
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ 2020ನಲ್ಲಿ ಅಕ್ಟೋಬರ್ 08ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ನಂತರ ಅಂಕಪಟ್ಟಿಯಲ್ಲಿ ಏನೇನು ಬದಲಾವಣೆಯಾಗಿದೆ ವಿವರ ಇಲ್ಲಿದೆ.. ಅಂಕಪಟ್ಟಿಯಲ್ಲಿ ಚಾಂಪಿಯನ್ ತಂಡ ಮುಂಬೈ ಇಂಡಿಯನ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರೆ.
ಕೊಹ್ಲಿ ಪಡೆ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಚೆನ್ನೈ ತಂಡವನ್ನು ಸೋಲಿಸಿದ ಬಳಿಕ ಕೆಕೆಆರ್ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಪ್ರತಿ ಪಂದ್ಯದ ಬಳಿಕ ತಂಡಗಳ ಅಂಕಪಟ್ಟಿ, ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್, ವಿಕೆಟ್ ಪಡೆದಿರುವ ಬೌಲರ್ ಬಗ್ಗೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲವಿರುತ್ತದೆ.
ಅಂಕಪಟ್ಟಿ ಅಕ್ಟೋಬರ್ 08ರಂತೆ:
ಚೆನ್ನೈ ವಿರುದ್ಧ ಕೋಲ್ಕತ್ತಾ ಗೆಲುವು ಸಾಧಿಸಿದ ಬಳಿಕ ಮೂರನೇ ಸ್ಥಾನಕ್ಕೇರಿದೆ. ಪಂಜಾಬ್ 4 ಸೋಲಿನೊಂದಿಗೆ ಕೊನೆ ಸ್ಥಾನದಲ್ಲಿದ್ದರೆ, 6 ಪಂದ್ಯಗಳಿಂದ 4 ಗೆಲುವು ಸಾಧಿಸಿರುವ ಮುಂಬೈ ರನ್ ಸರಾಸರಿ(+1.488)ಯೊಂದಿಗೆ ಅಗ್ರಸ್ಥಾನದಲ್ಲಿದೆ. ದೆಹಲಿ 4 ಜಯ ದಾಖಲಿಸಿದ್ದರೂ ಮುಂಬೈಗಿಂತ ಉತ್ತಮ ರನ್ ಸರಾಸರಿ(+1.060) ಹೊಂದಿಲ್ಲದ ಕಾರಣ 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನಕ್ಕೇರುವ ಕೆಕೆಆರ್ (0.002) ಹಾಗೂ ಬೆಂಗಳೂರು (-1.355) ಹಾಗೂ ಚೆನನಿ(-0.371) ಮೊದಲ ಐದು ಸ್ಥಾನಗಳಲ್ಲಿವೆ. ಪೂರ್ಣ ಅಂಕಪಟ್ಟಿ ನೋಡಲು ಕ್ಲಿಕ್ ಮಾಡಿ

ಅತಿ ಹೆಚ್ಚು ರನ್ ಗಳಿಸಿರುವ ಪಂಜಾಬ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ (302ರನ್) ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮುಂದಿದ್ದಾರೆ. ಡೆಲ್ಲಿಯ ವೇಗಿ ಕಾಗಿಸೋ ರಬಾಡಾ (12 ವಿಕೆಟ್) ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆರೆಂಜ್, ಪರ್ಪಲ್ ಕ್ಯಾಪ್, ಅತಿ ಹೆಚ್ಚು ಸರಾಸರಿ, ಸ್ಟ್ರೈಕ್ ರೇಟ್, ಶತಕ, ಅರ್ಧಶತಕ, 5 ವಿಕೆಟ್ ಪಡೆದವರು, ಉತ್ತಮ ಮಿತವ್ಯಯಿ ಬೌಲಿಂಗ್ ವಿವರ ಎಲ್ಲವೂ ತಿಳಿಯಲು ಕ್ಲಿಕ್ ಮಾಡಿ