Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಕೊಹ್ಲಿ ದಾಖಲೆ ಮುರಿಯುವ ಅವಕಾಶ ತಪ್ಪಿಸಿಕೊಂಡ ರೋಹಿತ್

IPL 2020: Rohit Sharma miss the chance to breaks Virat Kohlis record

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಮೊದಲನೇ ಪಂದ್ಯದಲ್ಲಿ ಭಾರತದ ನಿಯಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾ ವಿಶಿಷ್ಠ ದಾಖಲೆ ನಿರ್ಮಿಸುವ ಅವಕಾಶ ಕೈ ತಪ್ಪಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 19ರಂದು ನಡೆದ ಐಪಿಎಲ್ ಮೊದಲನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿಯುವ ಅವಕಾಶ ರೋಹಿತ್ ಶರ್ಮಾ ಅವರಿಗಿತ್ತು. ಆದರೆ ರೋಹಿತ್ ಉತ್ತಮ ಪ್ರದರ್ಶನವೇನೂ ನೀಡಲಿಲ್ಲ. ಆದ್ದರಿಂದ ದಾಖಲೆ ತಪ್ಪಿದೆ.

ಪೀಯೂಷ್ ಚಾವ್ಲಾ ಅವರ 4.4ನೇ ಓವರ್‌ನಲ್ಲಿ 9 ಎಸೆತಗಳಿಗೆ ಕೇವಲ 12 ರನ್‌ ಬಾರಿಸಿ ರೋಹಿತ್, ಸ್ಯಾಮ್ ಕರನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಪಂದ್ಯದಲ್ಲೇನಾದರೂ ರೋಹಿತ್ 43 ರನ್ ಬಾರಿಸಿದ್ದರೆ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಬದಿಗೆ ಹೋಗುತ್ತಿತ್ತು.

ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ಸಿಎಸ್‌ಕೆ ವಿರುದ್ಧ 747 ರನ್ ಗಳಿಸಿದ್ದಾರೆ. ರೋಹಿತ್ ಈಗ ಒಟ್ಟು 717 ರನ್ ಬಾರಿಸಿದಂತಾಗಿದೆ. ಇದೇ ಪಂದ್ಯಲ್ಲಿ ರೋಹಿತ್ ಇನ್ನು ಕೇವಲ 31 ರನ್ ಬಾರಿಸಿದ್ದರೂ ಕೊಹ್ಲಿ ದಾಖಲೆ ಬದಿಗೆ ಸರಿಯುತ್ತಿತ್ತು.

Story first published: Saturday, September 19, 2020, 20:54 [IST]
Other articles published on Sep 19, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+