ಐಪಿಎಲ್ 2020: ರಾಜಸ್ಥಾನ್ vs ಮುಂಬೈ, ಟಾಸ್ ವರದಿ, ಪ್ಲೇಯಿಂಗ್ 11

ಐಪಿಎಲ್ 13ನೇ ಆವೃತ್ತಿಯ 45ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಪ್ಲೇ ಆಫ್ ಹಂತಕ್ಕೇರಲು ಸ್ಪರ್ಧೆಯಲ್ಲಿರಬೇಕಾದರೆ ಈ ಪಂದ್ಯ ರಾಜಸ್ಥಾನ್ ಪಾಲಿಗೆ ತುಂಬಾ ಮಹತ್ವದ್ದಾಗಿದೆ.
ಆರಂಭದಲ್ಲಿ ಅದ್ಭುತ ಪಂದ್ಯಗಳನ್ನಾಡಿದ ಬಳಿಕ ರಾಜಸ್ಥಾನ್ ಟೂರ್ನಿಯಲ್ಲಿ ಸಂಪೂರ್ಣವಾಗಿ ಕಳೆಗುಂದಿದೆ. ತಂಡದಲ್ಲಿ ಒಗ್ಗಟ್ಟಿನ ಪ್ರದರ್ಶನಗಳು ಬಂದಿಲ್ಲ. ಕ್ರಮಾಂಕಗಳ ಬಗ್ಗೆಯೂ ಸಾಕಷ್ಟು ಗೊಂದಲಗಳು ತಂಡದಲ್ಲಿ ಇದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮುನ್ನುಗ್ಗುತ್ತಿದೆ.
ಇಂದಿನ ಪಂದ್ಯದಲ್ಲೂ ಮುಂಬೈ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿದಿಲ್ಲ. ಹಾಗಾಗಿ ನಾಯಕನಾಗಿ ಕಿರಾನ್ ಪೊಲಾರ್ಡ್ ಇಂದು ಕೂಡ ಮುನ್ನಡೆಸುತ್ತಿದ್ದಾರೆ. ಮುಂಬೈ ಇಂದಿಯನ್ಸ್ ತಂಡದಲ್ಲಿ ಇಂದು ಒಂದು ವದಲಾವಣೆ ಮಾಡಿಕೊಳ್ಳಲಾಗಿದ್ದು ಕೌಲ್ಟರ್‌ನೈಲ್ ಬದಲಿಗೆ ಪಾಟಿನ್ಸನ್ ಆಡುವ ಬಳಗವನ್ನು ಸೇರಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಕಳೆದ ಪಂದ್ಯದಲ್ಲಿ ಆಡಿದ ತಂಡದಲ್ಲೇ ಕಣಕ್ಕಿಳಿದಿದೆ.
ಮುಂಬೈ ಇಂಡಿಯನ್ಸ್ ಆಡುವ ಬಳಗ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ (ನಾಯಕ), ಕೃನಾಲ್ ಪಾಂಡ್ಯ, ಜೇಮ್ಸ್ ಪ್ಯಾಟಿನ್ಸನ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ
ರಾಜಸ್ಥಾನ್ ರಾಯಲ್ಸ್ ಆಡುವ ಬಳಗ: ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜೋಸ್ ಬಟ್ಲರ್, ಸ್ಟೀವನ್ ಸ್ಮಿತ್ (ನಾಯಕ), ರಿಯಾನ್ ಪರಾಗ್, ರಾಹುಲ್ ತಿವಾಟಿಯಾ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಅಂಕಿತ್ ರಾಜ್‌ಪೂತ್, ಕಾರ್ತಿಕ್ ತ್ಯಾಗಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications