ಯುಎಇಯಲ್ಲಿ ಆಟಗಾರರ ಮಾದರಿ ಸಂಗ್ರಹಿಸಲು ಆರಂಭಿಸಿದ್ದೇವೆ: ನಾಡಾ

ದುಬೈ: ನ್ಯಾಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ನಾಡಾ) ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಡುತ್ತಿರುವ ಆಟಗಾರರ ಮಾದರಿ ಸಂಗ್ರಹಿಸಲು ಆರಂಭಿಸಿದೆ. ಈ ವಿಚಾರವನ್ನು ನಾಡಾ ಟ್ವೀಟ್ ಮೂಲಕ ತಿಳಿಸಿದೆ.
'ದುಬೈನಲ್ಲಿ ಐಪಿಎಲ್ 2020ಯಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರ ಸ್ಯಾಂಪಲ್‌ಗಳನ್ನು ನಾಡಾ ಇಂಡಿಯಾ ಸಂಗ್ರಹಿಸಲಾರಂಭಿಸಿದೆ. ಭಾರತೀಯ ಆಟಗಾರರು ಮತ್ತು ವಿದೇಶಿ ಆಟಗಾರರಿಗೆ ನಾವು ಈಗಾಗಲೇ ಡೋಪಿಂಗ್ ಟೆಸ್ಟ್ ಶುರು ಮಾಡಿದ್ದೇವೆ,' ಎಂದು ನಾಡಾ ತನ್ನ ಅಧಿಕೃತ ಟ್ವೀಟ್‌ನಲ್ಲಿ ತಿಳಿಸಿದೆ.
ನಾಡಾ ಡಿಜಿ ನವೀನ್ ಅಗರ್ವಾಲ್ ಅವರನ್ನು ಕೇಳಿದಾಗ ಪಿಟಿಐಗೆ ಉತ್ತರಿಸಿದ ಅಗರ್ವಾಲ್, 'ಉದ್ದೀಪನ ಪರೀಕ್ಷೆಗಾಗಿ ಆಟಗಾರರ ಮಾದರಿ ಸಂಗ್ರಹ ಕೆಳದಿನಗಳ ಹಿಂದೆಯೇ ಶುರು ಮಾಡಿದ್ದೆವು. ಅದಕ್ಕಿಂತ ಮೇಲಾಗಿ ನಾನೀ ಬಗ್ಗೆ ಕಾಮೆಂಟ್ ಮಾಡಲು ಬಯಸುವುದಿಲ್ಲ,' ಎಂದು ಉತ್ತರಿಸಿದ್ದಾರೆ.
ನಾಡಾದ ಉದ್ದೀಪನ ನಿಯಂತ್ರಣ ಅಧಿಕಾರಿಗಳು ಸೆಪ್ಟೆಂಬರ್ ದ್ವಿತೀಯ ವಾರದಲ್ಲಿ ಯುಎಇಗೆ ತೆರಳಿರಲಿಲ್ಲ. ಈಗಲೂ ಈ ಅಧಿಕಾರಿಗಳು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತದೆ. ವಿದೇಶಿ ಪ್ರಯಾಣ ನಿರ್ಬಂಧದಿಂದ ಹೀಗಾಗಿದೆ ಎನ್ನಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications