For Quick Alerts
ALLOW NOTIFICATIONS  
For Daily Alerts
 

ಐಪಿಎಲ್ : ವಿಶಿಷ್ಠ ದಾಖಲೆಗೆ ಕಾರಣವಾಗುತ್ತಿದೆ ಶಾರ್ಜಾ ಕ್ರಿಕೆಟ್ ಸ್ಟೆಡಿಯಂ

IPL 2020: Sharjah Cricket Stadium claims a unique record

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಬ್ಯಾಟ್ಸ್‌ಮನ್‌ಗಳ ಪಾಲಿನ ಸ್ವರ್ಗವಾಗಿ ಮುಂದುವರೆಯುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 13ರ ಆವೃತ್ತಿಯಲ್ಲೂ ಅತ್ಯಧಿಕ ರನ್‌ ಟೋಟಲ್‌ ಈ ಸ್ಟೇಡಿಯಂನಲ್ಲಿ ದಾಖಲಾಗಿದೆ. ಈ ಸ್ಟೇಡಿಯಂನಲ್ಲಿ ನಡೆದ ಹೆಚ್ಚಿನ ಪಂದ್ಯಗಳಲ್ಲಿ ಎರಡೂ ತಂಡಗಳು 200+ ರನ್ ಕಲೆ ಹಾಕಿದೆ.

ಚಿಕ್ಕ ಗ್ರೌಂಡ್‌ನಲ್ಲಿ ಸಿಕ್ಸ್ ಫೋರ್‌ಗಳ ಸುರಿಮಳೆ ಸಹಜ. ಹೆಚ್ಚು ರನ್‌ ಟೋಟಲ್ ಬಿದ್ದರೆ ಪಂದ್ಯವೂ ರೋಚಕವೆನಿಸುತ್ತದೆ. ಕ್ರಿಕೆಟ್ ಪ್ರಿಯರಿಗೆ ಬ್ಯಾಟಿಂಗ್ ವೀಕ್ಷಣೆಯ ರಸದೌತೌನೂ ಸಿಗುತ್ತದೆ. ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚು ಮನರಂಜನೆಗೆ ಕಾರಣವಾದ ಸ್ಟೆಡಿಯಂಗಳಲ್ಲಿ ಶಾರ್ಜಾ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

ಶಾರ್ಜಾ ಸ್ಟೇಡಿಯಂನಲ್ಲಿ ಈ ಆವೃತ್ತಿಯ ಮೊದಲ ಪಂದ್ಯ ನಡೆದಿದ್ದು ಸೆಪ್ಟೆಂಬರ್ 22ರಂದು. ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಅಂದು ಕಾದಾಡಿದ್ದವು. ಎರಡೂ ತಂಡಗಳು ಆವತ್ತು 200+ ರನ್ (ಆರ್‌ಆರ್ 216 ರನ್, ಸಿಎಸ್‌ಕೆ 200 ರನ್) ಗಳಿಸಿತ್ತು. ಅಷ್ಟೇ ಅಲ್ಲ, ಭರ್ಜರಿ 33 ಸಿಕ್ಸರ್‌ಗಳು ದಾಖಲಾಗಿದ್ದವು.

ಆ ಬಳಿಕ ಸೆಪ್ಟೆಂಬರ್ 27ರಂದೂ ನಡೆದಿದ್ದ ಪಂದ್ಯದಲ್ಲಿ ಭರ್ಜರಿ ಟೋಟಲ್ ಸಿಕ್ಕಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ 223, ರಾಜಸ್ಥಾನ್ ರಾಯಲ್ಸ್ 226 ರನ್ ಬಾರಿಸಿತ್ತು. ಆವತ್ತು ಕೂಡ 29 ಸಿಕ್ಸರ್‌ಗಳು ಸಿಡಿದಿದ್ದವು. ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 4 ವಿಕೆಟ್‌ನಿಂದ ಗೆದ್ದಿತ್ತು.

ಅಕ್ಟೋಬರ್ 3ರಂದು ನಡೆದಿದ್ದ ಪಂದ್ಯದಲ್ಲೂ ಡೆಲ್ಲಿ ಕ್ಯಾಪಿಟಲ್ಸ್ 228, ಕೋಲ್ಕತ್ತಾ ನೈಟ್ ರೈಡರ್ಸ್ 210 ರನ್ ಬಾರಿಸಿತ್ತು. 28 ಸಿಕ್ಸ್‌ಗಳು ಈ ಪಂದ್ಯದಲ್ಲಿ ದಾಖಲಾಗಿತ್ತು. ಒಟ್ಟಿನಲ್ಲಿ ಶಾರ್ಜಾ ಮೈದಾನ ಬ್ಯಾಟ್ಸ್‌ಮನ್‌ಗಳ ಪಾಲಿನ ಸ್ವರ್ಗ ಅನ್ನೋದಂತೂ ಸುಳ್ಳಲ್ಲ. ಬ್ಯಾಟಿಂಗ್ ದಾಖಲೆಗಳು ಇಲ್ಲಿ ಹೆಚ್ಚಾಗಿ ಸೃಷ್ಠಿಯಾಗುತ್ತಿದೆ.

Story first published: Monday, October 5, 2020, 13:54 [IST]
Other articles published on Oct 5, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+