ಫೈನಲ್‌ಗೆ ಪ್ರವೇಶ ಪಡೆದಿರುವುದು ಶ್ರೇಷ್ಠವಾದ ಅನುಭವ: ಶ್ರೇಯಸ್ ಐಯ್ಯರ್

ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 17 ರನ್‌ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಹುಡುಗರು ಐಪಿಎಲ್‌ನಲ್ಲಿ ಚೊಚ್ಚಲ ಬಾರಿಗೆ ಫೈನಲ್ಸ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಈ ಸಾಧನೆಯ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಪ್ರತಿಕ್ರಿಯಿಸಿದ್ದು ಇದೊಂದು ಶ್ರೇಷ್ಠವಾದ ಅನುಭವ ಎಂದಿದ್ದಾರೆ.
ಟೂರ್ನಿಯಲ್ಲಿ ಡೆಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ. ಇದರ ಹೊರತಾಗಿಯೂ ತಂಡ ಒಗ್ಗಟ್ಟಾಗಿ ಪ್ರದರ್ಶನ ನೀಡಿರುವ ಜೊತೆಗೆ ಅದ್ಭುತ ಹೋರಾಟ ಮತ್ತು ಬದ್ಧತೆಯನ್ನು ತೋರಿಸರುವುದು ಸಂತಸವನ್ನು ತಂದಿದೆ ಎಂದು ನಾಯಕ ಶ್ರೇಯಸ್ ಐಯ್ಯರ್ ಹೇಳಿದ್ದಾರೆ.
ಫೈನಲ್‌ಗೆ ಪ್ರವೇಶ ಪಡೆದಿರುವುದು ಇನ್ನೆಂದೂ ಕಾಣದ ಅನುಭವ ನೀಡುತ್ತಿದೆ. ಈ ಪಯಣ ಸಾಕಷ್ಟು ಏರಿಳವನ್ನು ಹೊಂದಿದೆ. ಅಂತಿಮವಾಗಿ ನಾವು ಕುಟುಂಬದಂತೆ ಒಗ್ಗಟ್ಟಾಗಿ ನಿಂತೆವು. ಪ್ರತಿಯೊಬ್ಬ ಸದಸ್ಯನ ವೈಯಕ್ತಿಕ ಕೊಡುಗೆ ತುಂಬಾ ಸಂತಸವನ್ನು ನೀಡಿದೆ ಎಂದು ಐಯ್ಯರ್ ಪಂದ್ಯದ ಮುಕ್ತಾಯದ ಬಳಿಕ ಹೇಳಿದ್ದಾರೆ.
ನಾವು ಆರಂಬದಲ್ಲಿ ಎಡವುತ್ತಿದ್ದೆವು. ಹಾಗಾಗಿ ಹೈದರಾಬಾದ್ ವಿರುದ್ಧ ರಾಕೆಟ್ ರೀತಿಯ ಆರಂಭ ಬಯಸಿದ್ದೆವು. ಹಾಗಾಗಿ ಸ್ಟೋಯ್ನಿಸ್ ಆರಮಭಿಕನಾಗಿ ಕಣಕ್ಕಿಳಿದು ಹೆಚ್ಚಿನ ಚೆಂಡನ್ನು ಎದುರಿಸಿದರೆ ಉತ್ತಮ ಆರಮಭ ಪಡೆಯಲು ಸಾಧ್ಯವಿದೆ ಎನಿಸಿತ್ತು. ಅದರಲ್ಲಿ ಯಶಸ್ಸನ್ನು ಕೂಡ ಕಂಡೆವು ಎಂದು ಶ್ರೇಯಸ್ ಐಯ್ಯರ್ ವಿಜಯಸ ಬಳಿಕ ಹೇಳಿಕೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications