For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಬೆಂಗಳೂರು vs ಪಂಜಾಬ್, ಹೆಡ್ ಟು ಹೆಡ್ ದಾಖಲೆ ಹಾಗೂ ತಂಡಗಳ ಪ್ರದರ್ಶನ

IPL 2020: RCB vs KXIP head-to-head records and Players to Watch Out For

ಈ ಬಾರಿಯ ಟೂರ್ನಿಯಲ್ಲಿ ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗುತ್ತಿದೆ. ಎರಡು ತಂಡಗಳಿಗೂ ಇದು ಟೂರ್ನಿಯ ದ್ವಿಯಾರ್ಧದ ಮೊದಲ ಪಂದ್ಯವಾಗಿದೆ. ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರ್‌ಸಿಬಿಯನ್ನು ಭಾರೀ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗುತ್ತು. ಟೂರ್ನಿಯಲ್ಲಿ ಕೆಎಲ್ ರಾಹುಲ್ ನೇತೃತ್ವದ ತಂಡಕ್ಕೆ ದೊರೆತಿರುವ ಏಕಮಾತ್ರ ಗೆಲುವು ಇದಾಗಿದೆ.

ಈ ಎರಡು ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ 25 ಬಾರಿ ಹಣಾಹಣಿಯನ್ನು ನಡೆಸಿದ್ದು ಇದರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಸಣ್ಣ ಮುನ್ನಡೆಯನ್ನು ಪಡೆದುಕೊಂಡಿದೆ. 13 ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಗೆದ್ದಿದ್ದರೆ 12 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಇಂದಿನ ಪಂದ್ಯದಲ್ಲಿ ಗೆದ್ದು ಸಮಬಲ ಸಾಧಿಸುವ ಅವಕಾಶ ಆರ್‌ಸಿಬಿಗೆ ಇದೆ.

ಮೊದಲ ಮುಖಾಮುಖಿ

ಮೊದಲ ಮುಖಾಮುಖಿ

ಇದೇ ಟೂರ್ನಿಯಲ್ಲಿ ಮೊದಲ ಬಾರಿಗೆ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 206 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಬೃಹತ್ ಗುರಿಯನ್ನು ನೀಡಿತ್ತು. ಇದನ್ನು ಬೆನ್ನಟ್ಟಿದ್ದ ಆರ್‌ಸಿಬಿ ಕೇವಲ 109 ರನ್‌ಗಳಿಗೆ ಆಲೌಟ್ ಆಗುವ ಮೂಲಕ 97 ರನ್‌ಗಳ ಸೋಲುಕಂಡಿತ್ತು.

ಕಳೆದ ಐದು ಪಂದ್ಯಗಳ ಪ್ರದರ್ಶನ

ಕಳೆದ ಐದು ಪಂದ್ಯಗಳ ಪ್ರದರ್ಶನ

ಇನ್ನು ಈ ಬಾರಿಯ ಟೂರ್ನಿಯಲ್ಲಿ ಕಳೆದ ಐದು ಪಂದ್ಯಗಳ ಲೆಕ್ಕಾಚಾರವನ್ನು ಗಮನಿಸಿದಾಗ ಆರ್‌ಸಿಬಿ ಅತ್ಯಂತ ಉತ್ತಮ ಪ್ರದರ್ಶನವನ್ನು ನೀಡಿಕೊಂಡು ಬಂದಿದೆ. ನಾಲ್ಕು ಗೆಲುವನ್ನು ಕಂಡಿರುವ ಆರ್‌ಸಿಬಿ ಒಂದರಲ್ಲಿ ಮಾತ್ರವೇ ಸೋಲು ಕಂಡಿದೆ. ಆದರೆ ಇತ್ತ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಥಿತಿ ಮಾತ್ರ ಶೋಚನೀಯವಾಗಿದ್ದು ಕಳೆದ 5 ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳಲ್ಲೂ ಸೋಲನ್ನು ಮಾತ್ರವೇ ಸ್ವೀಕರಿಸಿದೆ.

ಅಂಕಪಟ್ಟಿಯಲ್ಲಿ ಹೇಗಿದೆ?

ಅಂಕಪಟ್ಟಿಯಲ್ಲಿ ಹೇಗಿದೆ?

ಟೂರ್ನಿಯಲ್ಲಿ ಏಳು ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಐದರಲ್ಲಿ ಗೆಲುವು ಕಂಡಿದ್ದು ಎರಡು ಪಂದ್ಯಗಳಲ್ಲಿ ಎದುರಾಳಿಗೆ ಶರಣಾಗಿದೆ. 10 ಅಂಕಗಳನ್ನು ಖಾತೆಯಲ್ಲಿಟ್ಟುಕೊಂಡಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಕಿಂಗ್ಸ ಇಲೆವೆನ್ ಪಂಜಾಬ್ ಅಂಕಪಟ್ಟಿಯಲ್ಲಿ ಪಾತಾಳ ಕಂಡಿದ್ದು 8ನೇ ಸ್ಥಾನದಲ್ಲಿದೆ. ಒಂದು ಗೆಲುವಷ್ಟೇ ಸಾಧಿಸಿರುವ ಕಾರಣ ಕೇವಲ 2 ಅಂಕಗಳು ಅದರ ಖಾತೆಯಲ್ಲಿದೆ.

ಉತ್ತಮ ಪ್ರದರ್ಶನ ನೀಡಿದ ಆಟಗಾರರು

ಉತ್ತಮ ಪ್ರದರ್ಶನ ನೀಡಿದ ಆಟಗಾರರು

ಆರ್‌ಸಿಬಿ ತಂಡದಲ್ಲಿ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಬ್ಯಾಟ್ಸ್‌ಮನ್ ಆಗಿ 256 ರನ್‌ಗಳಿಸಿರುವ ನಾಯಕ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ 243 ರನ್‌ಗಳಿಸಿರುವ ಪಡಿಕ್ಕಲ್ ಎರಡನೇ ಸ್ಥಾನದಲ್ಲಿದ್ದಾರೆ. 228 ರನ್‌ಗಳಿಸಿರುವ ಎಬಿ ಡಿವಿಲಿಯರ್ಸ್ 3ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಯುಜುವೇಂದ್ರ ಚಾಹಲ್ 10 ವಿಕೆಟ್, ಇಸುರು ಉದನ 7 ಹಾಗೂ ಸುಂದರ್ 5 ವಿಕೆಟ್ ಕಿತ್ತಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ 387 ರನ್‌ಗಳಿಸಿರುವ ಕೆಎಲ್ ರಾಹುಲ್ ಹಾಗೂ 337 ರನ್‌ಗಳಿಸಿರುವ ಮಯಾಂಕ್ ಅಗರ್ವಾಲ್ ಮೊದಲ ಎರಡು ಸ್ಥಾನದಲ್ಲಿದ್ದಾರೆ. ಕಿಂಗ್ಸ್ ಬೌಲಿಂಗ್‌ನಲ್ಲಿ ಶಮಿ 10 ವಿಕೆಟ್ ಪಡೆದಿದ್ದು ರವಿ ಬಿಷ್ಣೋಯ್ 8 ವಿಕೆಟ್ ಪಡೆದು ಮಿಂಚಿದ್ದಾರೆ.

Story first published: Thursday, October 15, 2020, 15:59 [IST]
Other articles published on Oct 15, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+