ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 6ನೇ ಕದನಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸಾಕ್ಷಿಯಾಗಲಿವೆ. ಇದೇ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ ಅಪರೂಪದ ದಾಖಲೆ ನಿರ್ಮಿಸಲು ಅವಕಾಶವಿದೆ.
178 ಐಪಿಎಲ್‌ನಲ್ಲಿ ಕೊಹ್ಲಿ ಒಟ್ಟು 5426 ರನ್ ಕಲೆ ಹಾಕಿದ್ದಾರೆ. ಇನ್ನು ಕೇವಲ 74 ರನ್ ಗಳಿಸಿದರೆ ಕೊಹ್ಲಿ ಐಪಿಎಲ್‌ನಲ್ಲಿ 5500 ರನ್ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಕೊಹ್ಲಿಯೇನಾದರೂ ಸೆಪ್ಟೆಂಬರ್ 24ರಂದೇ ಈ ದಾಖಲೆ ಪೂರೈಸಿದರೆ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಐಪಿಎಲ್‌ನಲ್ಲಿ ಕೊಹ್ಲಿ ಬಾರಿಸಿದ ಅತ್ಯಧಿಕ ರನ್ ಎಂದರೆ 113. ಸ್ಟ್ರೈಕ್ ರೇಟ್ 131.54 ಇದ್ದರೆ, ಸರಾಸರಿ ರನ್ 37.68 ಇದೆ. 36 ಅರ್ಧ ಶತಕಗಳನ್ನು ಬಾರಿಸಿರುವ ಕೊಹ್ಲಿ, 480 ಫೋರ್ಸ್, 190 ಸಿಕ್ಸರ್‌ಗಳ ದಾಖಲೆ ಹೊಂದಿದ್ದಾರೆ.
ಬುಧವಾರದ ಪಂದ್ಯ ಉಳಿದೆಲ್ಲ ಪಂದ್ಯಗಳಿಗಿಂತ ಹೆಚ್ಚು ಗಮನ ಸೆಳೆಯಲಿದೆ. ಯಾಕೆಂದರೆ ಕರ್ನಾಟಕ ತಂಡ ರಾಯಲ್ ಚಾಲೆಂಜರ್ಸ್ ಆದರೆ ಕಿಂಗ್ಸ್ ಇಲೆವೆನ್ ಪಂಜಾಬ್‌ನಲ್ಲಿ ಕರ್ನಾಟಕದ ಹೆಚ್ಚಿನ ಆಟಗಾರರು ಆಡುತ್ತಿದ್ದಾರೆ. ಆರ್‌ಸಿಬಿ ಈಗಾಗಲೇ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದಿದ್ದರೆ, ಪಂಜಾಬ್ ತಂಡ ಡೆಲ್ಲಿ ವಿರುದ್ಧ ಮೊದಲ ಪಂದ್ಯದಲ್ಲಿ ಸೋತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications