ಐಪಿಎಲ್ 2020: ರಾಜಸ್ಥಾನ್‌ಗೆ ಸೋಲಿನ ಕಹಿ ತೋರಿಸಿದ ಕೋಲ್ಕತ್ತಾ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2020ರಲ್ಲಿ ಸೋಲೇ ಕಂಡಿರದ ತಂಡವಾಗಿದ್ದ ರಾಜಸ್ಥಾನ್ ರಾಯಲ್ಸ್‌ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲಿನ ಕಹಿ ತೋರಿಸಿದೆ. ಬುಧವಾರ (ಸೆಪ್ಟೆಂಬರ್ 30) ನಡೆದ ಐಪಿಎಲ್ 12ನೇ ಪಂದ್ಯದಲ್ಲಿ ಆರ್‌ಆರ್ ವಿರುದ್ಧ ಕೆಕೆಆರ್ 37 ರನ್ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಶುಬ್ಮನ್ ಗಿಲ್ 47 (34 ಎಸೆತ), ಸುನಿಲ್ ನರೈನ್ 15, ನಿತೀಶ್ ರಾಣಾ 22, ಆ್ಯಂಡ್ರೆ ರಸೆಲ್ 24, ಇಯಾನ್ ಮಾರ್ಗನ್ 34, ಪ್ಯಾಟ್ ಕಮಿನ್ಸ್ 12, ಕೆ ನಗರ್ಕೋಟಿ 8 ರನ್ ಸೇರಿಸಿದರು. ಕೆಕೆಆರ್ 20 ಓವರ್‌ಗೆ 6 ವಿಕೆಟ್ ಕಳೆದು 174 ರನ್ ಮಾಡಿತು.
ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ನೀರಸ ಬ್ಯಾಟಿಂಗ್ ಪ್ರದರ್ಶಿಸಿತು. ಜೋಸ್ ಬಟ್ಲರ್ 21, ಸ್ಟಿವ್ ಸ್ಮಿತ್ 3, ಸಂಜು ಸ್ಯಾಮ್ಸನ್ 8, ರಾಹುಲ್ ತೆವಾಟಿಯಾ 14, ಟಾಮ್ ಕರನ್ 50, ಜಯದೇವ್ ಉನಾದ್ಕತ್ 9, ಅಂಕಿತ್ ರಜಪೂತ್ 6 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 137 ರನ್ ಗಳಿಸಿತು.
ಬೌಲಿಂಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್‌ನ ಜೋಫ್ರಾ ಆರ್ಚರ್ 18 ರನ್‌ಗೆ 2 ವಿಕೆಟ್ ಪಡೆದರೆ, ಕೋಲ್ಕತ್ತಾ ನೈಟ್ ರೈಡರ್ಸ್‌ನ ಶಿವಂ ಮಾವಿ, ಕಮಲೇಶ್ ನಗರ್ಕೋಟಿ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್‌ನಿಂದ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications