Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ರಾಜಸ್ಥಾನ್ ಮೇಲೆ ಸವಾರಿ ಮಾಡಿದ ಮನೀಶ್, ಹೈದರಾಬಾದ್‌ಗೆ ಭರ್ಜರಿ ಗೆಲುವು

IPL 2020: RR vs SRH Match 40 highlights in kannada

ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಸುಲಭ ಗೆಲುವನ್ನು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ನಿರ್ಣಾಯಕ ಗೆಲುವನ್ನು ಹೈದರಾಬಾದ್ ತನ್ನದಾಗಿಸಿಕೊಂಡಿದೆ. ಮನೀಶ್ ಪಾಂಡೆಯ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮುಂದೆ ರಾಜಸ್ಥಾನ್ ರಾಯಲ್ಸ್ ಸಂಪೂರ್ಣವಾಗಿ ತಲೆಬಾಗಿದೆ.

ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲಿಗೆ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಟೂರ್ನಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಜೇಸನ್ ಹೋಲ್ಡರ್ ಅದ್ಭುತ ಬೌಲಿಂಗ್ ಪ್ರದರ್ಶನದ ಸಹಾಯದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ 154 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು.

ಆರ್‌ಆರ್ ಸವಾಲಿನ ಮೊತ್ತ

ಆರ್‌ಆರ್ ಸವಾಲಿನ ಮೊತ್ತ

ಆರ್‌ಆರ್ ಪರವಾಗಿ ಉತ್ತಪ್ಪ 19 ರನ್ ಸ್ಟೋಕ್ಸ್ 30ರನ್, ಸಂಜು ಸ್ಯಾಮ್ಸನ್ 36ರನ್‌ಗಳ ಕೊಡುಗೆಯನ್ನು ನೀಡಿದರು. ಅಂತಿಮ ಹಂತದಲ್ಲಿ ಜೋಫ್ರಾ ಆರ್ಚರ್ 7 ಎಸೆಗಳನ್ನು ಎದುರಿಸಿ 16 ರನ್ ಗಳಿಸಿ 154 ರನ್‌ಗಳ ಗೌರವಯುತ ಮೊತ್ತ ಪೇರಿಸಲು ಕಾರಣರಾದರು.

ಆರಂಭದಲ್ಲೇ ಹೈದರಾಬಾದ್‌ಗೆ ಆಘಾತ

ಆರಂಭದಲ್ಲೇ ಹೈದರಾಬಾದ್‌ಗೆ ಆಘಾತ

ರಾಜಸ್ಥಾನ್ ರಾಯಲ್ಸ್ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಆರಂಭದಲ್ಲಿ ದೊಡ್ಡ ಆಘಾತಕ್ಕೆ ಗುರಿಯಾಯಿತು. ತನ್ನ ಇನ್ನಿಂಗ್ಸ್‌ನ ನಾಲ್ಕನೇ ಎಸೆತದಲ್ಲೇ ನಾಲ್ಕು ರನ್ ಗಳಿಸಿದ್ದ ನಾಯಕ ಡೇವಿಡ್ ವಾರ್ನರ್ ವಿಕೆಟನ್ನು ಕಳೆದುಕೊಂಡಿತ್ತು ಹೈದರಾಬಾದ್. ಬಳಿಕ 16 ರನ್ ಆಗುವಷ್ಟರಲ್ಲಿ ಇನ್ನೋರ್ವ ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್ ಕೂಡ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಸನ್‌ರೈಸರ್ಸ್ ಗೆಲುವಿನ ಹಾದಿ ಕಠಿಣವಿದೆ ಎನಿಸಿತ್ತು.

ಜೊತೆಯಾದ ಮನೀಶ್-ವಿಜಯ್

ಜೊತೆಯಾದ ಮನೀಶ್-ವಿಜಯ್

ಆದರೆ ಬಳಿಕ ಜೊತೆಯಾದ ಮನಿಶ್ ಪಾಂಡೆ ಹಾಗೂ ವಿಜಯ್ ಶಂಕರ್ ಭರ್ಜರಿ ಜೊತೆಯಾಟವನ್ನು ನೀಡಿದರು. ಮಾತ್ರವಲ್ಲದೆ ಇಬ್ಬರೂ ವಿಕೆಟ್ ಕಳೆದುಕೊಳ್ಳದೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಮನೀಶ್ ಪಾಂಡೆ 47 ಎಸೆತಗಳಲ್ಲಿ 83 ರನ್ ಗಳಿಸಿ ಗೆಲುವಿನ ರುವಾರಿ ಎನಿಸಿದರು.

ಭರ್ಜರಿ ಪ್ರದರ್ಶನ

ಭರ್ಜರಿ ಪ್ರದರ್ಶನ

ಈ ಇನ್ನಿಂಗ್ಸ್‌ನಲ್ಲಿ ಮನೀಶ್ ಭರ್ಜರಿ 8 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದ್ದಾರೆ. ಇವರಿಗೆ ಉತ್ತಮ ಸಾಥ್ ನೀಡಿದ ವಿಜಯ್ ಶಂಕರ್ 51 ಎಸೆತಗಳಲ್ಲಿ 52 ರನ್ ಗಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಈ ಜೋಡಿ 140 ರನ್‌ಗಳ ಅಜೇಯ ಜೊತೆಯಾಟವನ್ನು ನೀಡಿದೆ. ಈ ಸೋಲಿನ ಮೂಲಕ ಆರ್‌ಆರ್ ಕೂಡ ತನ್ನ ಪ್ಲೇ ಆಫ್ ಹಾದಿಯನ್ನು ಬಹುತೇಕ ಮುಚ್ಚಿಕೊಂಡಿದೆ.

Story first published: Friday, October 23, 2020, 10:15 [IST]
Other articles published on Oct 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+