Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ಹೈದರಾಬಾದ್ vs ಡೆಲ್ಲಿ, ಹೆಡ್‌ ಟು ಹೆಡ್ ಮಾಹಿತಿ

IPL 2020: SRH vs DC- Head-to-head records and players to watch

ಐಪಿಎಲ್‌ನಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿದೆ. ಟೂರ್ನಿಯ 47ನೇ ಪಂದ್ಯವಾಗಿರುವ ಇಂದಿನ ಕಾದಾಟ ಮುಂದಿನ ಹಂತಕ್ಕೇರಲು ಎರಡು ತಂಡಕ್ಕೂ ಮುಖ್ಯವೆನಿಸಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಹಣಾಹಣಿ ನಡೆಯಲಿದೆ.

ಈ ಎರಡು ತಂಡಗಳು ಈವರೆಗೆ 16 ಬಾರ ಮುಖಾಮುಖಿಯಾಗಿದೆ. ಈ ಪೈಕಿ ಹೈದರಾಬಾದ್ 10 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಭಾರೀ ಮುನ್ನಡೆಯನ್ನು ಪಡೆದುಕೊಂಡಿದೆ. ಡೆಲ್ಲಿ ಗೆದ್ದಿರುವ ಪಂದ್ಯಗಳು 6 ಮಾತ್ರ. ಆದರೆ ಈ ಬಾರಿಯ ಟೂರ್ನಿಯಲ್ಲೊ ಡೆಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿಕೊಂಡು ಬಂದಿದೆ.

ಕಳೆದ ಐದು ಪಂದ್ಯಗಳ ಪ್ರದರ್ಶನದಲ್ಲಿ ಹೈದರಾಬಾದ್ ತಂಡ ಗೆಲುವಿನ ಉತ್ತಮ ಲಯದಲ್ಲಿದೆ. ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದ ಹೈದರಾಬಾದ್ ಒಂದು ಪಂದ್ಯವನ್ನು ಕಳೆದುಕೊಂಡಿದೆ. ಅಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಹೊಂದಿದ್ದ ಡೆಲ್ಲಿ ಬರು ಬರುತ್ತಾ ಕೆಲ ಪಂದ್ಯಗಳನ್ನು ಕಳೆದುಕೊಳ್ಳಲು ಆರಂಭಿಸಿದೆ. ಹೀಗಾಗಿ ಕಳೆದ ಐದು ಪಂದ್ಯಗಳಲ್ಲಿ ಡೆಲ್ಲಿ 3 ಗೆಲುವು ಹಾಗೂ 2 ಸೋಲು ಕಂಡಿದೆ.

ಇನ್ನು ಅಂಕಪಟ್ಟಿಯಲ್ಲಿ ಡೆಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 11 ಪಂದ್ಯಗಳನ್ನು ಆಡಿರುವ ಡೆಲ್ಲಿ 14 ಅಂಕಗಳನ್ನು ಸಂಪಾದಿಸಿದೆ. ಏಳು ಗೆಲುವು ಹಾಗೂ ನಾಲ್ಕು ಸೋಲುಗಳನ್ನು ಡೆಲ್ಲಿ ತಂಡ ಅನುಭವಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನವನ್ನು ಪಡೆದುಕೊಂಡಿದ್ದು 10 ಪಂದ್ಯಗಳಲ್ಲಿ ನಾಲ್ಕು ಗೆಲುವು ಹಾಗೂ 7 ಸೋಲುಗಳನ್ನು ಕಂಡಿದೆ. 8 ಅಂಕಗಳು ಹೈದರಾಬಾದ್ ಖಾತೆಯಲ್ಲಿದೆ.

ಹೈದರಾಬಾದ್ ತಂಡದಲ್ಲಿ ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್ ಹಾಗೂ ಮನಿಶ್ ಪಾಂಡೆ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಬೌಲಿಂಗ್‌ನಲ್ಲಿ ರಶೀದ್ ಖಾನ್, ಟಿ ನಟರಾಜನ್ ಹಾಗೂ ಖಲೀಲ್ ಅಹ್ಮದ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಡೆಲ್ಲಿ ತಂಡದ ಪರವಾಗಿ ಶಿಖರ್ ಧವನ್ 471 ರನ್‌ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೆ 23 ವಿಕೆಟ್ ಕಿತ್ತಿರುವ ಕಗಿಸೋ ರಬಡ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ.

Story first published: Wednesday, October 28, 2020, 9:53 [IST]
Other articles published on Oct 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+