ಐಪಿಎಲ್ 2020: ಪ್ರಸಕ್ತ ಐಪಿಎಲ್‌ನ ಅದ್ಭುತ ಯಾರ್ಕರ್ ಬೌಲರನ್ನು ಹೆಸರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್

ಸತತ ಸೋಲಿನಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈಗ ಗೆಲುವಿನ ಲಯಕ್ಕೆ ಮರಳಿದೆ. ಸತತ ಮೂರನೇ ಗೆಲುವನ್ನು ಸಾಧಿಸುಕೊಳ್ಳುವ ಮೂಲಕ ಟೂರ್ನಿಯಲ್ಲಿ ಜೀವಂತವಾಗಿರುವ ಭರವಸೆಯನ್ನು ಉಳಿಸಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯವನ್ನು ಗಳಿಸಿದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಮಾತನಾಡಿದ್ದು ತಂಡದ ಬೌಲರ್ ಓರ್ವನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಶ್ರೇಷ್ಠ ಯಾರ್ಕರ್ ಬೌಲರ್ ಯಾರು ಎಂಬುದನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರಿಸಿದ್ದಾರೆ. ತಮ್ಮ ತಂಡದ ಸಹ ಆಟಗಾರನಾಗಿರುವ ಟೀಮ್ ಇಂಡಿಯಾದ ಬೌಲರ್ ಮೊಹಮದ್ ಶಮಿಯನ್ನು ಮ್ಯಾಕ್ಸ್‌ವೆಲ್ ಅದ್ಭುತ ಯಾರ್ಕರ್ ಬೌಲರ್ ಎಂದಿದ್ದಾರೆ.
"ಬಹುಶಃ ನನಗಿಸುತ್ತದೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮೊಹಮದ್ ಶಮಿ ಅತ್ಯುತ್ತಮ ಯಾರ್ಕರ್ ಬೌಲರ್ ಆಗಿದ್ದಾರೆ. ಒತ್ತಡದಲ್ಲಿ ಅವರು ನಿಖರವಾಗಿ ಎಸೆಯುವ ಎಸೆತಗಳು ಪರಿಣಾಮಕಾರಿಯಾಗಿರುತ್ತದೆ. ಮುಂಬೈ ವಿರುದ್ದದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಶಮಿ ಮಾಡಿದ ಓವರ್‌ಅನ್ನು ನಾವೆಲ್ಲ ಗಮನಿಸಿದ್ದೇವೆ" ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
'ನಮ್ಮ ಪಾಲಿಗೆ ಆತ ವಿಭಿನ್ನವಾದ ಆಟಗಾರ. ನಾವು ಅಂದುಕೊಂಡ ಸ್ಕೋರ್‌ಗಿಂತ 10-15 ರನ್‌ಗಳನ್ನು ಉಳಿಸಿಕೊಡುವ ಬೌಲರ್ ಶಮಿ. ನಮ್ಮ ತಂಡಕ್ಕೆ ಶಮಿ ಶ್ರೇಷ್ಠವಾದ ಆಟಗಾರ' ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಶಮಿ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತನ್ನ ಮುಮದಿನ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅಕ್ಟೋಬರ್ 24 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications