ಐಪಿಎಲ್ ಅಂಕ ಪಟ್ಟಿ: ರಾಜಸ್ಥಾನ ವಿರುದ್ಧ ಗೆದ್ದು ಅಗ್ರಸ್ಥಾನಕ್ಕೆ ಡೆಲ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2020ನಲ್ಲಿ ಅಕ್ಟೋಬರ್ 09ರಂದು ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ನಂತರ ಅಂಕಪಟ್ಟಿಯಲ್ಲಿ ಏನೇನು ಬದಲಾವಣೆಯಾಗಿದೆ ವಿವರ ಇಲ್ಲಿದೆ..
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಚಾಂಪಿಯನ್ ತಂಡ ಮುಂಬೈ ಇಂಡಿಯನ್ ಕೆಳಗಿಳಿದಿದೆ. ಕೊಹ್ಲಿ ಪಡೆ ಐದನೇ ಸ್ಥಾನಕ್ಕೆ ಕುಸಿದಿದೆ. ಚೆನ್ನೈ ತಂಡವನ್ನು ಸೋಲಿಸಿದ ಬಳಿಕ ಕೆಕೆಆರ್ ನಾಲ್ಕನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ ಮೂರನೇ ಸ್ಥಾನಕ್ಕೇರಿದೆ. ಪ್ರತಿ ಪಂದ್ಯದ ಬಳಿಕ ತಂಡಗಳ ಅಂಕಪಟ್ಟಿ, ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್, ವಿಕೆಟ್ ಪಡೆದಿರುವ ಬೌಲರ್ ಬಗ್ಗೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲವಿರುತ್ತದೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟವನ್ನು ಮೈಖೇಲ್ ಕನ್ನಡ ನಿಮ್ಮ ಮುಂದಿಡುತ್ತಿದೆ. ಇದರಲ್ಲಿ ಈ ಎಲ್ಲಾ ಅಂಶಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿದೆ. ಸಮಗ್ರ ವಿವರಕ್ಕೆ ಕ್ಲಿಕ್ ಮಾಡಿ
ಅಂಕಪಟ್ಟಿ ಅಕ್ಟೋಬರ್ 10ರಂತೆ: ರಾಜಸ್ಥಾನ ವಿರುದ್ಧ ಡೆಲ್ಲಿ ಗೆಲುವು ಸಾಧಿಸಿದ ಬಳಿಕ ಅಗ್ರಸ್ಥಾನಕ್ಕೇರಿದೆ. ಡೆಲ್ಲಿ 6 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು, 10 ಅಂಕ ರನ್ ಸರಾಸರಿ(+ 1.267) ಹೊಂದಿದೆ. 6 ಪಂದ್ಯಗಳಿಂದ 4 ಗೆಲುವು ಸಾಧಿಸಿರುವ ಮುಂಬೈ ರನ್ ಸರಾಸರಿ(+1.488)ಯೊಂದಿಗೆ 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನಕ್ಕೇರಿರುವ ಹೈದರಾಬಾದ್ (+0.232) ರನ್ ಸರಾಸರಿ ಹೊಂದಿದ್ದರೆ, ಕೆಕೆಆರ್ (+0.002) ಹಾಗೂ ಬೆಂಗಳೂರು (-1.355) ಮೊದಲ ಐದು ಸ್ಥಾನಗಳಲ್ಲಿವೆ. ಪೂರ್ಣ ಅಂಕಪಟ್ಟಿ ನೋಡಲು ಕ್ಲಿಕ್ ಮಾಡಿ

ಅತಿ ಹೆಚ್ಚು ರನ್ ಗಳಿಸಿರುವ ಪಂಜಾಬ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ (313ರನ್) ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂದಿದ್ದಾರೆ. ಡೆಲ್ಲಿಯ ವೇಗಿ ಕಾಗಿಸೋ ರಬಾಡಾ (15ವಿಕೆಟ್) ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆರೆಂಜ್, ಪರ್ಪಲ್ ಕ್ಯಾಪ್, ಅತಿ ಹೆಚ್ಚು ಸರಾಸರಿ, ಸ್ಟ್ರೈಕ್ ರೇಟ್, ಶತಕ, ಅರ್ಧಶತಕ, 5 ವಿಕೆಟ್ ಪಡೆದವರು, ಉತ್ತಮ ಮಿತವ್ಯಯಿ ಬೌಲಿಂಗ್ ವಿವರ ಎಲ್ಲವೂ ತಿಳಿಯಲು ಕ್ಲಿಕ್ ಮಾಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications