For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ರಾಜಸ್ಥಾನ್ vs ಪಂಜಾಬ್: ವೈಯಕ್ತಿಕ ದಾಖಲೆಯತ್ತ ಗೇಲ್, ಸ್ಯಾಮ್ಸನ್, ಉತ್ತಪ್ಪ ಚಿತ್ತ

Ipl 2020, Rr Vs Kxip: Gayle, Samson And Uthappa Eye Personal Milestones

ಐಪಿಎಲ್ ಅಂಗಳದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ ತಂಡ ಕಿಂಗ್ಸ್ ಇಲವೆನ್ ಪಂಜಾಬ್ ತಂಡವನ್ನು ಎದುರಿಸಲು ಕಣಕ್ಕಿಳಿಯುತ್ತಿದೆ. ಶಾರ್ಜಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರನ್ ಹೊಳೆಯೇ ಹರಿಯುವ ನಿರೀಕ್ಷೆಯಿದೆ. ಈ ಪಂದ್ಯದ ಮೂಲ ಸತತ ಎರಡನೇ ಗೆಲುವನ್ನು ಕಾಣಲು ಎರಡೂ ತಂಡಗಳು ಹವಣಿಸುತ್ತಿದೆ.

ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ ಇಲವೆನ್ ಪಂಜಾಬ್ ತಂಡದ ಆಟಗಾರರು ಕೆಲವು ಪ್ರಮುಖ ಮೈಲಿಗಲ್ಲುಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದಂತಿರುವ ಶಾರ್ಜಾ ಕ್ರೀಡಾಂಗಣದಲ್ಲಿ ಯಾವೆಲ್ಲಾ ಆಟಗಾರ ಸಾಧನೆಗಳು ದಾಖಲೆ ಪುಟ ಸೇರಲಿದೆ ಎಂಬುದನ್ನು ನೋಡಲು ಕೆಲವೇ ಕಾಲ ಕಾದರೆ ಸಾಕು.

ಕ್ರಿಸ್‌ ಗೇಲ್: ಮೊದಲ ಎರಡು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆಯದ ಕ್ರಿಸ್ ಗೇಲ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕ್ರಿಸ್ ಗೇಲ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿದರೆ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುವ ಅವಕಾಶವಿದೆ. ಐಪಿಎಲ್‌ನಲ್ಲಿ 4500 ರನ್‌ಗಳಿಸಲು ಗೇಲ್‌ಗೆ ಇನ್ನು ಕೇವಲ 16 ರನ್‌ಗಳ ಅವಶ್ಯಕತೆ ಮಾತ್ರವೇ ಇದೆ. ವಿದೇಶಿ ಆಟಗಾರರ ಪೈಕಿ ಡೇವಿಡ್ ವಾರ್ನರ್ ಮಾತ್ರವೇ ಈ ಸಾಧನೆ ಮಾಡಿದ್ದಾರೆ.

ರಾಬಿನ್ ಉತ್ತಪ್ಪ: ಐಪಿಎಲ್‌ನಲ್ಲಿ 4500ರ ಗುರಿಯನ್ನು ಮುಟ್ಟಲು ಉತ್ತಪ್ಪ ಕೂಡ ಸನಿಹದಲ್ಲಿ ಇದ್ದಾರೆ. ಉತ್ತಪ್ಪಗೆ ಈ ಮೈಲಿಗಲ್ಲು ತಲುಪಲು 84 ರನ್‌ಗಳ ಅವಶ್ಯಕತೆಯಿದೆ. ಹೀಗಾಗಿ ಯಾವ ಕ್ರಮಾಂಕದಲಲ್ಇ ಬ್ಯಾಟಿಂಗ್‌ಗೆ ಇಳಿಯುತ್ತಾರೆ ಎಂಬುದು ಮುಖ್ಯವಾಗುತ್ತದೆ. ಜೊತೆಗೆ ಉತ್ತಪ್ಪ ಈ ಪಂದ್ಯದಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸಿದರೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಟಾಪ್ 10 ಆಟಗಾರರ ಪಟ್ಟಿಗೆ ಉತ್ತಪ್ಪ ಸೇರ್ಪಡೆಯಾಗಲಿದ್ದಾರೆ.

ಸಂಜು ಸ್ಯಾಮ್ಸನ್: ರಾಜಸ್ಥಾನ್ ರಾಯಲ್ಸ್ ತಂಡದ ಮೊದಲ ಪಂದ್ಯದ ಹೀರೋ ಸಂಜು ಸ್ಯಾಮ್ಸನ್ ಸಿಎಸ್‌ಕೆ ವಿರುದ್ಧ ಶಾರ್ಜಾ ಅಂಗಳದಲ್ಲೇ ನಡೆದ ಪಂದ್ಯದಲ್ಲಿ 9ಸಿಕ್ಸರ್ ಸಿಡಿಸಿ ಮಿಂಚಿದ್ದರು. ಇಂದಿನ ಪಮದ್ಯದಲ್ಲಿ ಸಂಜು ಕೇವಲ 3 ಸಿಕ್ಸರ್ ಸಿಡಿಸಿದರೆ ಐಪಿಎಲ್‌ನಲ್ಲಿ 100 ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.

Story first published: Tuesday, October 6, 2020, 15:25 [IST]
Other articles published on Oct 6, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+