For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಆರ್‌ಸಿಬಿ vs ಕೆಕೆಆರ್, ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್

IPL 2020: RCB vs KKR March 28 Preview, Predicted Playing 11, Pitch Report, Toss Timing, Weather Forecast

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ (ಅಕ್ಟೋಬರ್ 11) ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 28ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ. ಪಂದ್ಯ 7.30 pmಗೆ ಆರಂಭವಾಗಲಿದ್ದು, ಟಾಸ್ 7 pmಗೆ ನಡೆಯಲಿದೆ.

ಈವರೆಗೆ ಆಡಿರುವ 6 ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 4 ಗೆಲುವುಗಳೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ರಾಯಲ್ಸ್ ಚಾಲೆಂಜರ್ಸ್ ತಂಡ ಕೂಡ 6ರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ನೆಟ್ ರನ್‌ ರೇಟ್ ಆಧಾರದಲ್ಲಿ ಆರ್‌ಸಿಬಿ ತಂಡ ಕೆಕೆಆರ್‌ಗಿಂತ ಕೊಂಚ ಕೆಳ ಸ್ಥಾನದಲ್ಲಿದೆ.

ಇತ್ತಂಡಗಳ ಪಂದ್ಯ ನಡೆಯುವ ಸೋಮವಾರ ಶಾರ್ಜಾದಲ್ಲಿ 35-40 ಸೆಲ್ಶಿಯನ್ ತಾಪಮಾನ ಇರಲಿದೆ. ತೀವ್ರ ಶೆಖೆ ಆಟಗಾರರನ್ನು ಕಾಡಲಿದೆ. ಹಿಂದಿನ ಪಂದ್ಯಗಳಲ್ಲಿ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಮತ್ತು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಇಬ್ಬರೂ ಮೊದಲು ಬ್ಯಾಟಿಂಗ್ ಆರಿಸಿ ಪಂದ್ಯ ಗೆದ್ದಿದ್ದರು. ಶಾರ್ಜಾ ಬ್ಯಾಟಿಂಗ್ ಗ್ರೌಂಡ್ ಆಗಿರುವುದರಿಂದ ಟಾಸ್ ಗೆಲ್ಲುವವರು ಬೌಲಿಂಗ್ ಆರಿಸುವ ಸಾಧ್ಯತೆಯಿದೆ.

ಆರ್‌ಸಿಬಿ ಸಂಭಾವ್ಯ ತಂಡ: ದೇವದತ್ ಪಡಿಕ್ಕಲ್, ಆ್ಯರನ್ ಫಿಂಚ್, ವಿರಾಟ್ ಕೊಹ್ಲಿ (ಸಿ), ಎಬಿ ಡಿವಿಲಿಯರ್ಸ್ (ವಿಕೆ), ಶಿವಮ್ ದೂಬೆ, ಗುರ್ಕೀರತ್ ಸಿಂಗ್ ಮನ್, ಕ್ರಿಸ್ ಮೋರಿಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನಾ, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್.

ಕೆಕೆಆರ್ ಸಂಭಾವ್ಯ ತಂಡ: ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್ (ಸಿ & ಡಬ್ಲ್ಯೂಕೆ), ಆಂಡ್ರೆ ರಸ್ಸೆಲ್ *, ಸುನಿಲ್ ನರೈನ್ *, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ಪ್ರಸಾದ್ ಕೃಷ್ಣ, ವರುಣ್ ಚಕ್ರವರ್ತಿ.

Story first published: Monday, October 12, 2020, 13:23 [IST]
Other articles published on Oct 12, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+