
ಕ್ರೀಡಾಲೋಕದ ಅತ್ಯಂತ ಶ್ರೀಮಂತ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2020ನಲ್ಲಿ ಅಕ್ಟೋಬರ್ 04ರಂದು ಕಿಂಗ್ಸ್ ಎಲೆವನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ನಂತರ ಅಂಕಪಟ್ಟಿಯಲ್ಲಿ ಏನೇನು ಬದಲಾವಣೆಯಾಗಿದೆ ವಿವರ ಇಲ್ಲಿದೆ..
ಚಾಂಪಿಯನ್ ತಂಡಗಳಾದ ಮುಂಬೈ ಇಂಡಿಯನ್ ಹಾಗೂ ಚೆನ್ನೈ ತಂಡಗಳ ನಡುವಿನ ಕಾಳಗದೊಂದಿಗೆ ಆರಂಭವಾದ ಐಪಿಎಲ್ 2020ರಲ್ಲಿ ಈಗಾಗಲೇ ಅನೇಕ ದಾಖಲೆಗಳು ನುಚ್ಚುನೂರಾಗಿವೆ. ಪ್ರತಿ ಪಂದ್ಯದ ಬಳಿಕ ತಂಡಗಳ ಅಂಕಪಟ್ಟಿ, ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್, ವಿಕೆಟ್ ಪಡೆದಿರುವ ಬೌಲರ್ ಬಗ್ಗೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲವಿರುತ್ತದೆ.
ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟವನ್ನು ಮೈಖೇಲ್ ಕನ್ನಡ ನಿಮ್ಮ ಮುಂದಿಡುತ್ತಿದೆ. ಇದರಲ್ಲಿ ಈ ಎಲ್ಲಾ ಅಂಶಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿದೆ. ಸಮಗ್ರ ವಿವರಕ್ಕೆ ಕ್ಲಿಕ್ ಮಾಡಿ
ಅಂಕಪಟ್ಟಿ ಅಕ್ಟೋಬರ್ 04ರಂತೆ:
ಪಂಜಾಬ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಚೆನ್ನೈ ಕೊನೆ ಸ್ಥಾನದಿಂದ ಮೇಲಕ್ಕೇರಿದೆ. ಪಂಜಾಬ್ 4 ಸೋಲಿನೊಂದಿಗೆ ಕೊನೆ ಸ್ಥಾನಕ್ಕೆ ಕುಸಿದಿದೆ. 5 ಪಂದ್ಯಗಳಿಂದ 3 ಗೆಲುವು ಸಾಧಿಸಿರುವ ಮುಂಬೈ ಉತ್ತಮ ರನ್ ಸರಾಸರಿ(+1.214)ಯೊಂದಿಗೆ ಅಗ್ರಸ್ಥಾನದಲ್ಲಿದೆ. ದೆಹಲಿ, ಬೆಂಗಳೂರು ಹಾಗೂ ಕೋಲ್ಕತ್ತಾ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಪೂರ್ಣ ಅಂಕಪಟ್ಟಿ ನೋಡಲು ಕ್ಲಿಕ್ ಮಾಡಿ

ಅತಿ ಹೆಚ್ಚು ರನ್ ಗಳಿಸಿರುವ ಪಂಜಾಬ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ (302ರನ್) ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂದಿದ್ದಾರೆ. ಆರ್ ಸಿಬಿ ತಂಡ ಬೌಲರ್ ಯಜುವೇಂದ್ರ ಚಾಹಲ್(8 ವಿಕೆಟ್) ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆರೆಂಜ್, ಪರ್ಪಲ್ ಕ್ಯಾಪ್, ಅತಿ ಹೆಚ್ಚು ಸರಾಸರಿ, ಸ್ಟ್ರೈಕ್ ರೇಟ್, ಶತಕ, ಅರ್ಧಶತಕ, 5 ವಿಕೆಟ್ ಪಡೆದವರು, ಉತ್ತಮ ಮಿತವ್ಯಯಿ ಬೌಲಿಂಗ್ ವಿವರ ಎಲ್ಲವೂ ತಿಳಿಯಲು ಕ್ಲಿಕ್ ಮಾಡಿ