ಐಪಿಎಲ್: ಶಂಕೆಯ ಆ್ಯಕ್ಷನ್ ಬಳಿಕ ಸುನಿಲ್ ನರೈನ್ ಕಠಿಣಾಭ್ಯಾಸ

ದುಬೈ: 2014ರಲ್ಲಿ ಸುನಿಲ್ ನರೈನ್ ಬೌಲಿಂಗ್ ಆ್ಯಕ್ಷನ್ ಸರಿಯಿಲ್ಲ ಎಂಬ ದೂರು ಕೇಳಿ ಬಂದಾಗ ನರೈನ್ ಬೌಲಿಂಗ್ ಆ್ಯಕ್ಷನ್ ಸರಿಪಡಿಸುವುದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಇಂಗ್ಲೆಂಡ್ ಆಟಗಾರ ಕಾರ್ಲ್ ಕ್ರೋವ್ ಅವರನ್ನು ಕರೆತರಲಾಗಿತ್ತು. ಇದೀಗ ಮತ್ತೆ ಸುನಿಲ್ ಅನುಮಾನಾಸ್ಪದ ಬೌಲಿಂಗ್‌ಗಾಗಿ ಸುದ್ದಿಯಲ್ಲಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಸುನಿಲ್ ನರೈನ್ ಬೌಲಿಂಗ್ ಶೈಲಿಯ ಬಗ್ಗೆ ಆನ್ ಫೀಲ್ಡ್ ಅಂಪೈರ್‌ಗಳು ದೂರು ನೀಡಿದ್ದರು. ಹೀಗಾಗಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇನ್ನುಳಿದ ಪಂದ್ಯಗಳಿಂದ ಸುನಿಲ್ ಹೊರಗಿದ್ದಾರೆ. ಕಾರ್ಲ್ ಕ್ರೋವ್ ಜೊತೆಗೆ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಮೂಲವೊಂದು, ಬೌಲಿಂಗ್ ಆ್ಯಕ್ಷನ್ ಸರಿ ಮಾಡಿಕೊಳ್ಳುವುದಕ್ಕಾಗಿ ಸುನಿಲ್ ನರೈನ್ ಮತ್ತು ಕಾರ್ಲ್ ಕ್ರೋವ್ ಕಳೆದ ಕೆಲ ದಿನಗಳಿಂದಲೂ ಅವಿರತ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದೆ. ಮಿಸ್ಟ್ರಿ ಸ್ಪಿನ್ನರ್ ನರೈನ್ ಅವರನ್ನು ಕೆಕೆಆರ್‌ಗೆ ಶೀಘ್ರ ಕರೆತರಲು ಪ್ರಯತ್ನಗಳಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಎಸೆದಿದ್ದ ನರೈನ್ 28 ರನ್‌ಗೆ 2 ವಿಕೆಟ್ ಉರುಳಿಸಿದ್ದರು. ಆ ಪಂದ್ಯದಲ್ಲಿ ಕೋಲ್ಕತ್ತಾ 2 ರನ್‌ನಿಂದ ಗೆದ್ದಿತ್ತು. ಆದರೆ ಅದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸುನಿಲ್ ಆಡಿರಲಿಲ್ಲ. ಕೆಕೆಆರ್ ಅದರಲ್ಲಿ ಸೋತಿತ್ತು. ಇನ್ನು ಅಕ್ಟೋಬರ್ 16ರಂದು ಕೆಕೆಆರ್ ಮತ್ತು ಎಂಐ ತಂಡಗಳು ಸ್ಪರ್ಧಿಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications