For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸುರೇಶ್ ರೈನಾ ದಾಖಲೆ ಸರಿದೂಗಿಸಿದ ರೋಹಿತ್ ಶರ್ಮಾ

IPL 2020: Rohit Sharma equals Suresh Raina’s huge IPL record

ಅಬುಧಾಬಿ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸುರೇಶ್ ರೈನಾ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಸರಿದೂಗಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅತೀ ಹೆಚ್ಚು ಅರ್ಧ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಎರಡನೇ ಸ್ಥಾನದಲ್ಲಿ ರೋಹಿತ್ ಕಾಣಿಸಿಕೊಂಡಿದ್ದಾರೆ.

ಅಬುದಾಭಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್ 1) ನಡೆದ ಐಪಿಎಲ್ 13ನೇ ಪಂದ್ಯದಲ್ಲಿ ರೋಹಿತ್ 45 ಎಸೆತಗಳಲ್ಲಿ 70 ರನ್ ಬಾರಿಸಿದರು. ಇದರೊಂದಿಗೆ ರೋಹಿತ್ ಐಪಿಎಲ್‌ನಲ್ಲಿ 38 ಅರ್ಧ ಶತಕಗಳನ್ನೂ ಪೂರೈಸಿಕೊಂಡಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರ ದಾಖಲೆ ಸರಿದೂಗಿದೆ.

ಸುರೇಶ್ ರೈನಾ 189 ಇನ್ನಿಂಗ್ಸ್‌ಗಳಲ್ಲಿ 5368 ರನ್ ಬಾರಿಸಿದ್ದಾರೆ. ಇದರಲ್ಲಿ 38 ಅರ್ಧ ಶತಕಗಳು ಸೇರಿವೆ. ರೋಹಿತ್ ಶರ್ಮಾ 187 ಇನ್ನಿಂಗ್ಸ್‌ಗಳಲ್ಲಿ 5068 ರನ್ ಬಾರಿಸಿದ್ದಾರೆ. ಇದರಲ್ಲಿ 38 ಅರ್ಧ ಶತಕಗಳು ಕೂಡ ಸೇರಿದೆ. ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ 44 ಅರ್ಧ ಶತಕ ಬಾರಿಸಿದ್ದಾರೆ.

ಗುರುವಾರದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್, ರೋಹಿತ್ 70, ಇಶಾನ್ ಕಿಶನ್ 28, ಕೀರನ್ ಪೊಲಾರ್ಡ್ 47, ಹಾರ್ದಿಕ್ ಪಾಂಡ್ಯ 30 ರನ್‌ನೊಂದಿಗೆ 20 ಓವರ್‌ನಲ್ಲಿ 4 ವಿಕೆಟ್ ನಷ್ಟದಲ್ಲಿ 191 ರನ್ ಗಳಿಸಿತು. ಇದೇ ಪಂದ್ಯದಲ್ಲಿ ರೋಹಿತ್ 5000 ರನ್ ಬಾರಿಸಿದ 3ನೇ ಬ್ಯಾಟ್ಸ್‌ಮನ್‌ ಆಗಿಯೂ ಗುರುತಿಸಿಕೊಂಡಿದ್ದಾರೆ.

Story first published: Thursday, October 1, 2020, 22:21 [IST]
Other articles published on Oct 1, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+