Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಆರ್‌ಸಿಬಿಗಾಗಿ 150ನೇ ಇನ್ನಿಂಗ್ಸ್‌ ಆಡಲಿದ್ದಾರೆ ಎಬಿ ಡಿ ವಿಲಿಯರ್ಸ್

IPL 2020: RCB vs KXIP: Ab De Villiers to play 150th IPL match for Royal challengers bangalore today

ಶಾರ್ಜಾ: ಅಕ್ಟೋಬರ್ 15ರಂದು ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ XI ಪಂಜಾಬ್‌ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್ ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ವಿಶೇಷ ಮೈಲಿಗಲ್ಲು ಸ್ಥಾಪಿಸಲಿದ್ದಾರೆ.

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಕಿಂಗ್ಸ್ XI ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್ ಮೈದಾನಕ್ಕಿಳಿದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಬಿಡಿ ಒಟ್ಟು 150 ಇನ್ನಿಂಗ್ಸ್‌ಗಳನ್ನಾಡಿದಂತಾಗುತ್ತದೆ. ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಎಬಿಡಿ ಇಂಥದ್ದೊಂದು ಮೈಲಿಗಲ್ಲು ನಿರ್ಮಿಸಲಿದ್ದಾರೆ.

ಈವರೆಗೆ ಆಡಿರುವ 5 ಪಂದ್ಯಗಳಲ್ಲಿ 5ರಲ್ಲಿ ಜಯ ದಾಖಲಿಸಿರುವ ವಿರಾಟ್ ಕೊಹ್ಲಿ ಪಡೆ ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇತ್ತ ಕಿಂಗ್ಸ್ XI ಪಂಜಾಬ್ 7ರಲ್ಲಿ ಒಂದೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಅಂದ್ಹಾಗೆ ಪಂಜಾಬ್ ಗೆದ್ದಿದ್ದು ಇದೇ ಆರ್‌ಸಿಬಿ ವಿರುದ್ಧ. ಅದಾಗಿ ಕೆXIಪಿ ಒಂದೂ ಪಂದ್ಯ ಗೆದ್ದಿಲ್ಲ.

ಐಪಿಎಲ್‌ನಲ್ಲಿ ಒಟ್ಟು 149 ಇನ್ನಿಂಗ್ಸ್‌ಗಳನ್ನಾಡಿರುವ ಎಬಿಡಿ 40.55ರ ಸರಾಸರಿಯಲ್ಲಿ 4623 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ, 36 ಅರ್ಧ ಶತಕಗಳು ಸೇರಿವೆ. 377 ಫೋರ್ಸ್, 225 ಸಿಕ್ಸರ್‌ಗಳ ದಾಖಲೆಯೂ ಎಬಿಡಿ ಹೆಸರಿನಲ್ಲಿವೆ. ಐಪಿಎಲ್‌ನಲ್ಲಿ ಎಬಿಡಿ ಬಾರಿಸಿದ ಅತ್ಯಧಿಕ ರನ್ ಅಂದರೆ 133.

Story first published: Friday, October 16, 2020, 10:14 [IST]
Other articles published on Oct 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+