ಬೆಂಗಳೂರು-ಮುಂಬೈ ಮುಖಾಮುಖಿಯ ಸೋಲು-ಗೆಲುವಿನ ಅಂಕಿ-ಅಂಶಗಳು

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂ ಸೋಮವಾರ (ಸೆಪ್ಟೆಂಬರ್ 28) ಮತ್ತೊಂದು ಕುತೂಹಲಕಾರಿ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಡುತ್ತಿವೆ. ಆಡಿರುವ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 1 ಗೆಲುವು ಕಂಡಿದೆ.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ 1 ಜಯ ದಾಖಲಿಸಿದೆ. ಅದರೆ ಕಡೇ ಪಂದ್ಯದಲ್ಲಿ ಆರ್‌ಸಿಬಿ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹೀನಾಯ ಸೋಲು ಕಂಡಿರುವುದರಿಂದ ಇಂದು ಜಯದತ್ತ ಕಣ್ಣಿಟ್ಟಿದೆ. ಆರ್‌ಸಿಬಿಗೆ ಗೆಲುವು ತುಂಬಾ ಅನಿವಾರ್ಯ.
ಮುಂಬೈ ಇಂಡಿಯನ್ಸ್-ರಾಯಲ್ ಚಾಲೆಂಜರ್ಸ್ ತಂಡಗಳು ಐಪಿಎಲ್‌ನಲ್ಲಿ ಸಾಕಷ್ಟು ರೋಚಕ ಪಂದ್ಯಗಳಿಗೆ ಸಾಕ್ಷಿ ಹೇಳಿವೆ. ಆರ್‌ಸಿಬಿ-ಎಂಐ ಮುಖಾಮುಖಿಯ ಕುತೂಹಲಕಾರಿ ಅಂಶಗಳು ಕೆಳಗಿವೆ.

ಯಾರು ಹೆಚ್ಚು ಬಲಶಾಲಿ?
ಅಂದ್ಹಾಗೆ, ಆರ್‌ಸಿಬಿ ಮತ್ತು ಎಂಐ ಹಿಂದಿನ ಮುಖಾಮುಖಿಗಳ ದಾಖಲೆ ಏನು ಹೇಳುತ್ತದೆ? ಇತ್ತಂಡಗಳ ಮುಖಾಮುಖಿಯಲ್ಲಿ ಹೆಚ್ಚು ಬಾರಿ ಗೆದ್ದ ದಾಖಲೆ ಯಾರ ಹೆಸರಿನಲ್ಲಿದೆ ಗೊತ್ತಾ? ಮುಂಬೈ ಇಂಡಿಯನ್ಸ್ ಹೆಸರಿನಲ್ಲಿ. ಆಡಿರುವ 27 ಪಂದ್ಯಗಳಲ್ಲಿ ಎಂಐ 18 ಜಯ ದಾಖಲಿಸಿದೆ. ಆರ್‌ಸಿಬಿ 9 ಪಂದ್ಯಗಳನ್ನು ಗೆದ್ದಿದೆ.

ಒಟ್ಟು ಮುಖಾ-ಮುಖಿ
* ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 27
* ಆರ್‌ಸಿಬಿ ಗೆದ್ದ ಪಂದ್ಯಗಳು: 9
* ಎಂಐ ಗೆದ್ದ ಪಂದ್ಯಗಳು: 18
* ಭಾರತದಲ್ಲಿ ಆಡಿದ ಪಂದ್ಯ: 23 (ಆರ್‌ಸಿಬಿ 7, ಎಂಐ 16)

ಸರಾಸರಿ ರನ್, ಹೆಚ್ಚಿನ ರನ್
* ಯುಎಇಯಲ್ಲಿ ಆಡಿದ ಪಂದ್ಯಗಳು: 1 (ಆರ್‌ಸಿಬಿ 1, ಎಂಐ 0)
* ಎಂಐ ವಿರುದ್ಧ ಆರ್‌ಸಿಬಿ ಸರಾಸರಿ ಸ್ಕೋರ್: 157
* ಆರ್‌ಸಿಬಿ ವಿರುದ್ಧ ಎಂಐ ಸರಾಸರಿ ಸ್ಕೋರ್: 164
* ಆರ್‌ಸಿಬಿಗೆ ಹೆಚ್ಚಿನ ರನ್: 683 (ವಿರಾಟ್ ಕೊಹ್ಲಿ)
* ಎಂಐ ಪರ ಹೆಚ್ಚಿನ ರನ್‌ಗಳು: 475 (ಕೀರನ್ ಪೊಲಾರ್ಡ್)

ವಿಕೆಟ್‌ಗಳು, ಕ್ಯಾಚ್‌ಗಳು
* ಆರ್‌ಸಿಬಿಗೆ ಹೆಚ್ಚಿನ ವಿಕೆಟ್‌ಗಳು: 16 (ಯುಜ್ವೇಂದ್ರ ಚಹಲ್)
* ಎಂಐಗೆ ಹೆಚ್ಚಿನ ವಿಕೆಟ್‌ಗಳು: 16 (ಜಸ್ಪ್ರಿತ್ ಬುಮ್ರಾ)
* ಆರ್‌ಸಿಬಿಗೆ ಹೆಚ್ಚಿನ ಕ್ಯಾಚ್‌ಗಳು: 12 (ವಿರಾಟ್ ಕೊಹ್ಲಿ)
* ಮುಂಬೈಗಾಗಿ ಹೆಚ್ಚಿನ ಕ್ಯಾಚ್‌ಗಳು: 10 (ಕೀರನ್ ಪೊಲಾರ್ಡ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications