
ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಸೋಮವಾರ (ಅಕ್ಟೋಬರ್ 5) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ 59 ರನ್ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಆರ್‌ಸಿಬಿ ತಂಡ ನೆಟ್ ರನ್‌ರೇಟ್ (-1.355) ವಿಚಾರದಲ್ಲಿ ಮತ್ತೆ ಕುಸಿತ ಕಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಪೃಥ್ವಿ ಶಾ 42 (23 ಎಸೆತ), ಶಿಖರ್ ಧವನ್ 32, ಶ್ರೇಯಸ್ ಐಯ್ಯರ್ 11, ರಿಶಭ್ ಪಂತ್ 37, ಮಾರ್ಕಸ್ ಸ್ಟೋಯ್ನಿಸ್ 53 (26 ಎಸೆತ), ಶಿಮ್ರನ್ ಹೆಟ್ಮೈರ್ 11 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 196 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀರಸ ಬ್ಯಾಟಿಂಗ್ ಪ್ರದರ್ಶಿಸಿತು. ಆ್ಯರನ್ ಫಿಂಚ್ 13, ವಿರಾಟ್ ಕೊಹ್ಲಿ 43, ಎಬಿ ಡಿ ವಿಲಿಯರ್ಸ್ 9, ಮೊಯೀನ್ ಅಲಿ 11, ವಾಷಿಂಗ್ಟನ್ ಸುಂದರ್ 17, ಶಿವಂ ದೂಬೆ 11, ನವದೀಪ್ ಸೈನಿ 12 ರನ್ ಕೊಡುಗೆಯಿಂದ ಆರ್‌ಸಿಬಿ 20 ಓವರ್ ಮುಕ್ತಾಯಕ್ಕೆ 9 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತು.
ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಬೆಂಗಳೂರಿನ ಇಸುರು ಉದಾನ 1, ಮೊಹಮ್ಮದ್ ಸಿರಾಜ್ 2, ಮೊಯೀನ್ ಅಲಿ 1 ವಿಕೆಟ್ ಪಡೆದರೆ, ಬೆಂಗಳೂರು ಇನ್ನಿಂಗ್ಸ್‌ನಲ್ಲಿ ಡೆಲ್ಲಿಯ ಕಾಗಿಸೊ ರಬಾಡ 4, ಅನ್ರಿಚ್ ನಾರ್ಟ್ಜೆ 2, ರವಿಚಂದ್ರನ್ ಅಶ್ವಿನ್ 1, ಅಕ್ಸರ್ ಪಟೇಲ್ 2 ವಿಕೆಟ್‌ನಿಂದ ಗಮನ ಸೆಳೆದರು.