ಐಪಿಎಲ್ 2020: ಆರ್‌ಸಿಬಿ vs ಕೆಕೆಆರ್ ಸವಾಲು, ಹೇಗಿದೆ ಹೆಡ್-ಟು-ಹೆಡ್ ದಾಖಲೆ?

ಐಪಿಎಲ್ ಟೂರ್ನಿ ಕುತೂಹಲಕಾರಿ ಘಟ್ಟಕ್ಕೆ ತಲುಪುತ್ತಿದ್ದಂತೆಯೇ ಮತ್ತಷ್ಟು ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ಬಹುತೇಕ ತಂಡಗಳಿಗೆ ಇನ್ನೂ ಕೂಡ ಪ್ಲೇ ಆಫ್ ಹಂತಕ್ಕೇರುವ ಅವಕಾಶಗಳು ಮುಂದಿದೆ. ಹಾಗಾಗಿ ಭಾರೀ ಜಿದ್ದಾಜಿದ್ದಿನ ಕಾದಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡಕ್ಕೆ ಕೆಕೆಆರ್ ಇಂದು ಸವಾಲೊಡ್ಡುತ್ತಿದೆ.
ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಹಾಗೂ ಇಯಾನ್ ಮಾರ್ಗನ್ ನೇತೃತ್ವದ ಕೊಲ್ಕತಾ ನೈಟ್ ರೈಡರ್ಸ್ ತಂಡಗಳು ಈ ಐಪಿಎಲ್ ಆವೃತ್ತಿಯ 39ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಈ ಕಾದಾಟಕ್ಕೆ ಅಬುಧಾಬಿಯ ಶೇಕ್ ಝಾಯೇದ್ ಕ್ರೀಡಾಂಗಣ ವೇದಿಕೆಯಾಗಿದೆ.

ಸೋಲು ಗೆಲುವಿನ ಅನುಪಾತ
ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ಹಾಗೂ ಆರ್‌ಸಿಬಿ ತಂಡಗಳು ಒಟ್ಟಾರೆಯಾಗಿ 25 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 14 ಪಂದ್ಯಗಳನ್ನು ಗೆದ್ದಿರುವ ಕೆಕೆಆರ್ ಮುನ್ನಡೆ ಪಡೆದುಕೊಂಡಿದ್ದರೆ ಆರ್‌ಸಿಬಿ 11 ಪಂದ್ಯಗಳಲ್ಲಿ ಗೆದ್ದುಕೊಂಡಿದೆ.

ಮೊದಲ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು
ಈ ಬಾರಿಯ ಐಪಿಎಲ್‌ನ ಆರಂಭಿಕ ಹಂತದಲ್ಲಿ ಈ ಎರಡು ತಂಡಗಳು ಮೊದಲ ಬಾರಿಗೆ ಶಾರ್ಜಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೆಕೆಆರ್ ತಂಡಕ್ಕೆ 82 ರನ್‌ಗಳ ಭರ್ಜರಿ ಅಂತರದ ಸೋಲಿನ ರುಚಿ ನೀಡಿತ್ತು. ಈ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ 33 ಎಸೆತಗಳಲ್ಲಿ 73 ರನ್ ಬಾರಿಸಿ ಮಿಂಚಿದ್ದರು. ಮೊದಲಿಗೆ ಬ್ಯಾಟ್ ಮಾಡಿದ್ದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 194/2 ರನ್ ಗಳಿಸಿದ್ದರೆ ಕೆಕೆಆರ್ 112/9 ರನ್‌ಗಳಿಸಿ ಹೀನಾಯವಾಗಿ ಶರಣಾಗಿತ್ತು.

ಅಂಕಪಟ್ಟಿಯಲ್ಲಿನ ಸ್ಥಾನಗಳು
ಆರ್‌ಸಿಬಿ ಈವರೆಗಿನ ಹೋರಾಟದಲ್ಲಿ 9 ಪಂದ್ಯಗಳನ್ನು ಆಡಿದ್ದು 3ನೇ ಸ್ಥಾನವನ್ನು ಅಲಂಕರಿಸಿದೆ. ಆರು ಗೆಲುವು ಹಾಗೂ 3 ಸೋಲನ್ನು ಕಂಡಿರುವ ಆರ್‌ಸಿಬಿ 12 ಅಂಕಗಳನ್ನು ಖಾತೆಯಲ್ಲಿಟ್ಟುಕೊಂಡಿದೆ. ಇನ್ನು ಕೆಕೆಆರ್ ನಾಲ್ಕನೇ ಸ್ಥಾನದಲ್ಲಿದ್ದು 9 ಪಂದ್ಯ ಗಳಲ್ಲಿ 10 ಅಂಕಗಳನ್ನು ಗಳಿಸಿಕೊಂಡಿದೆ. ಐದು ಗೆಲುವು ಹಾಗೂ ನಾಲ್ಕು ಸೋಲನ್ನು ಕೆಕೆಆರ್ ಕಂಡಿದೆ.

ಐದು ಪಂದ್ಯಗಳ ಸೋಲು ಗೆಲುವಿನ ಅನುಪಾತ
ಇನ್ನು ಇದೇ ಸಂದರ್ಭದಲ್ಲಿ ಈ ಬಾರಿಯ ಟೂರ್ನಿಯಲ್ಲಿ ಈ ಎರಡು ತಂಡಗಳ ಕೊನೆಯ ಐದು ಪಂದ್ಯಗಳಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದೆ ಎಂಬುದನ್ನು ಗಮನಿಸುವುದಾದರೆ, ಕೆಕೆಆರ್ ತಂಡಗ ಕಳೆದ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದರೆ ಎರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಮತ್ತೊಂದೆಡೆ ಆರ್‌ಸಿಬಿ ಕೂಡ ಆಡಿದ ಅಂತಿಮ ಐದು ಪಂದ್ಯಗಳಲ್ಲಿ ಮೂರು ಗೆದ್ದಿದ್ದರೆ ಎರಡು ಪಂದ್ಯಗಳಲ್ಲಿ ಸೋಲಿನ ರುಚಿ ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications