ಐಪಿಎಲ್ 2020: ಬೆಂಗಳೂರು vs ಹೈದರಾಬಾದ್, ಟಾಸ್ ವರದಿ ಹಾಗೂ ಪ್ಲೇಯಿಂಗ್ 11

ಐಪಿಎಲ್ ಟೂರ್ನಿಯ ಈ ಬಾರಿಯ ಆವೃತ್ತಿ ಮಹತ್ವದ ಘಟ್ಟವನ್ನು ತಲುಪಿದೆ. ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದೆ. ಟಾಸ್ ಗೆದ್ದಿರುವ ಹೈದರಾಬಾದ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಆರ್‌ಸಿಬಿ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಸಾಧಿಸಿದರೆ ಪ್ಲೇಆಪ್‌ಗೆ ಟಿಕೆಟ್ ಖಚಿತಪಡಿಸಿಕೊಳ್ಳಲಿದೆ. ಆದರೆ ಸನ್‌ರೈಸರ್ಸ್ ಹೈದರಾಬಾದ್ ಎರಡು ಪಂದ್ಯಗಳನ್ನು ಕೂಡ ಗೆಲ್ಲಬೇಕಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿನ ಗೆಲುವು ಎರಡು ತಂಡಗಳಿಗೂ ಅನಿವಾರ್ಯವಾಗಿದೆ.
ಆರ್‌ಸಿಬಿ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಲಾಗಿದೆ. ನವ್‌ದೀಪ್ ಸೈನಿ ಹಾಗೂ ಇಸುರು ಉದಾನ ತಂಡದಲ್ಲಿ ಸ್ಥಾನವನ್ನು ನಡೆದುಕೊಂಡಿದ್ದರೆ ಸ್ಟೈನ್ ಹಾಗೂ ದುಬೆ ಆಡುವ ಬಳಗದಿಂದ ಹೊರಬಿದ್ದಿದ್ದಾರೆ. ಹೈದರಾಬಾದ್ ತಂಡದಲ್ಲಿ ವಿಜಯ್ ಶಂಕರ್ ಗಾಯಗೊಂಡಿದ್ದು ಇಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜೋಶ್ ಫಿಲಿಪ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ಗುರ್ಕೀರತ್ ಸಿಂಗ್ ಮನ್, ವಾಷಿಂಗ್ಟನ್ ಸುಂದರ್, ಕ್ರಿಸ್ ಮೋರಿಸ್, ಇಸುರು ಉದಾನಾ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯುಜುವೇಂದ್ರ ಚಾಹಲ್
ಸನ್‌ರೈಸರ್ಸ್ ಹೈದರಾಬಾದ್ : ಡೇವಿಡ್ ವಾರ್ನರ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಶಹಬಾಜ್ ನದೀಮ್, ಸಂದೀಪ್ ಶರ್ಮಾ, ಟಿ ನಟರಾಜನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications