Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟ್ರೆಂಟ್ ಬೌಲ್ಟ್ ಸ್ಥಿತಿಯ ಬಗ್ಗೆ ಮುಂಬೈ ನಾಯಕ ರೋಹಿತ್ ಮಾಹಿತಿ

IPL 2020: Rohit Sharma Gives Injury Update On Trent Boult

ದುಬೈ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈಗಾಗಲೇ ಫೈನಲ್‌ಗೆ ಪ್ರವೇಶಿಸಿರುವ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ನ ಪ್ರಮುಖ ವೇಗಿ ಟ್ರೆಂಟ್ ಬೌಲ್ಟ್ ಗಾಯಕ್ಕೀಡಾಗಿದ್ದಾರೆ. ಈ ಬಾರಿಯೂ ಟ್ರೋಫಿಯತ್ತ ಕಣ್ಣಿಟ್ಟಿರುವ ಎಂಐಗೆ ಇದು ಸಣ್ಣ ಹಿನ್ನಡೆ ತಂದಿದೆ.

ಸೊಂಟ ನೋವಿಗೆ ತುತ್ತಾಗಿರುವ ಟ್ರೆಂಟ್ ಬೌಲ್ಟ್‌ ಆರೋಗ್ಯ ಸ್ಥಿತಿಯ ಬಗ್ಗೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮಾಹಿತಿ ನೀಡಿದ್ದಾರೆ. ಬೌಲ್ಟ್ ಗಾಯ ಗಂಭೀರವಾಗಿಲ್ಲ. ಫೈನಲ್‌ಗೆ ಮುನ್ನ ಬೌಲ್ಟ್‌ ಚೇತರಿಸಿಕೊಳ್ಳಲಿದ್ದಾರೆ ಎಂದು ರೋಹಿತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ನಾನು ಬೌಲ್ಟ್ ಅವರನ್ನು ನೋಡಿಲ್ಲ. ಆದರೆ ಅವರು ಚೆನ್ನಾಗಿದ್ದಾರೆ. ಅವರ ಗಾಯ ಗಂಭೀರವಾಗಿದ್ದು ಅಂತ ನನಗನ್ನಿಸುತ್ತಿಲ್ಲ. ಮೂರು ದಿನಗಳ ವಿಶ್ರಾಂತಿಯ ಬಳಿಕ ಅವರು ಮತ್ತೆ ಮೈದಾನಕ್ಕಿಳಿಯಲಿದ್ದಾರೆ,' ಎಂದು ರೋಹಿತ್ ಶರ್ಮಾ ನುಡಿದಿದ್ದಾರೆ.

'ಜಸ್‌ಪ್ರೀತ್‌ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇಬ್ಬರೂ ಬೇರೆ ಬೇರೆ ತಂಡಗಳಿಗೆ ಆಡುವುದರಿಂದ ಅವರಲ್ಲಿ ವಿಭಿನ್ನ ಯೋಜನೆಗಳಿಗೆ. ಒಂದು ತಂಡವಾಗಿ ನಮ್ಮಲ್ಲಿ ಪ್ಲ್ಯಾನ್‌ಗಳಿರುತ್ತವೆ, ಅದನ್ನು ಅವರು ಕಾರ್ಯರೂಪಕ್ಕೆ ತರೋದು ನೋಡೋಕೆ ಖುಷಿ ಅನ್ನಿಸುತ್ತೆ,' ಎಂದು ಶರ್ಮಾ ಹೇಳಿದ್ದಾರೆ.

Story first published: Friday, November 6, 2020, 12:47 [IST]
Other articles published on Nov 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+