೆ ಇನ್ನೂ ಜೀವಂತವಾಗಿದೆ.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ದುಕೊಂಡಿತ್ತು. ದೇವದತ್ ಪಡಿಕ್ಕಲ್ 22, ಆ್ಯರನ್ ಫಿಂಚ್ 15, ವಿರಾಟ್ ಕೊಹ್ಲಿ 50 (43 ಎಸೆತ), ಎಬಿ ಡಿ ವಿಲಿಯರ್ಸ್ 39 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 145 ರನ್ ಬಾರಿಸಿತ್ತು.
ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ರುತುರಾಜ್ ಗಾಯಕ್ವಾಡ್ 65 (51 ಎಸೆತ), ಫಾಫ್ ಡು ಪ್ಲೆಸಿಸ್ 25, ಅಂಬಾಟಿ ರಾಯುಡು 39, ಎಂಎಸ್ ಧೋನಿ 19 ರನ್‌ನೊಂದಿಗೆ 18.4ನೇ ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 150 ರನ್ ಗಳಿಸಿ ಗೆಲುವನ್ನಾಚರಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ದೀಪಕ್ ಚಹಾರ್ 2, ಸ್ಯಾಮ್ ಕರನ್ 3, ಮಿಚೆಲ್ ಸ್ಯಾಂಟ್ನರ್ 1 ವಿಕೆಟ್ ಪಡೆದರೆ, ಚೆನ್ನೈ ಇನ್ನಿಂಗ್ಸ್‌ನಲ್ಲಿ ಆರ್‌ಸಿಬಿಯ ಕ್ರಿಸ್ ಮೋರಿಸ್ 1, ಯುಜುವೇಂದ್ರ ಚಾಹಲ್ 1 ವಿಕೆಟ್‌ನಿಂದ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications