ಪ್ರತಿ ನಾಯಕನೂ ಆತನಂತಾ ಬೌಲರ್‌ನನ್ನು ಹೊಂದಲು ಬಯಸುತ್ತಾನೆ: ಸುನಿಲ್ ಗವಾಸ್ಕರ್

ಟಿ20 ಅಂದರೆ ಅದು ಬ್ಯಾಟ್ಸ್‌ಮನ್‌ಗಳ ಆಟ ಎಂಬುದು ಸಾಮಾನ್ಯವಾದ ಅಭಿಪ್ರಾಯ. ಅದಕ್ಕೆ ತಕ್ಕನಾಗಿಯೇ ಬಹುತೇಕ ಪಂದ್ಯಗಳು ನಡೆಯುತ್ತದೆ. ಯುಎಇನಲ್ಲಿ ನಡೆಯುತ್ತಿರುವ ಈ ಬಾರಿಯ ಐಪಿಎಲ್‌ನಲ್ಲಂತೂ ರನ್ ಹೊಳೆಯೇ ಹರಿಯುತ್ತಿದೆ. ಹಾಗಿದ್ದರೂ ಕೆಲ ಬೌಲರ್‌ಗಳು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ದಿಗ್ಗಜ ಕ್ರಿಕೆಟಿಗ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚು ಹರಿಸುತ್ತಿರುವ ಆಟಗಾರನೋರ್ವನ ಬಗ್ಗೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ. ಆತನಂತಾ ಬೌಲಿಂಗ್ ಪ್ರದರ್ಶನವನ್ನು ಬೌಲರ್ ಕಡೆಯಿಂದ ಪ್ರತಿ ನಾಯಕನೂ ಬಯಸುತ್ತಾನೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಹಾಗಾದರೆ ಸುನಿಲ್ ಗವಾಸ್ಕರ್ ಮನ ಗೆದ್ದ ಆ ಬೌಲರ್ ಯಾರು? ಅದೆಂತಾ ವಿಶೇಷತೆಯಿದೆ ಆತನ ಬೌಲಿಂಗ್‌ನಲ್ಲಿ.. ಮುಂದೆ ಓದಿ..

ಕೆಲ ಬೌಲರ್‌ಗಳ ಗಮನಾರ್ಹ ಪ್ರದರ್ಶನ
ಬ್ಯಾಟ್ಸ್‌ಮನ್‌ಗಳ ಅಬ್ಬರದಾಟದ ಮಧ್ಯೆಯೂ ಈ ಬಾರಿಯ ಐಪಿಎಲ್‌ನಲ್ಲಿ ಕೆಲ ಯುವ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಟಿ ನಟರಾಜನ್, ರಾಹುಲ್ ತೆವಾಟಿಯಾ ಹಾಗೂ ರವಿ ಬಿಷ್ಣೋಯ್ ಪ್ರದರ್ಶನ ಕ್ರಿಕೆಟ್ ಅಬಿಮಾನಿಗಳನ್ನು ತಮ್ಮತ್ತ ಸೆಳೆಯುವಂತೆ ಮಾಡಿದೆ. ಆದರೆ ಗವಾಸ್ಕರ್ ಹೇಳಿದ್ದು ಈ ಬೌಲರ್‌ಗಳ ಬಗ್ಗೆ ಅಲ್ಲ.

ರಶೀದ್ ಖಾನ್ ಬಗ್ಗೆ ಹೊಗಳಿದ ಗವಾಸ್ಕರ್
ಹೌದು, ಸುನಿಲ್ ಗವಾಸ್ಕರ್ ಮನದುಂಬಿ ಪ್ರಶಂಸಿಸಿದ ಬೌಲರ್ ಬೇರೆ ಯಾರೂ ಅಲ್ಲ, ಅದು ರಶೀದ್ ಖಾನ್. ನಟರಾಜನ್, ಬಿಷ್ಣೋಯ್, ತೆವಾಟಿಯಾ ಉತ್ತಮ ಬೌಲಿಂಗ್ ಪ್ರದರ್ಶನ ನಿಡುತ್ತಿದ್ದರೂ ಅಪ್ಘಾನಿಸ್ಥಾನದ ಸ್ಪಿನ್ ಬೌಲರ್ ಸಮನಾಗಿ ಪ್ರದರ್ಶನ ನೀಡುವುದು ಕಷ್ಟ ಸಾಧ್ಯ. ಗುರುವಾರ ರಾತ್ರಿ ನಡೆದ ಪಂದ್ಯದಲ್ಲೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 12 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದ್ದರು. ಈ ಮೂಲಕ ಸನ್‌ರೈಸರ್ಸ್ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು.

ಎಲ್ಲಾ ನಾಯಕರು ಬಯಸುವುದು ಇದನ್ನೇ
ರಶೀದ್ ಆನ್ ಪ್ರದರ್ಶನದ ಬಗ್ಗೆ ಸುನಿಲ್ ಗವಾಸ್ಕರ್ ಮಾತನಾಡುತ್ತಾ ಐಪಿಎಲ್‌ನಲ್ಲಿ ಎಲ್ಲಾ ತಂಡದ ನಾಯಕರೂ ಕೂಡ ಈ ರೀತಿಯ ಪ್ರದರ್ಶನವನ್ನು ಬಯಸುತ್ತಾರೆ ಎಂದಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ರಶೀದ್ ಖಾನ್ ಅಪರೂಪದ ಆಟಗಾರ. ಇದು ಆತನನ್ನು ಐಪಿಎಲ್‌ನಲ್ಲಿ ಹೆಚ್ಚು ಬೇಡಿಕೆಯ ಬೌಲರ್‌ನನ್ನಾಗಿ ಮಾಡುತ್ತದೆ ಎಂದಿದ್ದಾರೆ.

"ಪ್ರತಿ ನಾಯಕರಲ್ಲೂ ಕೇಳಿ ನೋಡಿ"
ರಶೀದ್ ಖಾನ್ ಬಗ್ಗೆ ಗವಾಸ್ಕರ್ ಮುಂದುವರಿದು "ಎಲ್ಲಾ ಫ್ರಾಂಚೈಸಿಗಳ ನಾಯಕರಲ್ಲಿ ಯಾವ ಬೌಲರ್ಅನ್ನು ನೀವು ತಂಡದಲ್ಲಿ ಬಯಸುತ್ತಿದ್ದೀರಿ ಎಂದು ಕೇಳಿ ನೋಡಿ. ನನಗೆ ಖಂಡಿತಾ ಗೊತ್ತಿದೆ ಪ್ರತಿಯೊಬ್ಬರೂ ಕೂಡ ನಮಗೆ ರಶೀದ್ ಖಾನ್ ಆವರನ್ನು ನೀಡಿ ಎಂದೇ ಪ್ರತಿಕ್ರಿಯಿಸುತ್ತಾರೆ. ಇದರಿಂದ ಕೆಲ ಬೌಲರ್‌ಗಳಿಗೆ ನೋವುಂಟಾಗಬಹುದು. ಆದರೆ ಆತ ನಿರ್ವಹಿಸುತ್ತಿರುವ ಕಾರ್ಯವನ್ನು ನೋಡಿ" ಎಂದು ಗವಾಸ್ಕರ್ ಉತ್ತರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications