ಐಪಿಎಲ್ 2020: ಕಪ್ ಗೆಲ್ಲೋದಕ್ಕೆ ಯುಎಇಗೆ ಹಾರಲು ಸಜ್ಜಾಗಿದೆ ಆರ್‌ಸಿಬಿ

ಬೆಂಗಳೂರು, ಆಗಸ್ಟ್ 10: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಗಸ್ಟ್ ತಿಂಗಳ ಕೊನೇ ವಾರದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರಯಾಣ ಹೊರಡಲಿದೆ. ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಐಪಿಎಲ್ ಆರಂಭಗೊಳ್ಳಲಿದೆ.
13ನೇ ಆವೃತ್ತಿಯ ನಗದು ಶ್ರೀಮಂತ ಐಪಿಎಲ್ ಟೂರ್ನಿಗಾಗಿ ಆರ್‌ಸಿಬಿ ಮತ್ತು ಇನ್ನಿತರ ತಂಡಗಳು ತಯಾರಿ ನಡೆಸುತ್ತಿವೆ. ಯುಎಇಗೆ ಹೊರಡುವ ಮುನ್ನ ಎಲ್ಲಾ ತಂಡಗಳು ಕಡ್ಡಾಯವಾಗಿ ಕೋವಿಡ್ 19 ಪರೀಕ್ಷೆಗೆ ಒಳಗಾಗಬೇಕಿರುತ್ತದೆ, ಗೊತ್ತುಪಡಿಸಿದ ಹೋಟೆಲ್‌ನಲ್ಲಿ ಕ್ವಾರಂಟೈನ್ ಪಾಲಿಸಬೇಕಾಗುತ್ತದೆ.
ಐಪಿಎಲ್ 2020ಗಾಗಿ ಆಕರ್ಷಣೀಯ ತಂಡ ಆರ್‌ಸಿಬಿಯ ಕ್ಷಣಗಣನೆ ಶುರುವಾಗಿದೆ. ಭಾನುವಾರ (ಆಗಸ್ಟ್ 9) ತಂಡ, ವಿರಾಟ್ ಕೊಹ್ಲಿ ಮತ್ತು ಯುಜುವೇಂದ್ರ ಚಾಹಲ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿತ್ತು. ಈ ಚಿತ್ರದ ಜೊತೆಗೆ 'ಐಪಿಎಲ್‌ಗಿನ್ನು 41 ದಿನಗಳು ಬಾಕಿ' ಎಂದು ಬರೆಯಲಾಗಿತ್ತು.
ವರದಿಯೊಂದರ ಪ್ರಕಾರ, ಆರ್‌ಸಿಬಿ ತಂಡ ಕ್ವಾರಂಟೈನ್‌ಗಾಗಿ ಈ ವಾರ ಬೆಂಗಳೂರಿನ ಹೋಟೆಲೊಂದರಲ್ಲಿ ಒಟ್ಟು ಸೇರಲಿದೆ. ಆಟಗಾರರಿಗೆ ಅಭ್ಯಾಸಕ್ಕೆ ಸಾಕಷ್ಟು ಸಮಯ ಲಭಿಸಲಿದೆ ಎಂದು ಖಾತರಿಪಡಿಸಿದ ಬಳಿಕವೇ ವಿಮಾನಯಾನ ವೇಳಾಪಟ್ಟಿಯನ್ನು ರೂಪಿಸಲಾಗುತ್ತದೆ ಎಂದು ಆರ್‌ಸಿಬಿ ಅಧ್ಯಕ್ಷ ಸಂಜೀವ್ ಚೂರಿವಾಲ ಹೇಳಿದ್ದಾರೆ.
'ಎಲ್ಲಾ ಭಾರತದ ಆಟಗಾರರು ಮತ್ತು ಬೆಂಬಲ ಸಿಬ್ಬಂದಿ ಬೆಂಗಳೂರಿನಲ್ಲಿ ಜೊತೆ ಸೇರಲಿದ್ದಾರೆ. ಆಗಸ್ಟ್ ತಿಂಗಳ ಕೊನೇ ವಾರದಲ್ಲಿ ಯುಎಇಗೆ ಪ್ರಯಾಣಿಸುವ ಮುನ್ನ ಕೆಲ ದಿನಗಳ ಕಾಲ ಅವರು ಬೆಂಗಳೂರಿನಲ್ಲೇ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಪಾಲಿಸಲಿದ್ದಾರೆ,' ಎಂದು ಸಂಜೀವ್ ಹೇಳಿರುವುದಾಗಿ ದ ಹಿಂದೂ ವರದಿ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications