ಐಪಿಎಲ್ 2020: ಆರ್‌ಆರ್ vs ಕೆಕೆಆರ್, ಟಾಸ್ ರಿಪೋರ್ಟ್, ಪ್ಲೇಯಿಂಗ್ XI

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಪಂದ್ಯ ಹೆಚ್ಚು ಕುತೂಹಲಕಾರಿಯಾಗಿರಲಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್‌ಗಳಾದ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಡುತ್ತಿವೆ.
ಟಾಸ್ ಗೆದ್ದಿರುವ ರಾಜಸ್ಥಾನ್ ಬೌಲಿಂಗ್ ಆಯ್ದುಕೊಂಡಿದೆ. ಕೆಕೆಆರ್-ಆರ್‌ಆರ್ ಈ ಹಿಂದೆ ಒಟ್ಟು 21 ಸಾರಿ ಕಾದಾಡಿದ್ದವು. ಇದರಲ್ಲಿ ಎರಡೂ ತಂಡಗಳೂ ತಲಾ 10 ಪಂದ್ಯಗಳನ್ನು ಗೆದ್ದುಕೊಂಡಿವೆ. ಒಂದು ಪಂದ್ಯ ರದ್ದಾಗಿತ್ತು. ಈ ಬಾರಿ ಗೆಲ್ಲುವ ತಂಡ ಇತ್ತಂಡಗಳ ಮುಖಾಮುಖಿಯಲ್ಲಿ ಪಾರಮ್ಯ ಮೆರೆಯಲಿದೆ.
ಕೆಕೆಆರ್ ಪ್ಲೇಯಿಂಗ್ XI: ಶುಬ್ಮನ್ ಗಿಲ್, ಸುನಿಲ್ ನರೈನ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೆ/ಸಿ), ಇಯಾನ್ ಮಾರ್ಗನ್, ಆ್ಯಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಕಮಲೇಶ್ ನಾಗರ್‌ಕೋಟಿ.
ಆರ್‌ಆರ್ ಪ್ಲೇಯಿಂಗ್ XI: ಜೋಸ್ ಬಟ್ಲರ್ (ವಿಕೆ), ಸ್ಟೀವನ್ ಸ್ಮಿತ್ (ಸಿ), ಸಂಜು ಸ್ಯಾಮ್ಸನ್, ರಾಹುಲ್ ತೆವಾಟಿಯಾ, ರಾಬಿನ್ ಉತ್ತಪ್ಪ, ರಿಯಾನ್ ಪರಾಗ್, ಜೋಫ್ರಾ ಆರ್ಚರ್, ಟಾಮ್ ಕರನ್, ಶ್ರೇಯಸ್ ಗೋಪಾಲ್, ಅಂಕಿತ್ ರಾಜ್‌ಪೂತ್, ಜಯದೇವ್ ಉನಾದ್ಕತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications