ರವೀಂದ್ರ ಜಡೇಜಾ 'ಅನ್‌ಫಿಟ್' ಎಂದು ಮತ್ತೆ ಟ್ರೋಲ್ ಆದ ಸಂಜಯ್ ಮಂಜ್ರೇಕರ್

ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತಮ್ಮ ವಿವಾದಾತ್ಮಕ ಹೇಳಿಕೆ ಹಾಗೂ ಟ್ವೀಟ್‌ಗಳಿಂದ ಯಾವಾಗಲೂ ಸುದ್ದಿಯಲ್ಲಿರುವ ವ್ಯಕ್ತಿ. ಈಗ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಅದಕ್ಕೆ ಕಾರಣ ರವೀಂದ್ರ ಜಡೇಜಾ ಬಗ್ಗೆ ಸಂಜಯ್ ಮಂಜ್ರೇಕರ್ ಮಾಡಿದ ಒಂದು ಟ್ವೀಟ್. ರವೀಂದ್ರ ಜಡೇಜಾ ಅವರನ್ನು ಕೆಣಕಲು ಹೋಗಿ ಮಂಜ್ರೇಕರ್ ತಾವೇ ಹಳ್ಳಕ್ಕೆ ಬಿದ್ದಿದ್ದಾರೆ.
ಕೊಲ್ಕತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ ಚೆನ್ನೈ ತಂಡ ಶ್ರೇಷ್ಠ ಪ್ರದರ್ಶನವನ್ನು ನೀಡಿ ಗೆಲುವು ಸಾಧಿಸಿತ್ತು. ಋತುರಾಜ್ ಗಾಯಕ್ವಾಡ್ ಅದ್ಭುತ ಬ್ಯಾಟಿಂಗ್‌ನ ನಂತರ ಅಂತಿಮ ಹಂತದಲ್ಲಿ ರವೀಂದ್ರ ಜಡೇಜಾ ಸ್ಪೋಟಕ ಪ್ರದರ್ಶನವನ್ನು ನೀಡಿದ್ದರು. ಅದರಲ್ಲೂ ಅಂತಿಮ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಸಿಡಿಸಿ ಜಯವನ್ನು ಸಾರಿದರು. ಈ ಮೂಲಕ ತಂಡದ ಗೆಲುವಿಗೆ ಜಡೇಜಾ ಕಾರಣರಾದರು. ಜಡೇಜಾ ಅವರ ಈ ಇನ್ನಿಂಗ್ಸ್ ಮಂಜ್ರೇಕರ್‌ಗೆ ಸಂಕಷ್ಟವನ್ನುಂಟು ಮಾಡಿದೆ.
ಅಭಿಮಾನಿಯಿಂದ ಪ್ರಶ್ನೆ
ರವೀಂದ್ರ ಜಡೇಜಾ ಅವರನ್ನು ಟೀಮ್ ಇಂಡಿಯಾಗೆ ಆಯ್ಕೆ ಮಾಡಿರುವ ಬಗ್ಗೆ ಅಭಿಮಾನಿಯೋರ್ವ ಟ್ವಿಟ್ಟರ್‌ನಲ್ಲಿ ಮಂಜ್ರೇಕರ್ ಅವರಲ್ಲಿ ಪ್ರಶ್ನೆಯನ್ನು ಮಾಡಿದ್ದರು. "ರವೀಂದ್ರ ಜಡೇಜಾ ಅವರ ಬಗ್ಗೆ ಎರಡು ಮಾತುಗಳನ್ನಾಡಿ. ಅತ ಟಿ20 ತಂಡಕ್ಕೆ ಉತ್ತಮ ಆಯ್ಕೆಯಲ್ಲ. ಆತನಿಗಿಂತ ಅಕ್ಷರ್ ಪಟೇಲ್ ಉತ್ತಮ ಆಯ್ಕೆಯಾಗಿರಬಹುದಿತ್ತು" ಎಂದು ಅಬಿಮಾನಿ ಹೇಳಿಕೊಂಡಿದ್ದರು.
'ಸಂಪೂರ್ಣ ಒಪ್ಪಿಕೊಳ್ಳುತ್ತೇನೆ'
ಅಭಿಮಾನಿಯ ಅಭಿಪ್ರಾಯಕ್ಕೆ ಮಂಜ್ರೇಕರ್ "ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ" ಎಂದು ಪ್ರತಿಕ್ರಿಯಿಸಿದ್ದರು. ಹೀಗೆ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯಿಸಿದ ಮುಂದಿನ ಪಂದ್ಯದಲ್ಲೇ ಜಡೇಜಾ ಅದ್ಭುತವಾಗಿ ಆಡಿ ತಂಡದ ಗೆಲುವಿಗೆ ಕಾರಣರಾಗಿದ್ದಾರೆ. ಈ ಕಾರಣಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಜಡೇಜಾ ಅವರನ್ನು ಸರಿಯಾಗಿ ಟ್ರೋಲ್ ಮಾಡುತ್ತಿದ್ದಾರೆ.
ಮಂಜ್ರೇಕರ್‌ಗೆ ಇದು ಮೊದಲಲ್ಲ
ಸಂಜಯ್ ಮಂಜ್ರೇಕರ್ ಟ್ರೋಲ್, ವಿವಾದಕ್ಕೆ ಒಳಗಾಗಿವುದು ಇದು ಮೊದಲನೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಈ ಅನುಭವ ಪಡೆದುಕೊಂಡಿದ್ದಾರೆ. ರವೀಂದ್ರ ಜಡೇಜಾ ಬಗ್ಗೆಯೇ ಕಳೆದ ವಿಶ್ವಕಪ್ ಸಂದರ್ಭದಲ್ಲಿ ಮಾಡಿದ ಕಾಮೆಂಟ್ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದು ಬಳಿಕ ಮಂಜ್ರೇಕರ್ ಅವರನ್ನು ಬಿಸಿಸಿಐ ಕಾಮೆಂಟರಿ ಪ್ಯಾನೆಲ್‌ನಿಂದ ತೆಗೆದುಹಾಕಲು ಕಾರಣವಾಗಿತ್ತು.
ರಬ್ಬಿಶ್ ಹೇಳಿಕೆ ಎಂದಿದ್ದರು ಶ್ರೀಕಾಂತ್
ಇನ್ನು ಇತ್ತೀಚೆಗಷ್ಟೇ ಕೆಎಲ್ ರಾಹುಲ್ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿದ ವಿಚಾರವನ್ನು ಪ್ರಶ್ನಿಸಿದ್ದ ಮಂಜ್ರೇಕರ್ ಅವರನ್ನು ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಹಿಗ್ಗಾಮುಗ್ಗ ಜಾಡಿಸಿದ್ದರು. 'ಮಂಜ್ರೇಕರ್‌ಗೆ ಮಾಡಲು ಕೆಲಸವಿಲ್ಲ. ಹಾಗಾಗಿ ಈ ರೀತಿಯ ರಬ್ಬಿಶ್ ಹೇಳಿಕೆಯನ್ನು ನೀಡುತ್ತಾರೆ. ಬಾಂಬೆ ಬಿಟ್ಟರೆ ಬೇರೆ ಸಂಗತಿಯೇ ಅವರಿಗೆ ಕಾಣಿಸುವುದಿಲ್ಲ' ಎಂದು ಖಡಕ್ಕಾಗಿ ತಿರುಗೇಟು ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications