ಐಪಿಎಲ್ ಇತಿಹಾಸದ ಸೂಪರ್ ಓವರ್ ಪಂದ್ಯಗಳಲ್ಲಿ ಸೋತು-ಗೆದ್ದವರ ಪಟ್ಟಿ

ಬೆಂಗಳೂರು: ಭಾರತದ ನಗದು ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 2ನೇ ಮತ್ತು 10ನೇ ಪಂದ್ಯ ಅತೀ ರೋಚಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಮತ್ತು ಇದೇ ಸ್ಟೇಡಿಯಂನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಣಾಹಣಿ ಸಮಬಲಗೊಂಡು ಸೂಪರ್ ಓವರ್‌ನತ್ತ ಸಾಗಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಮಾರ್ಕಸ್ ಸ್ಟೋಯ್ನಿಸ್ ಅದ್ಭುತ ಬ್ಯಾಟಿಂಗ್‌ನೊಂದಿಗೆ (21 ಎಸತಕ್ಕೆ 53 ರನ್) ಮತ್ತು ಶ್ರೇಯಸ್ ಐಯ್ಯರ್ 39, ರಿಷಭ್ ಪಂತ್ 31 ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 157 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್, ಮಯಾಂಕ್ ಅಗರ್ವಾಲ್ 89 (60 ಎಸತ) ರನ್‌ನೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 157 ರನ್ ಬಾರಿಸಿ ಪಂದ್ಯ ಸರಿದೂಗಿಸಿತ್ತು. ಸೂಪರ್ ಓವರ್‌ನಲ್ಲಿ ಕೆXIಪಿ 2 ರನ್ ಬಾರಿಸಿದ್ದರಿಂದ ಡೆಲ್ಲಿ 3 ರನ್ ಬಾರಿಸಿ ಪಂದ್ಯ ಗೆದ್ದಿತು.
ಅಂದ್ಹಾಗೆ ಸೆಪ್ಟೆಂಬರ್ 28ರ ಸೋಮವಾರ ನಡೆದಿದ್ದು (ಎಂಐ vs ಆರ್‌ಸಿಬಿ) ಐಪಿಎಲ್ ಇತಿಹಾಸದ 11ನೇ ಸೂಪರ್ ಓವರ್ ಪಂದ್ಯ. ಈವರೆಗೆ ಐಪಿಎಲ್‌ನಲ್ಲಿ ಸೂಪರ್ ಓವರ್ ಪಂದ್ಯಗಳಲ್ಲಿ ಸೋತು-ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ.

ಹೆಚ್ಚು ಬಾರಿ ಗೆದ್ದ ತಂಡಗಳು
ಸೂಪರ್ ಓವರ್ ಹಣಾಹಣಿಯಲ್ಲಿ ಅತೀ ಹೆಚ್ಚು ಬಾರಿ ಗೆದ್ದ ತಂಡಗಳೆಂದರೆ ರಾಜಸ್ಥಾನ್ ರಾಯಲ್ಸ್ (2 ಬಾರಿ), ಕಿಂಗ್ಸ್ ಇಲೆವೆನ್ ಪಂಜಾಬ್ (2), ಮುಂಬೈ ಇಂಡಿಯನ್ಸ್ (2), ಡೆಲ್ಲಿ ಕ್ಯಾಪಿಟಲ್ಸ್ (2), ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ 2ಬಾರಿ ಗೆದ್ದಿದೆ.

ಐಪಿಎಲ್‌ನಲ್ಲಿ ಸೂಪರ್ ಓವರ್ ಪಂದ್ಯಗಳು
* ರಾಜಸ್ಥಾನ್ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, 2009, ಕೇಪ್ ಟೌನ್-ಆರ್‌ಆರ್‌ಗೆ ಜಯ
* ಕಿಂಗ್ಸ್ ಇಲೆವೆನ್ ಪಂಜಾಬ್ vs ಚೆನ್ನೈ ಸೂಪರ್ ಕಿಂಗ್ಸ್, 2010, ಚೆನ್ನೈ-ಕೆXIಪಿಗೆ ಗೆಲುವು
* ಸನ್ ರೈಸರ್ಸ್ ಹೈದರಾಬಾದ್ vs ಆರ್‌ಸಿಬಿ, 2013, ಹೈದರಾಬಾದ್-ಎಸ್‌ಆರ್‌ಎಚ್‌ಗೆ ಜಯ

ಬೆಂಗಳೂರು vs ಡೆಲ್ಲಿ
* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಡೇರ್ಡೆವಿಲ್ಸ್, 2013, ಬೆಂಗಳೂರು-ಆರ್‌ಸಿಬಿಗೆ ಗೆಲುವು
* ರಾಜಸ್ಥಾನ್ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, 2014, ಅಬುಧಾಬಿ-ಆರ್‌ಆರ್‌ಗೆ ಜಯ
* ಕಿಂಗ್ಸ್ XI ಪಂಜಾಬ್ vs ರಾಜಸ್ಥಾನ್ ರಾಯಲ್ಸ್, 2015, ಅಹ್ಮದಾಬಾದ್-ಕೆXIಪಿಗೆ ಗೆಲುವು

ಮುಂಬೈ vs ಗುಜರಾಜ್
* ಮುಂಬೈ ಇಂಡಿಯನ್ಸ್ vs ಗುಜರಾತ್ ಲಯನ್ಸ್, 2017, ರಾಜ್‌ಕೋಟ್, ಎಂಐಗೆ ಜಯ
* ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, 2019, ಡೆಲ್ಲಿ-ಡಿಸಿ ಗೆಲುವು
* ಮುಂಬೈ ಇಂಡಿಯನ್ಸ್ vs ಸನ್‌ರೈಸರ್ಸ್ ಹೈದರಾಬಾದ್, 2019-ಮುಂಬೈ-ಎಂಐಗೆ ಜಯ
* ಡೆಲ್ಲಿ ಕ್ಯಾಪಿಟಲ್ಸ್ vs ಕಿಂಗ್ಸ್ ಇಲೆವೆನ್ ಪಂಜಾಬ್, 2020, ಅಬುಧಾಬಿ-ಡಿಸಿಗೆ ಗೆಲುವು
*ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 2020, ದುಬೈ, ಆರ್‌ಸಿಬಿ ಜಯಭೇರಿ
* ಸನ್ ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್, 2020, ಅಬುಧಾಬಿ-ಕೆಕೆಆರ್‌ಗೆ ಗೆಲುವು
* ಮುಂಬೈ ಇಂಡಿಯನ್ಸ್ vs ಕಿಂಗ್ಸ್ XI ಪಂಜಾಬ್, 2020, ದುಬೈ-ಕೆXIಪಿಗೆ ಜಯ (ಎರಡು ಸೂಪರ್ ಓವರ್‌ಗಳು)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications