Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020ಗೆ ಈ ದೇಶದ ಆಟಗಾರರು ಪಾಲ್ಗೊಳ್ಳುವುದು ಅನುಮಾನ!

IPL 2020 : South African cricketers doubtful for IPL 2020

ಐಪಿಎಲ್‌ಗೆ ಚುರುಕಿನ ಸಿದ್ಧತೆಗಳು ನಡೆಯುತ್ತಿದೆ. ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಕ್ರಿಕೆಟ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಉತ್ಸಾಹದಿಂದಿದ್ದಾರೆ. ಆದರೆ ಈ ಮಧ್ಯೆ ಒಂದು ದೇಶದ ಕ್ರಿಕೆಟ್ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದು ಅನುಮಾನವೆನಿಸಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತನ್ನ ಆಟಗಾರರಿಗೆ ಐಪಿಎಲ್‌ನಲ್ಲಿ ಪಾಳ್ಗೊಳ್ಳಲು ಅನುಮತಿಯನ್ನು ನೀಡಿದೆ. ಆದರೆ ಕೊರೊನಾ ವೈರಸ್‌ನ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ಮುಂದುವರಿದಿದ್ದು ಅಂತಾರಾಷ್ಟ್ರೀಯ ವಿಮಾನಯಾನಕೂಡ ಸಂಪೂರ್ಣವಾಗಿ ಬಂದ್ ಆಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಪಾಳ್ಗೊಳ್ಳುವಿಕೆ ಮೇಲೆ ಕರಿಛಾಯೆ ಆವರಿಸಿದೆ.

ಆರ್‌ಸಿಬಿ ತಂಡದ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್ ಸೇರಿದಂತೆ ದಕ್ಷಿಣ ಆಫ್ರಿಕಾದ ಪ್ರಮುಖ 10 ಕ್ರಿಕೆಟಿಗರು ಐಪಿಎಲ್‌ನಲ್ಲಿ ಒಪ್ಪಂದವನ್ನು ಹೊಂದಿದ್ದಾರೆ. ದಕ್ಷಿಣ ಆಫ್ರಕಾದಲ್ಲಿ ಅಂರಾಷ್ಟ್ರೀಯ ವಿಮಾನಯಾನ ಪುನಾರಂಭದ ಬಗ್ಗೆ ಸದ್ಯಕ್ಕೆ ಯಾವುದೆ ಮಾಹಿತಿಯೂ ಲಭ್ಯವಿಲ್ಲ.

ಐಪಿಎಲ್‌ನಲ್ಲಿ ದಕ್ಷಿಣ ಆಫ್ರಕಾ ಕ್ರಿಕೆಟಿಗರು ಹಲವು ತಂಡಗಳಿಗೆ ಆಧಾರಸ್ಥಂಭವಾಗಿದ್ದಾರೆ. ಎಬಿ ಡಿವಿಲಿಯರ್ಸ್ ಕ್ರಿಸ್ ಮೋರಿಸ್, ಡೇಲ್ ಸ್ಟೇನ್ ಆರ್‌ಸಿಬಿ ತಂಡದಲ್ಲಿರುವವ ಪ್ರಮುಖ ಆಟಗಾರರಾಗಿದ್ದರೆ, ಫಾಫ್ ಡು ಪ್ಲೆಸಿಸ್, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್ ಸಿಎಸ್‌ಕೆ ಪರ ಆಡುತ್ತಿದ್ದರೆ, ವೇಗಿ ಕಗಿಸೊ ರಬಾಡ (ಡೆಲ್ಲಿ), ಕ್ವಿಂಟನ್ ಡಿ ಕಾಕ್ (ಮುಂಬೈ), ಡೇವಿಡ್ ಮಿಲ್ಲರ್ (ರಾಜಸ್ಥಾನ), ಹರ್ದೂಸ್ ವಿಲ್‌ಜಿಯೊನ್ (ಪಂಜಾಬ್) ಐಪಿಎಲ್‌ನಲ್ಲಿ ಕಣಕ್ಕಿಳಿಯಬೇಕಿರುವ ದ.ಆಫ್ರಿಕಾ ಆಟಗಾರರು

ಐಪಿಎಲ್ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದ್ದು ನವೆಂಬರ್ 8ರಂದು ಫೈನಲ್ ಪಂದ್ಯ ನಡೆಯುವ ಮೂಲಕ ಮುಕ್ತಾಯಗೊಳ್ಳಲಿದೆ. ಯುಎಇನಲ್ಲಿ ಈ ಬಾರಿಯ ಎಲ್ಲಾ ಪಂದ್ಯಗಳನ್ನು ಏರ್ಪಡಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಆದರೆ ಸರ್ಕಾರದಿಂದ ಅಂತಿಮ ಅನುಮತಿಯನ್ನು ಇನ್ನಷ್ಟೇ ಪಡೆದುಕೊಳ್ಳಬೇಕಾಗಿದೆ.

Story first published: Monday, July 27, 2020, 10:13 [IST]
Other articles published on Jul 27, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+