Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಸ್‌ಆರ್‌ಎಚ್ vs ಆರ್‌ಸಿಬಿಯಲ್ಲಿ ಗೆಲ್ಲೋ ತಂಡ ಯಾವುದು?: ಪಿಚ್‌ ರಿಪೋರ್ಟ್

IPL 2020: SRH vs RCB Match 3 - Dubai International Stadium Weather Forecast and Pitch Report

ದುಬೈ: ದುಬೈಯ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 21ರ ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್ 3ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ತಂಡಗಳು ಕಾದಾಡಲಿವೆ. ಎರಡೂ ತಂಡಗಳ ಪಾಲಿಗೂ ಇದು ಟೂರ್ನಿಯ ಮೊದಲ ಪಂದ್ಯ. ಸನ್ ರೈಸರ್ಸ್ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ವಿರಾಟ್ ಕೊಹ್ಲಿ ನಾಯಕರಾಗಿರಲಿದ್ದಾರೆ.

ಭಾರತೀಯ ಕಾಲಮಾನ 7.30 pmಗೆ ಆರ್‌ಸಿಬಿ vs ಎಸ್‌ಆರ್‌ಎಚ್‌ ನಡುವಿನ ಪಂದ್ಯ ಆರಂಭವಾಗಲಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಊಹಿಸೋದು ಬಲು ಕಷ್ಟ. ಯಾಕೆಂದರೆ ಎರಡೂ ತಂಡಗಳ ಬ್ಯಾಟಿಂಗ್, ಬೌಲಿಂಗ್ ಲೈನ್ ಚೆನ್ನಾಗಿದೆ.

ಹೈದರಾಬಾದ್ ಮತ್ತು ಬೆಂಗಳೂರು ಪಂದ್ಯದಕ್ಕೆ ಸಂಬಂಧಿಸಿ ಪಿಚ್‌ ರಿಪೋರ್ಟ್, ಹವಾಮಾನ ವರದಿ ಇಲ್ಲಿದೆ.

ಬ್ಯಾಟ್ಸ್‌ಮನ್‌ಗಳಿಗೆ ಕಷ್ಟ

ಬ್ಯಾಟ್ಸ್‌ಮನ್‌ಗಳಿಗೆ ಕಷ್ಟ

ಪಂದ್ಯ ನಡೆಯುವ ದಿನದಂದು ದುಬೈ ಹವಾಮಾನ ಗಮನಿಸಿದರೆ ತಾಪಮಾನ 31 ಡಿಗ್ರೀ ಇದೆ. ಈ ವೇಳೆ ತುಂಬಾ ಇಸಿಲು ಇರಲಿದೆ. ಮಳೆಯ ತೊಂದರೆಯೇನೂ ಇಲ್ಲ. ಯುಎಇಯಲ್ಲಿ ತುಂಬಾ ಬಿಸಿಲಿರುವುದರಿಂದ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಕೊಂಚ ಕಷ್ಟವಾಗಲಿದೆ. ಈ ಲೆಕ್ಕಾಚಾರದಲ್ಲಿ ಎಚ್‌ಆರ್‌ಎಚ್‌ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಸ್ಪಿನ್ನರ್‌ಗಳಿಗೆ ಅನುಕೂಲ

ಸ್ಪಿನ್ನರ್‌ಗಳಿಗೆ ಅನುಕೂಲ

ಯುಎಇ ಸ್ಟೇಡಿಯಂಗಳು ಸ್ಪಿನ್ನರ್‌ಗಳಿಗೆ ಅನುಕೂಲಕಾರಿಯಾಗಿದ್ದು, ದುಬೈ ಸ್ಟೇಡಿಯಂ ಕೂಡ ಹೀಗೇ ಇದೆ. ಬ್ಯಾಟ್ಸ್‌ಮನ್‌ಗಳಿಗೆ ಕೊಂಚ ಕಷ್ಟಕರ ಪಿಚ್ ಎನಿಸಲಿದೆ. ಪಂದ್ಯ ಭಾರತೀಯ ಕಾಲಮಾನ 7.30pmಗೆ ಆರಂಭವಾಗಲಿದ್ದು, ಸ್ಟಾರ್‌ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ಸಿಗಲಿದೆ.

ಆರ್‌ಸಿಬಿ ತಂಡದ ಬಲ

ಆರ್‌ಸಿಬಿ ತಂಡದ ಬಲ

ಈ ಬಾರಿ ಆರ್‌ಸಿಬಿ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಬಲಿಷ್ಠವಾಗಿದೆ. ಮುಖ್ಯವಾಗಿ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್, ಕೊಹ್ಲಿ, ಎಬಿ ಡಿ ವಿಲಿಯರ್ಸ್ ತಂಡಕ್ಕೆ ಬ್ಯಾಟಿಂಗ್ ಬಲ ತುಂಬಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಯುಜುವೇಂದ್ರ ಚಾಹಲ್ ಇದ್ದಾರೆ.

ಎಸ್‌ಆರ್‌ಎಚ್‌ನ ಪ್ಲಸ್ ಪಾಯಿಂಟ್

ಎಸ್‌ಆರ್‌ಎಚ್‌ನ ಪ್ಲಸ್ ಪಾಯಿಂಟ್

ವಾರ್ನರ್ ಮುಂದಾಳತ್ವದ ಎಸ್‌ಆರ್‌ಎಚ್‌ ಕೂಡ ಚೆನ್ನಾಗಿದೆ. ವಾರ್ನರ್, ಕೇನ್ ವಿಲಿಯಮ್ಸನ್, ಜಾನಿ ಬೇರ್ಸ್ಟೋವ್ ಬ್ಯಾಟಿಂಗ್‌ನಲ್ಲಿ ಶಕ್ತಿ ತುಂಬಿದರೆ, ಬೌಲಿಂಗ್‌ ವಿಭಾಗದಲ್ಲಿ ರಶೀದ್ ಖಾನ್, ಖಲೀಲ್ ಅಹ್ಮದ್, ಭುವನೇಶ್ವರ್ ಕುಮಾರ್ ಇರಲಿದ್ದಾರೆ.

Story first published: Monday, September 21, 2020, 18:07 [IST]
Other articles published on Sep 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+