Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ರಾಜಸ್ಥಾನ್ vs ಡೆಲ್ಲಿ, ಸಂಭಾವ್ಯ ತಂಡಗಳು, ಪಿಚ್ ರಿಪೋರ್ಟ್

IPL 2020, RR vs DC Preview, Predicted Playing XIs, Pitch Report, Toss Timing, Weather Report

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 9) ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ 23ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಡಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು ಟೂರ್ನಿಯ ಬಲಶಾಲಿ ತಂಡವಾಗಿ ಹೊರಹೊಮ್ಮಿದೆ.

ಡೆಲ್ಲಿ ಸದ್ಯದ ಪಾಯಿಂಟ್ಸ್‌ ಟೇಬಲ್‌ನಲ್ಲಿ 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ ತಂಡ ಆಡಿದ ಐದು ಪಂದ್ಯಗಳಲ್ಲಿ 2 ಜಯದೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಡೆಲ್ಲಿ +1.060 ನೆಟ್ ರನ್‌ ರೇಟ್ ಹೊಂದಿದ್ದರೆ, ರಾಜಸ್ಥಾನ್ -0.826 ರನ್‌ರೇಟ್ ಹೊಂದಿದೆ. ಹೀಗಾಗಿ ಆರ್‌ಆರ್‌ಗೆ ಇಂದಿನ ಗೆಲುವು ಬಹುಮುಖ್ಯವಾಗಿದೆ.

ಇತ್ತಂಡಗಳ ಪಂದ್ಯ ನಡೆಯುವ ಶಾರ್ಜಾ ಸ್ಟೇಡಿಯಂನಲ್ಲಿ ಅಕ್ಟೋಬರ್ 9ರಂದು 38 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ಅಂದರೆ ವಿಪರೀತ ಶೆಕೆ ಆಟಗಾರರನ್ನು ಕಾಡಲಿದೆ. ಹೇಳಿಕೇಳಿ ಶಾರ್ಜಾ ಬ್ಯಾಟಿಂಗ್ ಮೈದಾನ. ಚಿಕ್ಕ ಮೈದಾನವಾದ್ದರಿಂದ ಇಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲೂ ತಂಡಗಳು 200+ ಸ್ಕೋರ್ ದಾಖಲಿಸಿವೆ. ಪಂದ್ಯ 7.30 pmಗೆ ಆರಂಭವಾಗಲಿದ್ದು, ಟಾಸ್ 7 pmಗೆ ನಡೆಯಲಿದೆ.

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ XI
ಜೋಸ್ ಬಟ್ಲರ್ (vike), ಯಶಸ್ವಿ ಜೈಸ್ವಾಲ್, ಸ್ಟೀವನ್ ಸ್ಮಿತ್ (ಸಿ), ಸಂಜು ಸ್ಯಾಮ್ಸನ್, ಮಹಿಪಾಲ್ ಲೋಮರ್, ರಾಹುಲ್ ತೆವಾಟಿಯಾ, ಜೋಫ್ರಾ ಆರ್ಚರ್, ಟಾಮ್ ಕರನ್, ಶ್ರೇಯಸ್ ಗೋಪಾಲ್, ಅಂಕಿತ್ ರಾಜ್‌ಪೂತ್, ಕಾರ್ತಿಕ್ ತ್ಯಾಗಿ.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ XI
ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ಸಿ), ರಿಷಭ್ ಪಂತ್ (ವಿಕೆ), ಶಿಮ್ರಾನ್ ಹೆಟ್ಮೈಯರ್, ಮಾರ್ಕಸ್ ಸ್ಟೋಯಿನಿಸ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ಕಾಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ.

Story first published: Friday, October 9, 2020, 16:02 [IST]
Other articles published on Oct 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+