ಶ್ರೇಯಸ್ ಐಯ್ಯರ್ ಅದ್ಭುತ ಕ್ಯಾಪ್ಟನ್: ಡೆಲ್ಲಿ ವೇಗಿ ಕಾಗಿಸೊ ರಬಾಡ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಐಯ್ಯರ್ ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ 335 ರನ್‌ಗಳು ಶ್ರೇಯಸ್ ಖಾತೆಯಲ್ಲಿದೆ. ಉತ್ತಮ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಐಯ್ಯರ್ ಅವರನ್ನು ಡೆಲ್ಲಿ ವೇಗಿ ಕಾಗಿಸೊ ರಬಾಡ ಶ್ಲಾಘಿಸಿದ್ದಾರೆ.
ಆಡಿರುವ 10 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಸದ್ಯದ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ತಂಡದ ಉತ್ತಮ ಸಾಧನೆಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಮತ್ತು ಕ್ಯಾಂಪ್‌ನಲ್ಲಿನ ಉದಾರ ಪರಿಸರ ಕಾರಣ ಎಂದು ಕಾಗಿಸೊ ರಬಾಡ ಹೇಳಿದ್ದಾರೆ.
ಶ್ರೇಯಸ್ ಐಯ್ಯರ್ ಬಗ್ಗೆ ಮಾತನಾಡಿರುವ ರಬಾಡ, 'ಕ್ಯಾಪ್ಟನ್ ಆಗಿ ಶ್ರೇಯಸ್ ಅಯ್ಯರ್ ನಿಜಕ್ಕೂ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಯುವಕರು. ನಾಯಕರಾಗಿ ನೀವು ವಿದೇಶಿ ಆಟಗಾರರಿಗೆ ಮುಂದಾಳತ್ವ ವಹಿಸೋದು ದೊಡ್ಡ ಕೆಲಸ. ಆದನ್ನು ಅವರು ಚೆನ್ನಾಗಿ ನಿಭಾಯಿಸುತ್ತಿದ್ದಾರೆ,' ಎಂದಿದ್ದಾರೆ.
'ಶ್ರೇಯಸ್ ಒಬ್ಬ ಸಾಮಾನ್ಯ ಹುಡುಗ. ಫೀಲ್ಡ್‌ನಲ್ಲಿದ್ದಾಗ ಅವರು ನಾಯಕತ್ವವನ್ನು ಎಂಜಾಯ್ ಮಾಡ್ತಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಜಾಗೃತರಾಗಿರುತ್ತಾರೆ. ಅವರಿಗೆ ಖಂಡಿತ ರಿಕಿ ಪಾಂಟಿಂಗ್ ಸಹಾಯವಿದೆ ಎಂದು ನನಗನ್ನಿಸುತ್ತದೆ,' ಎಂದು ರಬಾಡ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications