ಐಪಿಎಲ್ 2020: ಹೈದರಾಬಾದ್ vs ರಾಜಸ್ಥಾನ್, ಹೆಡ್ ಟು ಹೆಡ್ ರೆಕಾರ್ಡ್ಸ್

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂ ಇಂಡಿಯನ್ ಪ್ರೀಮಿಯರ್ ಲೀಗ್ 26ನೇ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಮಾಜಿ ಚಾಂಪಿಯನ್ಸ್ ತಂಡಗಳಾದ ಸನ್ ರೈಸರ್ಸ್ ಹೈದಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಇಂದು ಸೆಣಸಾಡಲಿವೆ. ಡೇವಿಡ್ ವಾರ್ನರ್ ನಾಯಕತ್ವದ ಹೈದರಾಬಾದ್ ತಂಡ ಆಡಿದ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಸ್ಟೀವ್ ಸ್ಮಿತ್ ಮುಂದಾಳತ್ವದ ರಾಜಸ್ಥಾನ್ ತಂಡ 6ರಲ್ಲಿ 2 ಜಯ ಗಳಿಸಿದ್ದು, 7ನೇ ಸ್ಥಾನದಲ್ಲಿದೆ.
ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಪಂದ್ಯ ಭಾನುವಾರ 3.30 pmಗೆ ಆರಂಭವಾಗಲಿದೆ. ಟಾಸ್ 3 pmಗೆ ನಡೆಯಲಿದೆ. ಎಸ್‌ಆರ್‌ಎಚ್‌ನಲ್ಲಿ ಡೇವಿಡ್ ವಾರ್ನರ್, ಜಾನಿ ಬೇರ್ಸ್ಟೋವ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ರಶೀದ್ ಖಾನ್‌ನಂತ ಆಟಗಾರರಿದ್ದಾರೆ.
ಆರ್‌ಆರ್ ತಂಡದಲ್ಲಿ ಸ್ಟೀವನ್ ಸ್ಮಿತ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್ ಅವರಂಥ ಶ್ರೇಷ್ಠರಿದ್ದಾರೆ. ಇಂದಿನ ಪಂದ್ಯದಲ್ಲಿ ಆರ್‌ಆರ್ ತಂಡದಲ್ಲಿ ಬೆನ್ ಸ್ಟೋಕ್ಸ್ ಆಡುವ ನಿರೀಕ್ಷೆಯಿದೆ.

ಇತ್ತಂಡಗಳ ಮುಖಾಮುಖಿ
* ಆಡಿದ ಒಟ್ಟು ಪಂದ್ಯಗಳ ಸಂಖ್ಯೆ: 11
* ಎಸ್‌ಆರ್‌ಹೆಚ್ ಗೆದ್ದ ಪಂದ್ಯಗಳು: 6
* ಆರ್ಆರ್ ಗೆದ್ದ ಪಂದ್ಯಗಳು: 5
* ಭಾರತದಲ್ಲಿ ಆಡಿದ ಪಂದ್ಯ: 1o (ಎಸ್‌ಆರ್‌ಹೆಚ್ 6, ಆರ್ಆರ್ 4)

ಸರಾಸರಿ ಸ್ಕೋರ್
* ಯುಎಇಯಲ್ಲಿ ಆಡಿದ ಪಂದ್ಯಗಳು: 1 (ಎಸ್‌ಆರ್‌ಹೆಚ್ 0, ಆರ್ಆರ್ 1)
* ಆರ್ಆರ್ ವಿರುದ್ಧ ಎಸ್‌ಆರ್‌ಹೆಚ್ ಸರಾಸರಿ ಸ್ಕೋರ್: 150
* ಎಸ್‌ಆರ್‌ಹೆಚ್ ವಿರುದ್ಧ ಆರ್‌ಆರ್ ಸರಾಸರಿ ಸ್ಕೋರ್: 144

ಹೆಚ್ಚಿನ ರನ್ ದಾಖಲೆ
* ಎಸ್‌ಆರ್‌ಎಚ್‌ಗಾಗಿ ಹೆಚ್ಚಿನ ರನ್: 189 (ಡೇವಿಡ್ ವಾರ್ನರ್)
* ಆರ್ಆರ್: 320 (ಸಂಜು ಸ್ಯಾಮ್ಸನ್) ಗಾಗಿ ಹೆಚ್ಚಿನ ರನ್
* ಎಸ್‌ಆರ್‌ಎಚ್‌ಗೆ ಹೆಚ್ಚಿನ ವಿಕೆಟ್‌ಗಳು: 4 (ರಶೀದ್ ಖಾನ್ ಮತ್ತು ಸಿದ್ದಾರ್ಥ್ ಕೌಲ್)

ಅತ್ಯಧಿಕ ವಿಕೆಟ್‌ಗಳು
* ಆರ್‌ಆರ್‌ಗೆ ಹೆಚ್ಚಿನ ವಿಕೆಟ್‌ಗಳು: 5 (ಶ್ರೇಯಸ್ ಗೋಪಾಲ್ ಮತ್ತು ಜಯದೇವ್ ಉನಾದ್ಕತ್)
* ಎಸ್‌ಆರ್‌ಎಚ್‌ಗಾಗಿ ಹೆಚ್ಚಿನ ಕ್ಯಾಚ್‌ಗಳು: 4 (ಡೇವಿಡ್ ವಾರ್ನರ್)
* ಆರ್ಆರ್ ಗಾಗಿ ಹೆಚ್ಚಿನ ಕ್ಯಾಚ್ಗಳು: 8 (ಸಂಜು ಸ್ಯಾಮ್ಸನ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications