
ಹೈದರಾಬಾದ್ ಬೌಲಿಂಗ್ ದಾಳಿ
ಹೈದರಾಬಾದ್ ಪರವಾಗಿ ಸಂದೀಪ್ ಶರ್ಮಾ, ಟಿ ನಟರಾಜನ್ ಹಾಗೂ ಹೋಲ್ಡರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಸಂದೀಪ್ ಶರ್ಮಾ ಹಾಗೂ ಹೋಲ್ಡರ್ ತಲಾ ಎರಡು ವಿಕೆಟ್ ಕಿತ್ತರೆ ನಟರಾಜನ್ ನಾಲ್ಕು ಓವರ್‌ಗಳಲ್ಲಿ ಕೇವಲ 11 ರನ್ ನೀಡಿ 1 ವಿಕೆಟ್ ಪಡೆದರು. ರಶೀದ್ ಖಾನ್ ಹಾಗೂ ನದೀಮ್ ಕೂಡ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.

ಅಗ್ಗಕ್ಕೆ ವಿಕೆಟ್ ಒಪ್ಪಿಸಿದ ವಾರ್ನರ್
ಆರ್‌ಸಿಬಿ ನೀಡಿದ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ಕೂಡ ನಾಯಕ ಡೇವಿಡ್ ವಾರ್ನರ್ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆದರೆ 2ನೇ ವಿಕೆಟ್‌ಗೆ ಮನಿಶ್ ಪಾಂಡೆ ಹಾಗೂ ಸಾಹಾ 50 ರನ್‌ಗಳ ಜೊತೆಯಾಟವನ್ನು ನೀಡಿದರು. ಬಳಿಕ ಸಣ್ಣ ಕುಸಿತವನ್ನು ಹೈದರಾಬಾದ್ ಎದುರಿಸಿತಾದರೂ ಹೆಚ್ಚಿನ ಆಘಾತವಾಗದಂತೆ ಕೆಳ ಕ್ರಮಾಂಕದ ಆಟಗಾರರು ನೋಡಿಕೊಂಡರು.
ಸುಲಭ ಜಯ
ಅಂತಿಮವಾಗಿ ಜೇಸನ್ ಹೋಲ್ಡರ್ 10 ಎಸೆತಗಳಲ್ಲಿ 26 ರನ್ ಸಿಡಿಸಿ ರನ್ ವೇಗ ಹೆಚ್ಚಿನ 14.1ಓವರ್‌ನಲ್ಲಿಯೇ ಹೈದರಾಬಾದ್ ಗೆಲ್ಲುವಂತೆ ನೋಡಿಕೊಂಡರು. ಈ ಮೂಲಕ ಅಗತ್ಯವಾಗಿದ್ದ ಗೆಲುವನ್ನು ಸಂಪಾದಿಸುವಲ್ಲಿ ಹೈದರಾಬಾದ್ ಯಶಸ್ವಿಯಾಗಿದೆ.

ಪ್ಲೇಆಫ್‌ಗೆ ಮುಂದುವರಿದ ಜಿದ್ದಾಜಿದ್ದಿ
ಇಂದಿನ ಸೋಲು ಆರ್‌ಸಿಬಿ ತಂಡಕ್ಕೆ ಮಾತ್ರವಲ್ಲ ಕಿಂಗ್ಸ್ ಇಲೆವೆನ್ ಪಂಜಾಬ್, ಕೊಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳಿಗೂ ಹಿನ್ನೆಡೆಗೆ ಕಾರಣವಾಗಿದೆ. ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದ ಹೈದರಾಬಾದ್ ರನ್‌ರೇಟ್ ಅತ್ಯುತ್ತಮವಾಗಿದ್ದು ನೇರವಾಗಿ ನಾಲ್ಕನೇ ಸ್ಥಾನಕ್ಕೇರಿದೆ. ಎಲ್ಲಾ ತಂಡಗಳಗೂ ಇನ್ನು ಒಂದೊಂದು ಪಂದ್ಯಗಳು ಬಾಕಿಯಿದ್ದು ಪ್ಲೇಆಪ್‌ಗೇರಲು ಗೆಲುವು ಮಾತ್ರವಲ್ಲದೆ ರನ್‌ರೇಟ್ ಕೂಡ ನಿರ್ಣಾಯಕ ಪಾತ್ರವಹಿಸಲಿದೆ.


Click it and Unblock the Notifications












