
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಆರ್‌ಸಿಬಿ ರೋಚಕವಾಗಿ ಗೆದ್ದುಕೊಂಡಿದೆ. ಅಸಲಿಗೆ ಪಂದ್ಯ ಸೋಲಿನ ಕದ ತಟ್ಟಿತ್ತಾದರೂ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಎಬಿಡಿ ಪಂದ್ಯದ ಫಲಿತಾಂಶ ಬದಲಿಸಿಬಿಟ್ಟಿದ್ದರು.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಐಪಿಎಲ್ 33ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ರಾಜಸ್ಥಾನ್ ರಾಯಲ್ಸ್, ರಾಬಿನ್ ಉತ್ತಪ್ಪ 41, ಬೆನ್ ಸ್ಟೋಕ್ಸ್ 15, ನಾಯಕ ಸ್ಟಿವ್ ಸ್ಮಿತ್ 57, ಜೋಸ್ ಬಟ್ಲರ್ 24, ರಾಹುಲ್ ತೆವಾಟಿಯಾ 19 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 177 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ದೇವದತ್ ಪಡಿಕ್ಕಲ್ 35, ಆ್ಯಾರನ್ ಫಿಂಚ್ 14, ವಿರಾಟ್ ಕೊಹ್ಲಿ 43, ಎಬಿ ಡಿ ವಿಲಿಯರ್ಸ್ 55, ಗುರುಕೀರತ್ ಸಿಂಗ್ ಮಾನ್ 19 ರನ್ ಕೊಡುಗೆಯೊಂದಿಗೆ 19.4 ಓವರ್‌ಗೆ 3 ವಿಕೆಟ್ ಕಳೆದು 179 ರನ್ ಪೇರಿಸಿತು.
ಆರ್‌ಸಿಬಿ ರೋಚಕ ಗೆಲುವಿನ ಬಳಿಕ ಸ್ಟಾರ್ ಸ್ಫೋರ್ಟ್ಸ್ ಕನ್ನಡ ಮಾಡಿರುವ ಟ್ವೀಟ್ ಗಮನ ಸೆಳೆದಿದೆ. "ನಮ್ಮ ಪ್ವಾರ್ಗ ಮಾನವ್ಮಿ ಹಬ್ಬಕ್ಕೆ ಛೊಲ್ಛೊಲೋ ಉಡ್ಗೊರೆ ಕೊಟ್ಟಿದ್ವಲ. ಮ್ಯಾಚ್ ಗೆದ್ದಾತಲಾ, ಇನ್ನೆಂತ ಇದ್ರೂ ಕೇಸ್ರಿ ಮಾಡ್ಕ್ಯೆಂಡು ಸಮಾ ಬಾರ್ಸಲ್ ಅಡ್ಡಿಲ್ಲೇ.'' ಅಂತಿದಾರಾ RCB ಫ್ಯಾನ್ಸ್?' ಎಂದು ಟ್ವೀಟ್‌ನಲ್ಲಿ ಹವ್ಯಕ ಭಾಷೇಲಿ ಬರೆಯಲಾಗಿದೆ.