ಐಪಿಎಲ್ 2020: ನೀತಿಸಂಹಿತೆ ಉಲ್ಲಂಘನೆಗಾಗಿ ಖಂಡನೆಗೊಳಗಾದ ಹಾರ್ದಿಕ್ ಹಾಗೂ ಮೋರಿಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಕಾದಾಟ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿತ್ತು. ಆದರೆ ಈ ಪಂದ್ಯದಲ್ಲಿ ಐಪಿಎಲ್‌ನ ನೀತಿಸಂಹಿತೆಯ ಉಲ್ಲಂಘನೆಯ ಕಾರಣಕ್ಕೆ ಇಬ್ಬರು ಆಟಗಾರರು ಮ್ಯಾಚ್ ರೆಫ್ರಿಯಿಂದ ಖಂಡನೆಗೆ ಒಳಗಾಗಿದ್ದಾರೆ.
ಆರ್‌ಸಿಬಿಯ ಅನುಭವಿ ಆಲ್‌ರೌಂಡರ್ ಕ್ರಿಸ್ ಮೋರಿಸ್ ಹಾಗೂ ಹಾರ್ದಿಕ್ ಪಾಂಡ್ಯನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಒಳಗಾದ ಆಟಗಾರರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ವಿಕೆಟ್ ಒಪ್ಪಿಸಿ ಹೊರ ನಡೆಯುವ ವೇಳೆ ಈ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆರ್‌ಸಿಬಿ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತ್ತು.
ಈ ಘಟನೆ ನಡೆದಿದ್ದು 19ನೇ ಓವರ್‌ನ 5ನೇ ಎಸೆತದಲ್ಲಿ. ಕ್ರಿಸ್ ಮೋರಿಸ್ ಎಸೆತದಲ್ಲಿ ಬೀಸಿ ಹೊಡೆಯಲು ಯತ್ನಿಸಿ ವಿಫಲರಾದ ಹಾರ್ದಿಕ್ ಪಾಂಡ್ಯ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಕ್ರಿಸ್ ಮೋರಿಸ್ ಪಾಂಡ್ಯಗೆ ಆಕ್ರೋಶದಿಂದ ಸೆಂಡ್ ಆಫ್ ನೀಡಿದ್ದರು. ಇದ್ಯ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯರನ್ನು ಕೋಪಗೊಳ್ಳುವಂತೆ ಮಾಡಿತ್ತು.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರೂ ಆಟಗಾರರು ತಮ್ಮ ವಿರುದ್ಧದ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಕ್ರಿಸ್ ಮೋರಿಸ್ ಲೆವೆಲ್ 1 ಅಪರಾಧ ಐಪಿಎಲ್ ನೀತಿ ಸಂಹಿತೆಯ 2.5 ಹಾಗೂ ಹಾರ್ದಿಕ್ ಪಾಂಡ್ಯ ಲೆವೆಲ್ 1ರ ಅಪರಾಧ ನೀತಿ ಸಂಹಿತೆಯ 2.20 ನಿಯಮವನ್ನು ಉಲ್ಲಂಘಿಸಿದಂತಾಗಿದೆ.
ಮುಂಬೈ ಇಂಡಿಯನ್ಸ್ ತಂಡ ಸದ್ಯ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಪ್ಲೇಆಫ್ ಹಂತಕ್ಕೇರಲು ಮತ್ತಷ್ಟು ಹತ್ತಿರವಾಗಿದೆ. ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ 14 ಅಂಕಗಳನ್ನು ಹೊಂದಿದೆ. ಎರಡು ತಂಡಗಳು ಲೀಗ್ ಹಂತದಲ್ಲಿ ಇನ್ನು ಎರಡು ಪಂದ್ಯಗಳನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications