ರಾಜಸ್ಥಾನ್ vs ಹೈದರಾಬಾದ್, ಸಂಭಾವ್ಯ ತಂಡ, ಹವಾಮಾನ ವರದಿ

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ (ಅಕ್ಟೋಬರ್ 11) ಇಂಡಿಯನ್ ಪ್ರೀಮಿಯರ್ ಲೀಗ್ 26ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿವೆ. ಪಂದ್ಯ 3.30 pmಗೆ ಆರಂಭವಾಗಲಿದ್ದು, 3 pmಗೆ ಟಾಸ್ ನಡೆಯಲಿದೆ.
ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ಈವರೆಗೆ ಆಡಿರುವ ಆರು ಪಂದ್ಯಗಳಲ್ಲಿ ಮೂರು ಗೆಲುವು ಕಂಡಿದೆ. ಮೂರರಲ್ಲಿ ಸೋತಿದೆ. ಇತ್ತ ರಾಜಸ್ಥಾನ್ ರಾಯಲ್ಸ್ ಆರು ಪಂದ್ಯಗಳನ್ನಾಡಿದ್ದು ಎರಡು ಪಂದ್ಯ ಗೆದ್ದು ನಾಲ್ಕರಲ್ಲಿ ಸೋತಿದೆ. ಹೀಗಾಗಿ ರಾಜಸ್ಥಾನ್ ಇಂದು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ರಾಜಸ್ಥಾನ್-ಹೈದರಾಬಾದ್ ಪಂದ್ಯ ನಡೆಯುವ ದಿನವಾದ ಭಾನುವಾರ ದುಬೈನಲ್ಲಿ ತಾಪಮಾನ ಗರಿಷ್ಠ 40 ಡಿಗ್ರೀ ಸೆಲ್ಶಿಯನ್ ಇದ್ದರೆ, ಕನಿಷ್ಠ 30 ಡಿಗ್ರೀ ಸೆಲ್ಶಿಯನ್ ಇರಲಿದೆ. ತುಂಬಾ ಶೆಕೆಯ ವಾತಾವರಣ ಆಟಗಾರರನ್ನು ಕಾಡಲಿದೆ. ದುಬೈ ಸ್ಟೇಡಿಯಂ ಬ್ಯಾಟಿಂಗ್ ಪಿಚ್. ಹೀಗಾಗಿ ಮೊದಲು ಆಡುವ ತಂಡ 170 ರನ್ ಗಳಿಸಿದರೆ ಉತ್ತಮ ಮೊತ್ತ ಅನ್ನಿಸಲಿದೆ.
ಕೋಲ್ಕತ್ತಾ ಸಂಭಾವ್ಯ ತಂಡ: ಡೇವಿಡ್ ವಾರ್ನರ್ (ಸಿ), ಜಾನಿ ಬೈರ್‌ಸ್ಟೋವ್ (ಡಬ್ಲ್ಯುಕೆ), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗಾರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ ನಟರಾಜನ್, ಖಲೀಲ್ ಅಹ್ಮದ್.
ರಾಜಸ್ಥಾನ್ ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್ (ಡಬ್ಲ್ಯೂಕೆ), ಸ್ಟೀವ್ ಸ್ಮಿತ್ (ಸಿ), ಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಮಹಿಪಾಲ್ ಲೋಮರ್, ರಾಹುಲ್ ತೆವಾಟಿಯಾ, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ವರುಣ್ ಆರನ್/ಜಯದೇವ್ ಉನಾದ್ಕತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications