ಅತ್ಯಧಿಕ ಜೊತೆಯಾಟ: ಶೇನ್ ವಾಟ್ಸನ್-ಫಾಫ್ ಡು ಪ್ಲೆಸಿಸ್ ಹೊಸ ದಾಖಲೆ!

ದುಬೈ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಬಳಿಕ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಾಲು ಸಾಲಾಗಿ 3 ಪಂದ್ಯಗಳನ್ನು ಸೋತಿತ್ತು. ಆದರೆ ಭಾನುವಾರ (ಅಕ್ಟೋಬರ್ 4) ನಡೆದ ಐಪಿಎಲ್ 18ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಎಂಎಸ್ ಧೋನಿ ನಾಯಕತ್ವದ ಚೆನ್ನೈ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಸತತ ಮೂರು ಸೋಲುಗಳಿಂದಾಗಿ ಐಪಿಎಲ್ ಅಂಕಪಟ್ಟಿಯ ತಳ ಸೇರಿದ್ದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಗೆಲುವು ತಂದಿದ್ದು ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶೇಟ್ ವಾಟ್ಸನ್ ಮತ್ತು ಫಾಫ್ ಡು ಪ್ಲೆಸಿಸ್ ಅವರ ಅದ್ಭುತ ಜೊತೆಯಾಟ.
ಶೇನ್ ವಾಟ್ಸನ್ ಮತ್ತು ಫಾಫ್ ಡು ಪ್ಲೆಸಿಸ್ ಅವರ ಈ ಜೊತೆಯಾಟ ಐಪಿಎಲ್ ಇತಿಹಾಸದಲ್ಲಿ ಎರಡು ಪ್ರಮುಖ ದಾಖಲೆಗಳಿಗೂ ಕಾರಣವಾಗಿದೆ.

ಎರಡನೇ ಅತ್ಯಧಿಕ ಜೊತೆಯಾಟ
ವಾಟ್ಸನ್ ಮತ್ತು ಡು ಪ್ಲೆಸಿಸ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನೀಡಿರುವ ಜೊತೆಯಾಟ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಜೊತೆಯಾಟದ ರನ್ ಆಗಿ ಗುರುತಿಸಲ್ಪಟ್ಟಿದೆ. ಇಬ್ಬರೂ ಸೇರಿ ಅಜೇಯ 181 ರನ್ ಜೊತೆಯಾಟ ನೀಡಿದ್ದರು. ಇದಕ್ಕೂ ಮೊದಲು 2017ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಗೌತಮ್ ಗಂಭೀರ್ ಮತ್ತು ಕ್ರಿಸ್ ಲಿನ್ ಅವರು ಗುಜರಾತ್ ಲಯನ್ಸ್ ವಿರುದ್ಧ ನೀಡಿದ್ದ 184 ರನ್ ಜೊತೆಯಾಟ ಅತ್ಯಧಿಕ ಜೊತೆಯಾಟವಾಗಿ ಗುರುತಿಸಿಕೊಂಡಿದೆ.

10 ವಿಕೆಟ್ ಜಯದಲ್ಲಿ ಅತ್ಯಧಿಕ ಜೊತೆಯಾಟ
* 184 ರನ್, ಗೌತಮ್ ಗಂಭೀರ್-ಕ್ರಿಸ್ ಲಿನ್ (ಕೆಕೆಆರ್) vs ಗುಜರಾತ್ ಲಯನ್ಸ್, ರಾಜ್‌ಕೋಟ್, 2017
* 181 ಶೇನ್ ವಾಟ್ಸನ್-ಫಾಫ್ ಡು ಪ್ಲೆಸಿಸ್ (ಸಿಎಸ್‌ಕೆ) vs ಕಿಂಗ್ಸ್ XI ಪಂಜಾಬ್, ದುಬೈ, 2020
* 163 ರನ್, ಸಚಿನ್ ತೆಂಡೂಲ್ಕರ್-ಡ್ವೇನ್ ಸ್ಮಿತ್ (ಎಂಐ) vs ರಾಜಸ್ಥಾನ್ ರಾಯಲ್ಸ್, ಜೈಪುರ್, 2012
* ಆ್ಯಡಮ್ ಗಿಲ್‌ಕ್ರಿಸ್-ವಿವಿಎಸ್ ಲಕ್ಷ್ಮಣ್ (ಡೆಕ್ಕನ್ ಚಾರ್ಜರ್ಸ್) vs ಮುಂಬೈ ಇಂಡಿಯನ್ಸ್, ಮುಂಬೈ, 2008

ಸಿಎಸ್‌ಕೆ ಪರ ಅತ್ಯಧಿಕ ಆರಂಭಿಕ ಜೊತೆಯಾಟ
* 181* ರನ್, ಶೇನ್ ವಾಟ್ಸನ್-ಫಾಫ್ ಡು ಪ್ಲೆಸಿಸ್, vs ಕಿಂಗ್ಸ್ XI ಪಂಜಾಬ್, ದುಬೈ, 2020
* 159 ರನ್, ಮೈಕಲ್ ಹಸ್ಸಿ-ಮುರುಳಿ ವಿಜಯ್, vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ, 2011
* 139* ರನ್, ಮೈಕಲ್ ಹಸ್ಸಿ-ಮುರುಳಿ ವಿಜಯ್, vs ಕಿಂಗ್ಸ್ ಇಲೆವೆನ್ ಪಂಜಾಬ್, ಮೊಹಾಲಿ, 2013
* 134 ರನ್, ಶೇನ್ ವಾಟ್ಸನ್-ಅಂಬಾಟಿ ರಾಯುಡು, vs ಸನ್ ರೈಸರ್ಸ್ ಹೈದರಾಬಾದ್, ಪೂಣೆ, 2018

ಈ ಐಪಿಎಲ್‌ನ 18ನೇ ಪಂದ್ಯದ ಫಲಿತಾಂಶ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್, ಕೆಎಲ್ ರಾಹುಲ್ 63, ಮಯಾಂಕ್ ಅಗರ್ವಾಲ್ 26, ಮನ್‌ದೀಪ್ ಸಿಂಗ್ 27, ನಿಕೋಲಸ್ ಪೂರನ್ 33, ಗ್ಲೆನ್ ಮ್ಯಾಕ್ಸ್‌ವೆಲ್ 11, ಸರ್ಫರಾಜ್ ಖಾನ್ 14 ರನ್‌ನೊಂದಿಗೆ ಪಂಜಾಬ್ 20 ಓವರ್‌ಗೆ 4 ವಿಕೆಟ್ ಕಳೆದು 178 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್, ಶೇನ್ ವಾಟ್ಸನ್ 83 (53 ಎಸೆತ), ಫಾಫ್ ಡು ಪ್ಲೆಸಿಸ್ 87 (53 ಎಸೆತ) ಸೇರಿಸಿದ್ದರಿಂದ ಸಿಎಸ್‌ಕೆ ತಂಡ 17.4ನೇ ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 181 ರನ್ ಗುರಿ ತಲುಪಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications