
ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಬ್ಯಾಟ್ಸ್‌ಮನ್‌ಗಳ ನೆಚ್ಚಿನ ತಾಣ ಶಾರ್ಜಾ ಸ್ಟೇಡಿಯಂನಲ್ಲಿ ಸೋಮವಾರ (ಅಕ್ಟೊಬರ್ 12) ಈ ಪಂದ್ಯ ನಡೆಯಲಿದೆ.
ಆರರಲ್ಲಿ 4 ಪಂದ್ಯಗಳನ್ನು ಗೆದ್ದು ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಆರರಲ್ಲಿ ನಾಲ್ಕು ಗೆಲುವಿನೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಮುಂದಾಳತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಕದನ ಕುತೂಹಲ ಮೂಡಿಸಿದೆ.
ಇತ್ತಂಡಗಳಲ್ಲಿ ಕೆಕೆಆರ್ +0.017 ನೆಟ್ ರನ್‌ರೇಟ್ ಹೊಂದಿದ್ದರೆ, ಆರ್‌ಸಿಬಿ -0.820 ನೆಟ್ ರನ್‌ರೇಟ್ ಹೊಂದಿದೆ. ಇತ್ತಂಡಗಳ ಹಿಂದಿನ ಮುಖಾಮುಖಿ ಗಮನಿಸಿದರೆ ಕೋಲ್ಕತ್ತಾವೇ ಸ್ವಲ್ಪ ಬಲಿಷ್ಠ ತಂಡವಾಗಿ ಕಾಣಿಸಿದೆ. ಆಡಿದ್ದ 25 ಪಂದ್ಯಗಳಲ್ಲಿ 15ರಲ್ಲಿ ಕೆಕೆಆರ್ ಗೆದ್ದಿತ್ತು. 7.30 pmಗೆ ಪಂದ್ಯ ನಡೆಯಲಿದ್ದು, 7 pmಗೆ ಟಾಸ್ ನಡೆಯಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯ ಅಂಕಿ-ಅಂಶಗಳು
* ಆರ್‌ಸಿಬಿ ಗೆದ್ದ ಪಂದ್ಯಗಳು: 10
* ಕೆಕೆಆರ್ ಗೆದ್ದ ಪಂದ್ಯಗಳು: 15
* ಕೆಕೆಆರ್ ವಿರುದ್ಧ ಆರ್‌ಸಿಬಿ ಸರಾಸರಿ ಸ್ಕೋರ್: 151
* ಆರ್‌ಸಿಬಿ ವಿರುದ್ಧ ಕೆಕೆಆರ್ ಸರಾಸರಿ ಸ್ಕೋರ್: 163
* ಆರ್‌ಸಿಬಿಗೆ ಹೆಚ್ಚಿನ ರನ್: 674 (ವಿರಾಟ್ ಕೊಹ್ಲಿ)
* ಕೆಕೆಆರ್‌ಗೆ ಹೆಚ್ಚಿನ ರನ್: 292 (ಆಂಡ್ರೆ ರಸ್ಸೆಲ್)
* ಆರ್‌ಸಿಬಿಗೆ ಹೆಚ್ಚಿನ ವಿಕೆಟ್‌ಗಳು: 11 (ಯುಜ್ವೇಂದ್ರ ಚಾಹಲ್)
* ಕೆಕೆಆರ್‌ಗೆ ಹೆಚ್ಚಿನ ವಿಕೆಟ್‌ಗಳು: 16 (ಸುನಿಲ್ ನರೈನ್)
* ಆರ್‌ಸಿಬಿಗೆ ಹೆಚ್ಚಿನ ಕ್ಯಾಚ್‌ಗಳು: 14 (ವಿರಾಟ್ ಕೊಹ್ಲಿ)
* ಕೆಕೆಆರ್‌ಗೆ ಹೆಚ್ಚಿನ ಕ್ಯಾಚ್‌ಗಳು: 4 (ಆಂಡ್ರೆ ರಸ್ಸೆಲ್)