ಐಪಿಎಲ್ 2020: ತನ್ನ ಬಿಗ್ ಹಿಟ್ಟಿಂಗ್ ಸಾಮರ್ಥ್ಯದ ರಹಸ್ಯ ಹೇಳಿದ ಶ್ರೇಯಸ್ ಅಯ್ಯರ್

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಿರೀಕ್ಷೆಯಂತೆಯೇ ಸಿಕ್ಸರ್‌ಗಳ ಸುರಿಮಳೆ ಸುರಿದಿದೆ. ಎರಡೂ ತಂಡಗಳು ಭರ್ಜರಿ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ರಂಜಿಸಿದೆ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಪ್ರದರ್ಶನ ಅಮೋಘವಾಗಿತ್ತು. ನಾಯಕನ ಪ್ರದರ್ಶನ ನೀಡಿದ ಅಯ್ಯರ್ 38 ಎಸೆತಗಳಲ್ಲಿ 88 ರನ್ ಚಚ್ಚಿದ್ದರು.
ಡೆಲ್ಲಿ ನಾಯಕನ ಕೆಕೆಆರ್ ವಿರುದ್ಧದ ಇನ್ನಿಂಗ್ಸ್‌ನಲ್ಲಿ ಆರು ಸಿಕ್ಸರ್ ಹಾಗೂ ಏಳು ಬೌಂಡರಿಗಳನ್ನು ಹೊಂದಿತ್ತು. ಟೂರ್ನಿಯಲ್ಲಿ ಈವರೆಗೆ ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎನಿಸಿರುವ ಶಾರ್ಜಾ ಕ್ರೀಡಾಂಗಣದ ಸಂಪೂರ್ಣ ಲಾಭವನ್ನು ಪಡೆದುಕೊಂಡ ಶ್ರೇಯಸ್ ಎದುರಾಳಿಗೆ ಬೃಹತ್ ಮೊತ್ತದ ಗುರಿ ನೀಡಲು ಕಾರಣರಾದರು. ಪಂದ್ಯದ ಬಳಿಕ ತಮ್ಮ ಬಿಗ್ ಹಿಟ್ಟಿಂಗ್ ಸಾಮರ್ಥ್ಯದ ರಹಸ್ಯವನ್ನು ಬಹಿರಂಗಗೊಳಿಸಿದರು.

"ಹಾರ್ಡ್‌ವರ್ಕ್ ಹಾಗೂ ಸ್ಮಾರ್ಟ್‌ವರ್ಕ್"
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದದ ತನ್ನ ಪ್ರದರ್ಶನ ಹಾಗೂ ದೊಡ್ಡ ಹೊಡೆತಗಳ ಸಾಮರ್ಥ್ಯದ ಬಗ್ಗೆ ಶ್ರೇಯಸ್ ಅಯ್ಯರ್ ಪ್ರತಿಕ್ರಿಯಿಸಿದರು. ಜಿಮ್‌ನಲ್ಲಿ ಹಾಕಿದ ತನ್ನ "ಕಠಿಣ ಹಾಗೂ ಸ್ಮಾರ್ಟ್ ಕೆಲಸವೇ" ದೊಡ್ಡ ಹೊಡೆತಗಳಿಗೆ ಕಾರಣ ಎಂದು ಹೇಳಿಕೆಯನ್ನು ನೀಡಿದರು. ತನ್ನನ್ನು ತಾನು 'ಗಿಫ್ಟೆಡ್' ಆಟಗಾರ ಎಂದು ಕರೆಸಿಕೊಳ್ಳದ ಶ್ರೇಯಸ್ ಅಯ್ಯರ್ ಜಿಮ್‌ನಲ್ಲಿ ಬಹಳಷ್ಟು ಪರಿಶ್ರಮ ಹಾಕಿರುವ ವಿಚಾರವನ್ನು ತಿಳಿಸಿದ್ದಾರೆ.

"ಗಿಫ್ಟೆಡ್ ಆಟಗಾರ ಅಲ್ಲ"
ನನ್ನ ಜಿಮ್ ಸೆಷನ್‌ಗಳ ಮೂಲಕ ನಾನು ಹಾಕಿದ ಕಠಿಣ ಪರಿಶ್ರಮ ಮತ್ತು ಸ್ಮಾರ್ಟ್ ಕೆಲಸ ನನಗೆ ತಿಳಿದಿದೆ. ಆದ್ದರಿಂದ ನಾನೋರ್ವ ಗಿಫ್ಟೆಡ್ ಆಟಗಾರ ಎಂದು ಹೇಳಲಾರೆ ಎಂದು ಎಂದು ಪಂದ್ಯದ ನಂತರದ ಕಾರ್ಯಕ್ರಮದಲ್ಲಿ ಶ್ರೇಯಸ್ ಅಯ್ಯರ್ ಹೇಳಿದರು.

ಎಲ್ಲವೂ ಅಂದುಕೊಂಡಂತೆಯೇ ನಡೆಯಿತು
ಈ ಹಿಂದಿನ ಪಂದ್ಯಗಳಲ್ಲಿ ಮಾಡಿದಂತೆಯೇ ಆರಂಭದಲ್ಲಿ ಕೆಲ ಸಮಯವನ್ನು ತೆಗೆದುಕೊಳ್ಳುವುದು ನನಗೆ ಅನಿವಾರ್ಯವಾಗಿತ್ತು. ಬಳಿಕ ಬೌಲರ್‌ಗಳ ಮೇಲೆ ದಾಳಿ ನಡೆಸಲು ಸರಿಯಾದ ಸಮಯ ಎನಿಸಿತು. ನಂತರ ಸ್ಟ್ರೈಕ್ ಬದಲಿಸಲು ಆರಂಭಿಸಿದೆ. ಅದೃಷ್ಠವಶಾತ್ ಎಲ್ಲವೂ ಅಂದುಕೊಂಡಂತೆಯೆ ನಡೆಯಿತು. ನಾವು ಯಾವಾಗಲೂ ಜಿದ್ದಾಜಿದ್ದಿನ ಕದನದ ಬಗ್ಗೆ ಹೇಳುತ್ತೇವೆ, ಇದು ಕೂಡ ಅದರಲ್ಲಿ ಒಂದು. ಪ್ರತಿಯೊಬ್ಬರು ನೀಡಿದ ಕೊಡುಗೆ ನಿಜಕ್ಕೂ ನಿರಾಳತೆ ನೀಡಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಸೋಲಿಗೆ ಕಾರಣ ಹೇಳಿದ ದಿನೇಶ್ ಕಾರ್ತಿಕ್
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬಳಿಕ ಮಾತನಾಡಿದ ದಿನೇಶ್ ಕಾರ್ತಿಕ್ ಸೋಲಿಗೆ ಕಾರಣವನ್ನು ಹೇಳಿದ್ದಾರೆ. "ಪಂದ್ಯದ ಮಧ್ಯದ ಹಂತದಲ್ಲಿ ಸಿಕ್ಸರ್ ಹಾಗೂ ಬೌಂಡರಿಗಳು ಕಡಿಮೆ ಬಿತ್ತು. 10-13ನೇ ಓವರ್ ಮಧ್ಯೆ ಹೆಚ್ಚಿನ ಬೌಂಡರಿ ಸಿಕ್ಸರ್‌ಗಳು ಬಂದಿರಲಿಲ್ಲ. ಒಂದೆರಡು ವಿಕೆಟ್‌ಗಳನ್ನು ಕೂಡ ಈ ಸಂದರ್ಭದಲ್ಲಿ ನಾವು ಕಳೆದುಕೊಂಡೆವು. ಇದು ನಮ್ಮ ತಂಡಕ್ಕೆ ಹಿನ್ನಡೆಯಾಗಿತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಎರಡ್ಮೂರು ಹೆಚ್ಚಿನ ಸಿಕ್ಸರ್‌ಗಳು ನಮ್ಮ ಪರವಾಗಿ ಬಂದಿದ್ದರೆ ನಾವು ಗುರಿಯನ್ನು ಮಟ್ಟಿನಿಲ್ಲುತ್ತಿದ್ದೆವು" ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications