ಐಪಿಎಲ್ 2020: ಯುವ ಸ್ಪಿನ್ನರ್‌ಗಳಿಗೆ ಆಸ್ಟ್ರೇಲಿಯಾ ದಿಗ್ಗಜ ಶೆನ್ ವಾರ್ನ್ ಅಮೂಲ್ಯ ಸಲಹೆ

ಆಸ್ಟ್ರೇಲಿಯಾ ಕ್ರಿಕೆಟ್‌ನ ಮಾಜಿ ದಿಗ್ಗಜ ಆಟಗಾರ, ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಶೇನ್ ವಾರ್ನ್ ತಂಡದ ಯುವ ಆಟಗಾರರಿಗೆ ಕೆಲ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಆರ್‌ಆರ್ ತಂಡದಲ್ಲಿರುವ ಯುವ ಸ್ಪಿನ್ ಬೌಲರ್‌ಗಳಾದ ರಾಹುಲ್ ತೆವಾಟಿಯಾ ಹಾಗೂ ಶ್ರೇಯಸ್ ಗೋಪಾಲ್ ಈ ಸಲಹೆಗಳನ್ನು ಪಡೆದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್ ಪಡೆದಿರುವ ಶೇನ್ ವಾರ್ನ್ ರಾಹುಲ್ ತೆವಾಟಿಯಾ ಹಾಗೂ ಶ್ರೇಯಸ್ ಗೋಪಾಲ್‌ಗೆ ಸಲಹೆಗಳನ್ನು ನೀಡಿದ್ದಾರೆ. ಟ್ವೀಟ್ಟರ್‌ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು ಇದರಲ್ಲಿ ಶೇನ್ ವಾರ್ನ್ ತಾಂತ್ರಿಕ ಕೌಶಲ್ಯದ ಬಗ್ಗೆ ಯುವ ಆಟಗಾರರಿಗೆ ಸಲಹೆಗಳನ್ನು ನೀಡಿದ್ದಾರೆ.
ಲೆಗ್‌ಸ್ಪಿನ್ನರ್‌ಗಳಾಗಿ ಯಾವ ರೀತಿಯ ರಣತಂತ್ರವನ್ನು ಹೆಣೆಯಬೇಕು ಹಾಗೂ ಅದಕ್ಕೆ ಪೂರಕವಾಗಿ ಯಾವ ರೀತಿಯಲ್ಲಿ ಫೀಲ್ಡಿಂಗ್ ರಚನೆ ಮಾಡಿಕೊಳ್ಳಬೆಕು ಎಂಬ ಬಗ್ಗೆ ಶೇನ್ ವಾರ್ನ್ ಸಲಹೆಗಳನ್ನು ನೀಡಿದ್ದಾರೆ. "ಒತ್ತಡದ ಸಂದರ್ಭದಲ್ಲಿ ಮುಖ್ಯವಾದ ಮತ್ತೊಂದು ಸಂಗತಿಯೆಂದರೆ ತಾನು ಇಂತಾ ಸಂದರ್ಭದಲ್ಲಿ ಆತುರವಾಗಿ ಬೌಲಿಂಗ್ ಮಾಡಬಾರದು" ಎಂದು ವಾರ್ನ್ ಈ ವಿಡಿಯೋದಲ್ಲಿ ಹೇಳಿದ್ದಾರೆ.
ಇನ್ನು ಮಾಜಿ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದು ಲೆಗ್ ಸ್ಪಿನ್ನರ್‌ಗಳಿಗೆ ದಿಗ್ಗಜ ಅಟಗಾರ ಶೇನ್ ವಾರ್ನ್ ಅವರಿಂದ ಕಲಿತುಕೊಳ್ಳಲು ಅತ್ಯುತ್ತಮ ಅವಕಾಶವಿದು ಎಂದು
ಬರೆದುಕೊಂಡಿದ್ದಾರೆ. "ನಿಮ್ಮಿಂದ ಯುವ ಲೆಗ್ ಸ್ಪಿನ್ನರ್‌ಗಳಿಗೆ ಕಲಿಯಲು ಅತ್ಯುತ್ತಮ ಅವಕಾಶ. ಅದರಲ್ಲೂ ಮಯಾಂಕ್ ಮಾರ್ಕಾಂಡೆ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕು" ಎಂದು ಯುವಿ ಟ್ವಿಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications