ಐಪಿಎಲ್ 2020: ಅಂಕ ಪಟ್ಟಿ, ಆರೆಂಜ್, ಪರ್ಪಲ್ ಟೋಪಿ ರೇಸ್ ಯಾರು ಮುಂದೆ?

ಕ್ರೀಡಾಲೋಕದ ಅತ್ಯಂತ ಶ್ರೀಮಂತ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2020 ಆರಂಭವಾಗಿದೆ. ಚಾಂಪಿಯನ್ ತಂಡಗಳಾದ ಮುಂಬೈ ಇಂಡಿಯನ್ ಹಾಗೂ ಚೆನ್ನೈ ತಂಡಗಳ ನಡುವಿನ ಕಾಳಗದೊಂದಿಗೆ ಆರಂಭವಾದ ಪಂದ್ಯಾವಳಿಗಳಲ್ಲಿ ಈಗಾಗಲೇ ಅನೇಕ ದಾಖಲೆಗಳು ನುಚ್ಚುನೂರಾಗಿವೆ. ಪ್ರತಿ ಪಂದ್ಯದ ಬಳಿಕ ತಂಡಗಳ ಅಂಕಪಟ್ಟಿ, ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್, ವಿಕೆಟ್ ಪಡೆದಿರುವ ಬೌಲರ್ ಬಗ್ಗೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲವಿರುತ್ತದೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟವನ್ನು ಮೈಖೇಲ್ ಕನ್ನಡ ನಿಮ್ಮ ಮುಂದಿಡುತ್ತಿದೆ. ಇದರಲ್ಲಿ ಈ ಎಲ್ಲಾ ಅಂಶಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿದೆ.

ಮೊದಲ ಮೂರು ಪಂದ್ಯಗಳ ಫಲಿತಾಂಶದ ಬಳಿಕ ಚೆನ್ನೈ, ಡೆಲ್ಲಿ ಹಾಗೂ ಬೆಂಗಳೂರು ಜಯದೊಂದಿಗೆ ಅಂಕಪಟ್ಟಿಯಲ್ಲಿ ಉತ್ತಮ ಆರಂಭ ಕಂಡಿವೆ. ಮೂರು ತಂಡಗಳು ಸಮನಾದ ಅಂಕ ಪಡೆದಿದ್ದರೂ ಚೆನ್ನೈಗಿಂತ ಉತ್ತಮ ಸರಾಸರಿ ಹೊಂದಿರುವ ಕಾರಣಕ್ಕೆ ಬೆಂಗಳೂರು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಆರ್ ಸಿಬಿ ಸರಾಸರಿ +0.5, ಚೆನ್ನೈ + 0.4 ಹಾಗೂ ಡೆಲ್ಲಿ +0.0 ಇದೆ
ತಂಡಗಳ ಅಂಕಪಟ್ಟಿ ವಿವರ ಬಗ್ಗೆ ತಿಳಿಯಲು ಕ್ಲಿಕ್ ಮಾಡಿ

ಅತಿ ಹೆಚ್ಚು ರನ್ ಗಳಿಸಿರುವ ಪಂಜಾಬ್ ಬ್ಯಾಟ್ಸ್ ಮನ್ ಮಯಾಂಕ್ ಅಗರವಾಲ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂದಿದ್ದಾರೆ. ಪಂಜಾಬ್ ತಂಡ ಬೌಲರ್ ಮೊಹಮ್ಮದ್ ಶಮಿ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆರೆಂಜ್, ಪರ್ಪಲ್ ಕ್ಯಾಪ್, ಅತಿ ಹೆಚ್ಚು ಸರಾಸರಿ, ಸ್ಟ್ರೈಕ್ ರೇಟ್, ಶತಕ, ಅರ್ಧಶತಕ, 5 ವಿಕೆಟ್ ಪಡೆದವರು, ಉತ್ತಮ ಮಿತವ್ಯಯಿ ಬೌಲಿಂಗ್ ವಿವರ ಪಡೆಯಲು ಕ್ಲಿಕ್ ಮಾಡಿ

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications