ಕ್ರಿಕೆಟ್ ಲೈವ್ ಶೋ ಮುಗಿಸಿದೆ, ಸ್ಟಾರ್ ಸ್ಪೋರ್ಟ್ ಬಿಟ್ಟಿಲ್ಲ: ರೀನಾ ಸ್ಪಷ್ಟನೆ

ಇಂಡಿಯನ್ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ಸ್ಟಾರ್ ಸಮೂಹ ಸಂಸ್ಥೆಯ ಕ್ರೀಡಾ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಬೈಜುಸ್ ಕ್ರಿಕೆಟ್ ಲೈವ್ ಪ್ರಸ್ತುಪ ಪಡಿಸುತ್ತಿದ್ದ ರೀನಾ ಡಿಸೋಜಾ ಅವರು ನಿನ್ನೆ ತಾವು ಮಾಡಿದ ಟ್ವೀಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಮೊದಲ 18ದಿನಗಳ ನೇರ ಪ್ರಸಾರ ಕಾರ್ಯಕ್ರಮವನ್ನು ನಡೆಸಿಕೊಡಲು ನನಗೆ ಅವಕಾಶ ನೀಡಲಾಗಿತ್ತು. ಉಳಿದ 36 ದಿನಗಳ ಲೈವ್ ಶೋಗಳನ್ನು ಮಧು ಹಾಗೂ ಕಿರಣ್ ಅವರು ನಡೆಸಿಕೊಡಲಿದ್ದಾರೆ ಎಂದು ರೀನಾ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.
ರೀನಾ ಅವರು ಸ್ಟಾರ್ ಸ್ಪೋರ್ಟ್ ವಾಹಿನಿ ತೊರೆದಿದ್ದಾರಾ? ಅಥವಾ ಕ್ರಿಕೆಟ್ ಕಾರ್ಯಕ್ರಮವನ್ನು ಮಾತ್ರ ತೊರೆದಿದ್ದಾರಾ? ಎಂಬ ಗೊಂದಲದಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ನಿಮಗಾಗಿ ನಿಮ್ಮ ಕನ್ನಡ ಮಾತು ಕೇಳಲು ನಾವು ವಾಹಿನಿ ನೋಡುತ್ತಿದ್ದೆವು ಎಂದಿದ್ದರು. ಚಿತ್ರಕೃಪೆ: ರೀನಾ ಡಿಸೋಜಾ ವೆಬ್, ಟ್ವಿಟ್ಟರ್.

ಮುಂದಿನ ಲೀಗ್ ಗಳಲ್ಲಿ ಖಂಡಿತ ಕಾಣಿಸಿಕೊಳ್ಳುತ್ತೇನೆ
ಇನ್ಮುಂದೆ ಈ ಕಾರ್ಯಕ್ರಮವನ್ನು ಮಧು ಹಾಗೂ ಕಿರಣ್ ಮುಂದುವರೆಸುತ್ತಿದ್ದಾರೆ. ಅವರಿಗೆ ಹಾಗೂ ವಾಹಿನಿ ಬೆಂಬಲ ನೀಡುತ್ತಿರಿ, ಎಲ್ಲರಿಗೂ ಧನ್ಯವಾದಗಳು ಎಂದು ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಕಳೆದ ನಾಲ್ಕು ವರ್ಷಗಳಿಂದ ಸ್ಟಾರ್ ವಾಹಿನಿ ಜೊತೆ ಇದ್ದೇನೆ. ನಾನು ಈ ಲೈವ್ ಶೋ ಮಾತ್ರ ಬಿಡುತ್ತಿದ್ದೇನೆ. ವಾಹಿನಿಯಲ್ಲಿ ಇದ್ದೇ ಇರುತ್ತೇನೆ. ಪ್ರೀ ರೆಕಾರ್ಡ್ ಶೋ, ಮುಂದಿನ ಲೀಗ್ ಗಳಲ್ಲಿ ಖಂಡಿತ ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ.
ನಿಮ್ಮ ಕನ್ನಡ ನಮಗೆ ಇಷ್ಟ- ಫ್ಯಾನ್ಸ್ ಪ್ರತಿಕ್ರಿಯೆ
ನಿಮ್ಮಿಂದ ಈಗ ನೀವೇ ಇಲ್ಲ ಅಂದ್ರೆ ನೋಡೋದು ಆದ್ರೂ ಯಾಕೆ... ನಿಮ್ಮ ಕನ್ನಡ ನಮಗೆ ಇಷ್ಟ-@HumanityDboss
***
ನಿವಂತೂ ಎಲ್ಲರ ಮನಸ್ಸು ಗೆದ್ದಿದ್ದಿರಿ. ಅವರು ಕೂಡ ಇದನ್ನೆ ಮುಂದುವರೆಸಲಿ. ನಿಮ್ಮಂತ ಇನ್ನೂ ಹೆಚ್ಚು ಕನ್ನಡ ಪ್ರತಿಭೆಗಳು ಬೆಳಕಿಗೆ ಬರಲಿ ಚಿಕ್ಕವರಿಗೆ ಪ್ರೆರಣೆಯಾಗಲಿ. ಲೈವ್ ಇರಲಿ ರೆಕಾರ್ಡ್ ಮಾಡಿದ್ದು ಇರಲಿ ನೋಡ್ತಿವಿ ಬಿಡಿ. ಸ್ಪಶ್ಟನೆ ನೀಡಿದ್ದಕ್ಕೆ ಥ್ಯಾಂಕ್ಸ್ #StarSportsKannada -@chandrub44
***
ಮೇಡಂ ನೀವು ಮಾತಾಡೋ ರೀತಿ ಮತ್ತು ಸಕ್ಕತ್ ವಾಯ್ಸ್ ದಯವಿಟ್ಟು ಮುಂದುವರಿಸಿ-@girishkumar2012

ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ
ಕನ್ನಡ ಭಾಷೆಯಲ್ಲಿ ಸಂಪೂರ್ಣವಾಗಿ ಆರಂಭಿಸಿ ಎರಡು ವರ್ಷವಾಗುತ್ತಾ ಬಂದಿದೆ. ಹಿಂದಿ, ತಮಿಳು ಭಾಷೆಯಲ್ಲಿ ಮಾತ್ರ ಇದ್ದ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲೂ ಲಭ್ಯವಾದ ಬಳಿಕ ಕರ್ನಾಟಕ ಮೂಲೆ ಮೂಲೆ ತಲುಪಿದೆ. ಈ ಸ್ಟಾರ್ ಸ್ಪೋರ್ಟ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಬೈಜುಸ್ ಕ್ರಿಕೆಟ್ ಲೈವ್ ಪ್ರಸ್ತುತ ಪಡಿಸುತ್ತಿದ್ದ ನಿರೂಪಕಿ ರೀನಾ ಡಿಸೋಜಾ ಅವರು ನಿನ್ನೆ ಟ್ವೀಟ್ ಮಾಡಿ ಈ ಕಾರ್ಯಕ್ರಮ ನಡೆಸಿಕೊಡಲು ಬೆಂಬಲಿಸಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದರು.

ಮನರಂಜನೆ ಪ್ಲಸ್ ಕ್ರಿಕೆಟ್ ಹರಟೆ ಕಾರ್ಯಕ್ರಮ
ಕನ್ನಡ ಭಾಷೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕಾಮೆಂಟರಿ ಮಾತ್ರವಲ್ಲದೆ, ಕ್ರಿಕೆಟ್ ವಿಶ್ಲೇಷಣೆ, ಹರಟೆ ಎಲ್ಲವನ್ನು ಈ ವಾಹಿನಿ ಸಾಧ್ಯವಾಗಿಸಿದೆ. ಇಂಥ ಮನರಂಜನೆ ಪ್ಲಸ್ ಕ್ರಿಕೆಟ್ ಹರಟೆ ಕಾರ್ಯಕ್ರಮವನ್ನು ರೀನಾ ನಡೆಸಿಕೊಡುತ್ತಿದ್ದರು. ವೆಂಕಟೇಶ್ ಪ್ರಸಾದ್, ಭರತ್ ಚಿಪ್ಲಿ, ವಿನಯ್ ಕುಮಾರ್ ಸೇರಿದಂತೆ ಹಲವಾರು ಮಾಜಿ ಹಾಲಿ ಕ್ರಿಕೆಟರ್ ಗಳು, ಕ್ರಿಕೆಟ್ ಮಧ್ಯದಲ್ಲಿ ಮನರಂಜನಾ ಕ್ಷೇತ್ರದ ಸೆಲೆಬ್ರಿಟಿಗಳ ಸಂದರ್ಶನವನ್ನು ಹೊಂದಿದ್ದ ಈ ಜನಪ್ರಿಯ ಕಾರ್ಯಕ್ರಮವನ್ನು ತೊರೆಯುತ್ತಿರುವುದಾಗಿ ಟ್ವೀಟ್ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications