ಸೆ. 6ರ ಭಾನುವಾರ ಐಪಿಎಲ್ 2020 ವೇಳಾಪಟ್ಟಿ ಬಿಡುಗಡೆ: ಬ್ರಿಜೇಶ್ ಪಟೇಲ್

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿ ಸೆಪ್ಟೆಂಬರ್ 6ರ ಭಾನುವಾರ ಬಿಡುಗಡೆಯಾಗಲಿದೆ. ಶನಿವಾರ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಈ ವಿಚಾರವನ್ನು ತಿಳಿಸಿದ್ದಾರೆ.
2020ರ ಐಪಿಎಲ್, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ. ಈಗಾಗಿ ಅಭಿಮಾನಿಗಳು ಐಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗುವುದನ್ನೇ ಕಾಯುತ್ತಿದ್ದಾರೆ. ಶುಕ್ರವಾರ ಅಥವಾ ಶನಿವಾರ ವೇಳಾಪಟ್ಟಿ ಪ್ರಕಟಗೊಳ್ಳುವ ನಿರೀಕ್ಷೆಯಿತ್ತಾದರೂ ಭಾನುವಾರ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಬ್ರಿಜೇಶ್ ಖಾತರಿಪಡಿಸಿದ್ದಾರೆ.
'ಐಪಿಎಲ್ ವೇಳಾಪಟ್ಟಿ ನಾಳೆ (ಭಾನುವಾರ) ಬಿಡುಗಡೆಯಾಗಲಿದೆ,' ಎಂದು ಎಎನ್‌ಐ ಜೊತೆ ಮಾತನಾಡಿದ ಬ್ರಿಜೇಶ್ ತಿಳಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಐಪಿಎಲ್ ವೇಳಾಪಟ್ಟಿ ವಿಳಂಬಗೊಳ್ಳಲು ಕಾರಣ ಏನೆಂದರೆ ಬಿಸಿಸಿಐಯು ಹೊಂದಾಣಿಕೆಯ ವೇಳಾಪಟ್ಟಿಯತ್ತ ಎದುರು ನೋಡುತ್ತಿದೆ.
ಹೊಂದಾಣಿಕೆಯ ವೇಳಾಪಟ್ಟಿ ಅಂದರೆ ಒಂದು ವೇಳೆ, ವೇಳಾಪಟ್ಟಿ ಬದಲಿಸಬೇಕಾಗಿ ಬಂದರೆ ನಿಧಾನವಾಗಿಯಾದರೂ ಬದಲಾಯಿಸಲು ಅವಕಾಶವಿರುವ ವೇಳಾಪಟ್ಟಿ. ಅಂದ್ಹಾಗೆ, ಕಳೆದ ಆಗಸ್ಟ್‌ನಲ್ಲೇ ವೇಳಾಪಟ್ಟಿ ಪ್ರಟಕವಾಗಬೇಕಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದ್ದರಿಂದ ಬಿಸಿಸಿಐ ಸಮಯ ತೆಗೆದುಕೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications