ಐಪಿಎಲ್ 2020: ಆರ್‌ಸಿಬಿ ಪರವಾಗಿ 200ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‌ನ ಸಾಕಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಎಲ್ಲಾ ಮಾದರಿಯ ಆಟದಲ್ಲೂ ಅಬ್ಬರಿಸುತ್ತಿರುವ ಕೊಹ್ಲಿ ಚುಟುಕು ಕ್ರಿಕೆಟ್ ಲೀಗ್‌ನಲ್ಲೂ ಸುದೀರ್ಘ ಕಾಲದಿಂದ ಸ್ಥಿರ ಪ್ರದರ್ಶನವನ್ನು ನೀಡುತ್ತಾ ಮಿಂಚುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡದ ಪರವಾಗಿ ವಿಶೇಷ ದಾಖಲೆಯನ್ನು ಬರೆಯಲಿದ್ದಾರೆ.
ಟಿ20 ಕ್ರಿಕೆಟ್ ಲೀಗ್‌ನಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ವಿಶೇಷ ಸಾಧನೆಯೊಂದನ್ನು ಮಾಡಲಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ಪರವಾಗಿ ಕಣಕ್ಕಿಳಿಯುವ ಮೂಲಕ ಲೀಗ್ ಕ್ರಿಕೆಟ್‌ನಲ್ಲಿ ಆರ್‌ಸಿಬಿ ತಂಡದ ಪರವಾಗಿ ಕೊಹ್ಲಿ 200ನೇ ಪಂದ್ಯದಲ್ಲಿ ಕಣಕ್ಕಿಳಿಯುವಂತಾಗಲಿದೆ. ಈ ಮೂಲಕ ಹೊಸ ಮೈಲಿಗಲ್ಲೊಂದನ್ನು ಕೊಹ್ಲಿ ಸಾಧಿಸಲಿದ್ದಾರೆ.
ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಪರವಾಗಿ ಐಪಿಎಲ್‌ನಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರನಾಗಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ 184 ಪಂದ್ಯಗಳನ್ನು ಆಡಿರುವ ಕೊಹ್ಲಿ ಸದ್ಯ ಸ್ಥಗಿತವಾಗಿರುವ ಚಾಂಪಿಯನ್ಸ್ ಲೀಗ್‌ನಲ್ಲಿ 15 ಪಂದ್ಯಗಳಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಮೂಲಕ ಒಟ್ಟಾರೆ ಆರ್‌ಸಿಬಿ ತಂಡವನ್ನು 199 ಬಾರಿಗೆ ಈವರೆಗೆ ಕೊಹ್ಲಿ ಪ್ರತಿನಿಧಿಸಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್‌ನ ಆರಂಭಿಕ ಆವೃತ್ತಿಯಿಂದಲೂ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ. ಕೊಹ್ಲಿಯನ್ನು ಹೊರತುಪಡಿಸಿದರೆ ಆರಂಭಿಕ ಆವೃತ್ತಿಯಿಂದ ಈವರೆಗೆ ಆಡಿರುವ ಆಟಗಾರರ ಪೈಕಿ ಯಾವುದೇ ಆಟಗಾರನೂ ಕೂಡ ಒಂದೇ ತಂಡದ ಪರವಾಗಿ ಕಣಕ್ಕಿಳಿದಿಲ್ಲ. ಇದು ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ವಿಶೇಷ ದಾಖಲೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications