Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ಸಿಕ್ಸರ್‌ಗಳ ಸುರಿಮಳೆಗರೆದು ಚೆನ್ನೈಗೆ ಸೋಲುಣಿಸಿದ ರಾಜಸ್ಥಾನ್

IPL 2020: RR vs CSK Match 4 highlights in kannada

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 16 ರನ್‌ಗಳ ಗೆಲುವು ದಾಖಲಿಸಿದೆ. ಸಿಕ್ಸರ್‌ಗಳ ಸುರಿಮಳೆ, ಸ್ಫೋಟಕ ಬ್ಯಾಟಿಂಗ್‌ ಆರ್‌ಆರ್‌ಗೆ ಜಯದ ಉಡುಗೊರೆ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್‌ನಿಂದ ಬಿರುಸಿನ ಬ್ಯಾಟಿಂಗ್ ಕಾಣಸಿಕ್ಕಿತು. ಸ್ಟೀವ್ ಸ್ಮಿತ್ 69 (47 ಎಸೆತ, 4 ಫೋರ್, 4 ಸಿಕ್ಸರ್), ಸಂಜು ಸ್ಯಾಮ್ಸನ್ 74 (32 ಎಸೆತ, 1 ಫೋರ್, 9 ಸಿಕ್ಸರ್), ಜೋಫ್ರಾ ಆರ್ಚರ್ ಅಜೇಯ 27 (8 ಎಸೆತ, 4 ಸಿಕ್ಸರ್) ರನ್ ಬಾರಿಸಿದರು. ಆರ್‌ಆರ್ 20 ಓವರ್‌ ಮುಕ್ತಾಯಕ್ಕೆ 7 ವಿಕೆಟ್ ಕಳೆದು 216 ರನ್ ಬಾರಿಸಿತು.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಗೆಲುವಿನ ಸಮೀಪಕ್ಕೆ ಬಂದಿತ್ತು. ಮುರಳಿ ವಿಜಯ್ 21, ಶೇನ್ ವಾಟ್ಸನ್ 33, ಫಾಫ್ ಡು ಪ್ಲೆಸಿಸ್ 72 (37 ಎಸೆತ), ಸ್ಯಾಮ್ ಕರನ್ 17, ಕೇದಾರ್ ಜಾಧವ್ 22, ಎಂಎಸ್ ಧೋನಿ ಅಜೇಯ 29 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 200 ರನ್ ಪೇರಿಸಿತು.

ರಾಜಸ್ಥಾನ್ ಇನ್ನಿಂಗ್ಸ್‌ನಲ್ಲಿ ಚೆನ್ನೈಯ ಸ್ಯಾಮ್ ಕರನ್ 33 ರನ್‌ಗೆ 3 ವಿಕೆಟ್‌ ಪಡೆದು ಗಮನ ಸೆಳೆದರೆ, ಸಿಎಸ್‌ಕೆ ಇನ್ನಿಂಗ್ಸ್‌ನಲ್ಲಿ ಆರ್‌ಆರ್‌ನ ರಾಹುಲ್ ತೆವಾಟಿಯಾ 37 ರನ್‌ಗೆ 3 ವಿಕೆಟ್‌ನೊಂದಿಗೆ ಮಿಂಚಿದರು. ರಾಜಸ್ಥಾನ್ ರಾಯಲ್ಸ್‌ನ ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಠರೆನಿಸಿದರು. ಅಂದ್ಹಾಗೆ ಪಂದ್ಯದಲ್ಲಿ ಒಟ್ಟಗೆ 33 ಸಿಕ್ಸರ್‌ಗಳು ಸಿಡಿದಿದ್ದು ದಾಖಲಾಗಿದೆ.

Story first published: Wednesday, September 23, 2020, 0:07 [IST]
Other articles published on Sep 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+